ETV Bharat / entertainment

ಹಿರಿಯ ರಂಗಭೂಮಿ ಕಲಾವಿದ ಅಮೀರ್ ರಾಜಾ ಹುಸೇನ್ ಇನ್ನಿಲ್ಲ - Theater artist Amir Raja Hussain

ರಂಗಭೂಮಿ ಕಲಾವಿದ, ನಿರ್ದೇಶಕ ಅಮೀರ್ ರಾಜಾ ಹುಸೇನ್ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ನಿಧನರಾಗಿದ್ದಾರೆ.

Amir Raja Hussain death
ಅಮೀರ್ ರಾಜಾ ಹುಸೇನ್ ನಿಧನ
author img

By

Published : Jun 4, 2023, 10:49 AM IST

ರಂಗಭೂಮಿ ಮತ್ತು ಭಾರತೀಯ ಚಿತ್ರರಂಗದಲ್ಲಿ ನಿರ್ದೇಶನ, ನಟನಾ ಕೌಶಲ್ಯದಿಂದ ಅಪಾರ ಮೆಚ್ಚುಗೆ ಗಳಿಸಿರುವ ಹಿರಿಯ ಕಲಾವಿದ ಅಮೀರ್ ರಾಜಾ ಹುಸೇನ್ ಇಹಲೋಕ ತ್ಯಜಿಸಿದ್ದಾರೆ. ಜೂನ್ 3ರ ಶನಿವಾರ ತಮ್ಮ 66ರ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಮೇರು ನಟನ ನಿಧನದ ಸುದ್ದಿ ಚಿತ್ರರಂಗದ ಮತ್ತು ಅಭಿಮಾನಿಗಳಿಗೆ ಆಘಾತ, ದುಃಖ ಉಂಟುಮಾಡಿದೆ.

ಅಮೀರ್ ರಜಾ ಹುಸೇನ್ ಅತ್ಯುತ್ತಮ ನಟ ಮತ್ತು ನಿರ್ಮಾಪಕ, ರಂಗಭೂಮಿ ಕಲಾವಿದ. ತಮ್ಮ ಜೀವನದಲ್ಲಿ ಎರಡು ಪ್ರಮುಖ ಯೋಜನೆಗಳ ಮೂಲಕ ಮಾಡಿ ಗಮನ ಸೆಳೆದಿದ್ದರು. ಆ ಎರಡೂ ಕಥೆಗಳು ಇಂದಿಗೂ ಸುದ್ದಿಯಲ್ಲಿವೆ. 'ದಿ ಫಿಫ್ಟಿ ಡೇ ವಾರ್' ಇದು ಕಾರ್ಗಿಲ್ ಕಥೆ ಆಧರಿಸಿದ್ದರೆ, ರಾಮಾಯಣ ಮಹಾಕಾವ್ಯ ಆಧರಿಸಿದ 'ದಿ ಲೆಜೆಂಡ್ ಆಫ್ ರಾಮ' ನಿರ್ಮಿಸಿ ಖ್ಯಾತಿ ಗಳಿಸಿದ್ದರು. ಇದು ಹೊರಾಂಗಣ ವೇದಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ಕಥೆಗಳಾಗಿವೆ.

'ದಿ ಲೆಜೆಂಡ್ ಆಫ್ ರಾಮ' ಮೂರು ಎಕರೆಗಳಲ್ಲಿ 19 ಹೊರಾಂಗಣ ಸೆಟ್‌ಗಳನ್ನು ಹೊಂದಿತ್ತು. ಮಹಾಕಾವ್ಯ ಆಧರಿಸಿದ ಈ ನಾಟಕದಲ್ಲಿ ವಿವಿಧ ಪಾತ್ರಗಳನ್ನು ಸುಮಾರು 35 ನಟರು ನಿರ್ವಹಿಸಿದ್ದರು. 100 ತಾಂತ್ರಿಕ ಸಿಬ್ಬಂದಿ ಪಾಲ್ಗೊಂಡಿದ್ದರು. ಇವರ ಕೊನೆಯ ಕಾರ್ಯಕ್ರಮ ಅಂದಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕುರಿತಾಗಿದ್ದು, 2004ರ ಮೇ. 1 ರಂದು ಪ್ರಸ್ತುತಪಡಿಸಲಾಗಿತ್ತು.

ಇದರ ಹೊರತಾಗಿ, 'ಕಿಮ್' (1984) ಚಿತ್ರದಲ್ಲಿ ಕಾಣಿಸಿಕೊಂಡರು. ಕಿಮ್​​ ಚಿತ್ರ ಅಮೀರ್ ರಜಾ ರುಡ್ಯಾರ್ಡ್ ಕಿಪ್ಲಿಂಗ್ ಅವರ ಕಾದಂಬರಿ ಆಧರಿಸಿದೆ. ಇದರಲ್ಲಿ ಪೀಟರ್ ಒಟೂಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಶಶಾಂಕ್ ಘೋಷ್ ಅವರ ರೊಮ್ಯಾಂಟಿಕ್ ಹಾಸ್ಯ ನಾಟಕ ಖುಬ್ಸೂರತ್ (2014) ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಮ್ ಕಪೂರ್ ಮತ್ತು ಫವಾದ್ ಖಾನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಮುಂಬರುವ 'ಆದಿಪುರುಷ್' ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ರಜಾ ಹುಸೇನ್ ಅವರಿಗೆ ಭಾರತ ಸರ್ಕಾರವು 2001ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ: ಸಾಂಪ್ರದಾಯಿಕ ನೋಟಕ್ಕೂ ಸೈ ಎಂದ ಸ್ಯಾಂಡಲ್​ವುಡ್ ಗ್ಲ್ಯಾಮರ್ ಗೊಂಬೆ ಪ್ರಣಿತಾ ಸುಭಾಷ್ - ನಿಮಗ್ಯಾವ ನೋಟ ಇಷ್ಟ?!

1957 ಜನವರಿ 6ರಂದು ಲಕ್ನೋದ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಅಮೀರ್ ರಜಾ ಹುಸೇನ್ ಕೆಲ ಸಮಯದ ನಂತರ ದೆಹಲಿಗೆ ಸ್ಥಳಾಂತರಗೊಂಡರು. ಕಾಲೇಜು ದಿನಗಳಲ್ಲಿ ಇತಿಹಾಸವನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡು ವಿದ್ಯಾಭ್ಯಾಸ ಪಡೆದರು. ಶಾಲಾ ಕಾಲೇಜು ದಿನಗಳಲ್ಲಿ ಹಲವು ನಾಟಕಗಳಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದರು. ಕೆಲ ನಿರ್ದೇಶಕರುಗಳೊಂದಿಗೂ ಕೆಲಸ ಮಾಡಿದ್ದಾರೆ. ಕೆಲವು ಕಾಲ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಬಿಜೆಪಿಯ ಸದಸ್ಯರಾಗಿ ಕೆಲಸ ಮಾಡಿದ್ದರು. ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದರು. ಜುಲೈ 2013ರಲ್ಲಿ ಪಕ್ಷ ತೊರೆದಿದ್ದರು.

ಇದನ್ನೂ ಓದಿ: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟನೆಯ "ಮತ್ತೆ ಮದುವೆ" ಸಿನಿಮಾ ಜೂ. 9ಕ್ಕೆ ತೆರೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.