ETV Bharat / entertainment

ಕನ್ನಡದಲ್ಲೂ ಬರ್ತಿದೆ 'ದಿ ಲೆಜೆಂಡ್' ಸಿನಿಮಾ.. ಪ್ರಖ್ಯಾತ ಉದ್ಯಮಿ ಈಗ ಪ್ಯಾನ್ ಇಂಡಿಯಾ ಸ್ಟಾರ್ - The Legend cinema Dubbed to kannada

ಸಿನಿಮಾ ಮಾಡಬೇಕು ಎಂಬ ಕನಸ್ಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲ ಸೆಟಲ್ಡ್ ಆದ ಮೇಲೆ ಸಿನಿಮಾ ಮಾಡಿದ್ದೇನೆ ಎಂದು ನಾಯಕ ಸರವಣನ್ ತಿಳಿಸಿದ್ದಾರೆ.

ನಾಯಕ ಸರವಣನ್, ಊರ್ವಶಿ ರೌಟೇಲ, ರೈ ಲಕ್ಷ್ಮಿ
ನಾಯಕ ಸರವಣನ್, ಊರ್ವಶಿ ರೌಟೇಲ, ರೈ ಲಕ್ಷ್ಮಿ
author img

By

Published : Jul 26, 2022, 7:25 PM IST

ಪರಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಬಿಡುಗಡೆ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿವೆ. ಈ ಸಾಲಿನಲ್ಲಿ 'ದಿ ಲೆಜೆಂಡ್' ಎಂಬ ಸಿನಿಮಾ ಕೂಡ ಒಂದು. ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ದಿ ಲೆಜೆಂಡ್ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ನಾಯಕ ಸರವಣನ್, ಊರ್ವಶಿ ರೌಟೇಲ, ರೈ ಲಕ್ಷ್ಮಿ
ನಾಯಕ ಸರವಣನ್, ಊರ್ವಶಿ ರೌಟೇಲ, ರೈ ಲಕ್ಷ್ಮಿ

ಇದೇ ತಿಂಗಳ 28ರಂದು ಸಿನಿಮಾ ರಿಲೀಸ್ ಆಗ್ತಿದ್ದು, ವರ್ಲ್ಡ್ ವೈಡ್ ಅದ್ಧೂರಿಯಾಗಿ ಪ್ರಚಾರ ನಡೆಸಿರುವ ಸರವಣನ್ ಅಂಡ್ ಟೀಂ ಬೆಂಗಳೂರಿನಲ್ಲಿಯೂ ಪ್ರಚಾರ ಕಹಳೆ ಮೊಳಗಿಸಿದ್ದಾರೆ. ಸಿಲಿಕಾನ್ ಸಿಟಿಗೆ ಬಂದಿಳಿದ ಚಿತ್ರದ ನಾಯಕ ಸರವಣನ್, ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲ, ರೈ ಲಕ್ಷ್ಮಿ ಮಾಧ್ಯಮಗಳೊಂದಿಗೆ ಮಾತನಾಡಿ ಸಿನಿಮಾದ ಬಗ್ಗೆ ಒಂದಷ್ಟು ಅನುಭವ ಹಂಚಿಕೊಂಡಿದ್ದಾರೆ.

ನಾಯಕ ಸರವಣನ್ ಮಾತನಾಡಿ, ಸಿನಿಮಾ ಮಾಡಬೇಕು ಎಂಬ ಕನಸ್ಸು ಚಿಕ್ಕ ವಯಸ್ಸಿನಿಂದ ಇತ್ತು. ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಇತ್ತು. ಎಲ್ಲಾ ಸೆಟಲ್ಡ್ ಆದ ಮೇಲೆ ಸಿನಿಮಾ ಮಾಡಿದ್ದೇನೆ. ಕಳೆದ ಹದಿನೈದು ವರ್ಷದಿಂದ ನಿರ್ದೇಶಕ ಜೆ. ಡಿ ಜೆರ್ರಿ ನನ್ನ ಜೊತೆ ಇದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ನಟಿ ಊರ್ವಶಿ ರೌಟೇಲ
ನಟಿ ಊರ್ವಶಿ ರೌಟೇಲ

ಈ ಬುಸಿನೆಸ್ ಮ್ಯಾನ್ ಸರವಣನ್ ಜೋಡಿಯಾಗಿ ಊರ್ವಶಿ ರೌಟೇಲಾ ಹಾಗೂ ಲಕ್ಷ್ಮೀ ರೈ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೇಲರ್ ಹಾಗೂ ಹಾಡುಗಳ ಮೂಲಕ ಸದ್ದು ಮಾಡ್ತಿರುವ ದಿ ಲೆಜೆಂಡ್ ಸಿನಿಮಾಗೆ ಜೆ. ಡಿ ಜೆರ್ರಿ ಆ್ಯಕ್ಷನ್ ಕಟ್ ಹೇಳಿದ್ದು, ಊರ್ವಶಿ ರೌಟೇಲಾ ಈ ಸಿನಿಮಾ ಮೂಲಕ ಮೊದಲ ಬಾರಿಗೆ ತಮಿಳು ಚಿತ್ರರಂಗ ಪ್ರವೇಶ ಮಾಡಿದ್ದು, ಸರವಣನ್​ಗೆ ಜೋಡಿಯಾಗಿ ನಟಿಸಿದ್ದಾರೆ.

ನಸ್ಸಾರ್, ಪ್ರಭು, ಸುಮನ್, ವಿವೇಕ್, ಇಮ್ಮನ್ ಅಣ್ಣಾಚಿ, ಯಶಿಕಾ ಆನಂದ್ ಸೇರಿದಂತೆ ಹಲವರು ತಾರಾಬಳಗ ಚಿತ್ರದಲ್ಲಿದ್ದಾರೆ. ಹ್ಯಾರೀಸ್ ಜಯರಾಜ್ ಮ್ಯೂಸಿಕ್ ಸಿನಿಮಾಕ್ಕಿದ್ದು, ವರ್ಲ್ಡ್ ವೈಡ್ 2000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾವನ್ನ ಬಿಡುಗಡೆ ಮಾಡುತ್ತಿದೆ.

ಓದಿ: ಮಾದೇವನಿಗೆ ಜೋಡಿಯಾಗಿ ಪಂಚತಂತ್ರ ಬ್ಯೂಟಿ ಸೋನಲ್ ಮೊಂಥೆರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.