ETV Bharat / entertainment

ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ: ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ - ಟಗರು ಪಲ್ಯ

ಉಮೇಶ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಸಿನಿಮಾ ಇದೀಗ ಮುಹೂರ್ತ ನೆರವೇರಿಸಿಕೊಂಡಿದೆ. ಟಗರು ಪಲ್ಯ ಸಿನಿಮಾವನ್ನು ಉಮೇಶ್. ಕೆ. ಕೃಪ ನಿರ್ದೇಶಿಸುತ್ತಿದ್ದು, ವಾಸುಕಿ ವೈಭವ್ ಅವರ ಸಂಗೀತವಿದೆ.

Third movie produced by Dolly Pictures
ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ
author img

By

Published : Nov 30, 2022, 7:49 PM IST

ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ 'ಟಗರು ಪಲ್ಯ'. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. 'ಹನಿಮೂನ್​' ವೆಬ್​ ಸಿರೀಸ್​ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಬುಧವಾರ ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.

ಡಾಲಿ ಧನಂಜಯ್ ಮಾತನಾಡಿ, ಡಾಲಿ ಪಿಕ್ಚರ್ಸ್ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲಾಗುತ್ತೆ ಎಂದು ನಾನು ಹಿಂದೆಯೇ ಹೇಳಿದ್ದೆ. ಉಮೇಶ್ ಕೆ ಕೃಪ ‘ಟಗರು ಪಲ್ಯ’ ಕಥೆ ಹೇಳಿದಾಗ ತುಂಬಾ ಖುಷಿ ಆಯ್ತು. ಅದ್ಭುತವಾದ ರೈಟರ್. ಸೆಟ್ ಹುಡುಗ ಆಗಿ ಕೆಲಸ ಆರಂಭಿಸಿ, ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಈಗ ನಿರ್ದೇಶಕನಾಗುತ್ತಿದ್ದಾರೆ.

ಬಡ ಕುಟುಂಬದಿಂದ ಬಂದು ನಿರ್ದೇಶಕನಾಗುತ್ತಿದ್ದಾರೆ. ಚಿತ್ರರಂಗಕ್ಕೆ ಒಳ್ಳೆ ಗಿಫ್ಟ್ ಆಗೋ ಎಲ್ಲ ಲಕ್ಷಣಗಳು ಅವರಲ್ಲಿದೆ. ನಮ್ಮ ಬ್ಯಾನರ್​ನಿಂದ ಒಳ್ಳೆಯ ನಿರ್ದೇಶಕರು ಬರಲಿ ಎಂದು ಈ ಸಿನಿಮಾ ಆರಂಭಿಸಿದ್ವಿ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Third movie produced by Dolly Pictures
ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ

ಧನಂಜಯ್​ ಏನ್​ ಹೇಳಿದ್ರು?: ಇಡೀ ಕಥೆ ಮಂಡ್ಯದ ಹಳ್ಳಿಯಲ್ಲಿ ನಡೆಯುವ ಆಚರಣೆ ಸುತ್ತ ನಡೆಯುವ ಕಥಾಹಂದರ ಒಳಗೊಂಡಿದೆ. ಎಮೋಶನಲ್ ಎಂಟಟೈನ್ಮೆಂಟ್ ಸಿನಿಮಾವಿದು. ನಾಗಭೂಷಣ್ ಈಗಾಗಲೇ ಇಕ್ಕಟ್, ಹನಿಮೂನ್, ಬಡವ ರಾಸ್ಕಲ್ ಸಿನಿಮಾದಲ್ಲಿ ತಮ್ಮ ಪ್ರತಿಭೆ ಪ್ರೂವ್ ಮಾಡಿದ್ದಾರೆ. ಪ್ರೇಮ್ ಸರ್ ಮಗಳನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡುತ್ತಿದ್ದೇವೆ. ತುಂಬಾ ದೊಡ್ಡ ಜವಾಬ್ದಾರಿ ಇದು. ಕನ್ನಡ ಚಿತ್ರರಂಗದ ಮಹಾಲಕ್ಷ್ಮಿ ಆಗಿ ಅಮೃತಾ ಬೆಳಗಲಿ ಎಂದು ಧನಂಜಯ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ನೆನಪಿರಲಿ ಪ್ರೇಮ್ ಮಾತನಾಡಿ, ನನ್ನ ಮಗಳಿಗೆ ಒಳ್ಳೆ ಕಥೆ ಬಂದಿದೆ. ಸಿನಿಮಾದಲ್ಲಿ ಆ್ಯಕ್ಟ್​​ ಮಾಡ್ತಿಯ ಎಂದು ಕೇಳಿದೆ. ಇಷ್ಟು ದಿನ ಮಾಡಲ್ಲ ಅಂತಿದ್ದವಳು, ಒಂದೇ ಸರಿ ಒಕೆ ಅಂದ್ಲು. ಕಥೆ ಓದಿದೆ ನನಗೂ ಹಾಗೂ ಮಗಳಿಗೂ ತುಂಬಾ ಇಷ್ಟವಾಯ್ತು ಒಕೆ ಅಂದ್ವಿ. ಡಾಲಿ ಪ್ರೊಡಕ್ಷನ್ ಮಾಡ್ತಿದ್ದಾನೆ ಎಂದು ಗೊತ್ತಾಗಿ ತುಂಬಾ ಖುಷಿ ಆಯ್ತು. ಇಲ್ಲಿವರೆಗೆ ನಮ್ಮನ್ನು ಬೆಳೆಸಿದ್ದೀರಾ?. ನನ್ನ ಮಗಳಿಗೂ ಪ್ರೋತ್ಸಾಹ ನೀಡಿ ಎಂದು ಪ್ರೇಮ್ ಸಂತಸ ಹಂಚಿಕೊಂಡ್ರು.

ಸಂತಸ ಹಂಚಿಕೊಂಡ ಅಮೃತಾ ಪ್ರೇಮ್​: ಇದು ನನಗೆ ದೊಡ್ಡ ಜವಾಬ್ದಾರಿ ಖಂಡಿತಾ ನಾನು ಪ್ರೂವ್ ಮಾಡ್ತೇನೆ. ಕಥೆ ಹಾಗೂ ಇದ್ರಲ್ಲಿರೋ ಮೆಸೇಜ್ ತುಂಬಾ ಇಷ್ಟ ಆಯ್ತು, ಹಾಗಾಗಿ ಒಪ್ಪಿಕೊಂಡೆ. ಅವಕಾಶ ಕೊಟ್ಟಿದ್ದಕ್ಕೆ ಧನಂಜಯ್ ಸರ್​ಗೆ ಧನ್ಯವಾದಗಳು. ಆ್ಯಕ್ಟಿಂಗ್ ಫೀಲ್ಡ್​ಗೆ ಬರ್ತಿನಿ ಅಂತ ಯೋಚನೆ ಮಾಡಿರಲಿಲ್ಲ. ಈ ಸಿನಿಮಾ ಕಥೆ ಬಂದಾಗ ಅಪ್ಪ ನನಗೆ ಒಂದೇ ಮಾತು ಹೇಳಿದ್ದು ಕಲಿಬೇಕು ಅಂತ ಇಂಟ್ರಸ್ಟ್ ಇದ್ದರೆ ಯಾವುದು ಬೇಕಾದ್ರು ಸಾಧ್ಯ ಎಂದು ಆದ್ರಿಂದ ಒಪ್ಪಿಕೊಂಡೆ. ಖಂಡಿತಾ ನನ್ನ ಬೆಸ್ಟ್ ಈ ಸಿನಿಮಾಗೆ ನೀಡುತ್ತೇನೆ ಎಂದು ಅಮೃತಾ ಪ್ರೇಮ್ ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

Third movie produced by Dolly Pictures
ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ

ನಾಯಕ ನಾಗಭೂಷಣ್ ಮಾತನಾಡಿ, ನನ್ನ ಊರ ಹೆಸರು ಟಗರು ಪುರ ಎಂದು ಕಾಕತಾಳೀಯವೇನೋ ಎಂಬಂತೆ ನನ್ನ ಸಿನಿಮಾ ಹೆಸರು ಟಗರು ಪಲ್ಯ ಎಂದು ತುಂಬಾ ಖುಷಿ ಆಯ್ತು. ಈ ಕಾಲಘಟ್ಟಕ್ಕೆ ‘ಟಗರು ಪಲ್ಯ’ ತುಂಬಾ ರಿಲೆವೆಂಟ್ ಆಗಿದೆ. ಹಳ್ಳಿಯಲ್ಲಿ ಇರುವ ನಂಬಿಕೆ, ಆಚರಣೆ ಸುತ್ತ ನಡೆಯೋ ಕಥೆ ಇದು. ಈ ಸಿನಿಮಾ ಭಾಗವಾಗಿರೋದು ತುಂಬಾ ಖುಷಿ ಇದೆ ಎಂದರು.

ಇದನ್ನೂ ಓದಿ: ಬೊಂಬಾಟ್ ಆಗಿದೆ ಅಭಿಷೇಕ್ ಅಂಬರೀಷ್ ಅಭಿನಯದ ಕಾಳಿ ಚಿತ್ರದ ಮೇಕಿಂಗ್

ಇದು ನನ್ನ ಮೊದಲ ಸಿನಿಮಾ. ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ಲವ್ ಲಿ ಸ್ಟಾರ್ ಪ್ರೇಮ್ ಪುತ್ರಿ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಎಂದು ನಿರ್ದೇಶಕ ಉಮೇಶ್ ಕೆ ಕೃಪ ತಿಳಿಸಿದ್ದಾರೆ.

ಟಗರು ಪಲ್ಯಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನವಿದೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು ಒಳಗೊಂಡ ದೊಡ್ಡ ತಾರಾ ಬಳಗ ಸಿನಿಮಾದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.