ಬೆಂಗಳೂರು: ದೇಶಾದ್ಯಂತ ಸುದ್ದಿಯಲ್ಲಿದ್ದ ಅದಾ ಶರ್ಮಾ ನಟನೆಯ 'ದಿ ಕೇರಳ ಸ್ಟೋರಿ' ಸಿನಿಮಾ ವಿರೋಧದ ನಡುವೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರವೂ ಉತ್ತಮ ಪ್ರದರ್ಶನ ತೋರಿರುವ ಚಿತ್ರ 14 ದಿನಗಳಲ್ಲಿ 200 ಕೋಟಿ ಗಳಿಕೆಯನ್ನು ಮಾಡಿದೆ. ಎಲ್ಲ ವಿವಾದಗಳ ನಡುವೆಯೂ ಈ ಚಿತ್ರ 2023ಲ್ಲಿ ಹಿಂದಿಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ವಿವಾದಾತ್ಮಕ ಮತ್ತು ಸೂಕ್ಷ್ಮ ವಿಷಯಗಳನ್ನು ನಿರ್ದೇಶಕ ಸುದೀಪ್ತೊ ಸೇನ್ ತೆರೆ ಮೇಲೆ ತಂದಿದ್ದಾರೆ. ಎರಡನೇ ವಾರದಲ್ಲಿ ಅಂದರೆ, ಮೇ 18ರ ಬಳಿಕ ಚಿತ್ರ ಗಳಿಕೆ ಕೊಂಚ ಕಡಿಮೆಯಾಗಿದ್ದು, ಆದರೂ ಚಿತ್ರ ದೇಶಿಯ ಬಾಕ್ಸ್ ಆಫೀಸ್‌ನಲ್ಲಿ 171 ಕೋಟಿ ಗಳಿಕೆ ಮಾಡಿದೆ.
ವಿವಾದಗಳ ನಡುವೆಯೂ 'ದಿ ಕೇರಳ ಸ್ಟೋರಿ' ಚಿತ್ರ ಮೇ 5ರಂದು ಬಿಡುಗಡೆಗೊಂಡಿತು. ಚಿತ್ರಮಂದಿರದಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೇ 16ರಂದು ದಿ ಕೇರಳ ಸ್ಟೋರಿ 150 ಕೋಟಿ ಗಳಿಕೆ ಮಾಡಿತು.
ಇನ್ನು ಚಿತ್ರ ವಿಮರ್ಶಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮಾಹಿತಿ ಅನುಸಾರ, ಮೊದಲ ವಾರದಲ್ಲಿ ಚಿತ್ರ 81.14 ಕೋಟಿ ಸಂಗ್ರಹ ಮಾಡಿದೆ. ಎರಡನೇ ವಾರದಲ್ಲಿ 9.44 ಕೋಟಿ ಗಳಿಕೆ ಮಾಡಿದೆ. ಚಿತ್ರ ಎರಡನೇ ವಾರದಲ್ಲಿ ಒಟ್ಟಾರೆ 90.58 ಕೋಟಿ ರೂ ಗಳಿಕೆ ಮಾಡಿದೆ.
'ದಿ ಕೇರಳ ಸ್ಟೋರಿ' ಚಿತ್ರ ಕೇರಳದ ಹಿಂದೂ ಮಹಿಳೆ (ಅದಾ ಶರ್ಮಾ) ಇಸ್ಲಾಂಗೆ ಮತಾಂತರಗೊಳ್ಳಲು ಬ್ರೈನ್‌ವಾಶ್ ಮಾಡಲ್ಪಟ್ಟ ಪ್ರಯತ್ನ ಮತ್ತು ನಂತರ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ಗೆ ಸೇರಲು ಸಿರಿಯಾಕ್ಕೆ ಕಳ್ಳಸಾಗಣೆ ಮಾಡುವ ಕಥೆಯನ್ನಾಧರಿಸಿದೆ. ಈ ಸಿನಿಮಾ ನೈಜ ಘಟನೆ ಆಧಾರಿತ ಎಂದು ಚಿತ್ರತಂಡ ಹೇಳಿಕೊಂಡಿದೆ. 'ದಿ ಕೇರಳ ಸ್ಟೋರಿ' ಚಿತ್ರವನ್ನು ವಿಪುಲ್ ಅಮೃತ್ಲಾಲ್ ಶಾ ನಿರ್ಮಿಸಿದ್ದಾರೆ.
ಈ ಚಿತ್ರ ಬಿಡುಗಡೆಗೆ ಮುಂಚೆಯಿಂದಲೂ ಸುದ್ದಿಯಲ್ಲಿದೆ. ಆರಂಭದಲ್ಲಿ 32 ಸಾವಿರ ಯುವತಿರನ್ನು ಇಸ್ಲಾಮೀಕರಣಕ್ಕೆ ಒಳಗಾಗಿದ್ದಾರೆ ಎಂದು ಚಿತ್ರ ತಂಡ ಯೂಟ್ಯೂಬ್ನಲ್ಲಿ ಉಲ್ಲೇಖಿಸಿದ್ದ ಅಂಕಿ - ಅಂಶಗಳ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು. ಇದಾದ ಬಳಿಕ ಈ ಅಂಕಿ - ಅಂಶಗಳನ್ನು ಚಿತ್ರತಂಡ ಬದಲಾಯಿಸಿತು. ಇದಾದ ನಂತರ ಈ ಚಿತ್ರ ಬಿಡುಗಡೆಗೆ ಹಲವು ರಾಜ್ಯಗಳಲ್ಲಿ ವಿರೋಧಗಳು ವ್ಯಕ್ತವಾಗಿದ್ದವು. ಈ ಚಿತ್ರ ಕೋಮು ದ್ವೇಷ ಭಾವನೆಗೆ ಕಾರಣವಾಗುತ್ತದೆ ಎಂಬ ಆಪಾದನೆಗಳು ಕೇಳಿ ಬಂದಿದ್ದವು. ಹಲವು ರಾಜ್ಯಗಳಲ್ಲೂ ಈ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿದ್ದು, ನಿರ್ಬಂಧಿಸಲಾಗಿತ್ತು.
-
#TheKeralaStory is EXCELLENT in Week 2 [HIGHER than Week 1]… Should again post BIG NUMBERS in Weekend 3… [Week 2] Fri 12.35 cr, Sat 19.50 cr, Sun 23.75 cr, Mon 10.30 cr, Tue 9.65 cr, Wed 8.03 cr [updated], Thu 7 cr. Total: ₹ 171.72 cr. #India biz. #Boxoffice#TheKeralaStory… pic.twitter.com/peZpPWvHiD
— taran adarsh (@taran_adarsh) May 19, 2023 " class="align-text-top noRightClick twitterSection" data="
">#TheKeralaStory is EXCELLENT in Week 2 [HIGHER than Week 1]… Should again post BIG NUMBERS in Weekend 3… [Week 2] Fri 12.35 cr, Sat 19.50 cr, Sun 23.75 cr, Mon 10.30 cr, Tue 9.65 cr, Wed 8.03 cr [updated], Thu 7 cr. Total: ₹ 171.72 cr. #India biz. #Boxoffice#TheKeralaStory… pic.twitter.com/peZpPWvHiD
— taran adarsh (@taran_adarsh) May 19, 2023#TheKeralaStory is EXCELLENT in Week 2 [HIGHER than Week 1]… Should again post BIG NUMBERS in Weekend 3… [Week 2] Fri 12.35 cr, Sat 19.50 cr, Sun 23.75 cr, Mon 10.30 cr, Tue 9.65 cr, Wed 8.03 cr [updated], Thu 7 cr. Total: ₹ 171.72 cr. #India biz. #Boxoffice#TheKeralaStory… pic.twitter.com/peZpPWvHiD
— taran adarsh (@taran_adarsh) May 19, 2023
ಕಳೆದೆರಡು ವರ್ಷದಿಂದ ಉತ್ತಮ ಪ್ರದರ್ಶನ ಕಾಣದ ಬಾಲಿವುಡ್ನಲ್ಲಿ ಕಿಂಗ್ ಶಾರುಖ್ ಖಾನ್ ಅವರ 'ಪಠಾಣ್' ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಾಧ್ಯವಾಯಿತು. ಬಳಿಕ 'ತೂ ಜೂಟಿ ಮೆ ಮಕ್ಕರ್' ಸಿನಿಮಾ ಪಠಾಣ್‌ನಷ್ಟು ಯಶಸ್ವಿಯಾಗದಿದ್ದರೂ, ಅದು ಪ್ರೇಕ್ಷಕರನ್ನು ಆಕರ್ಷಿಸಿತು. 149.05 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿ ಆಯಿತು. ಆದರೆ, ಇದೀಗ 'ದಿ ಕೇರಳ ಸ್ಟೋರಿ' ಎರಡು ವಾರದಲ್ಲಿ 200 ಕೋಟಿ ಗಳಿಸುವ ಮೂಲಕ ಈ ವರ್ಷ ಅತಿ ಹೆಚ್ಚು ಗಳಿಸಿದ ಎರಡನೇ ಹಿಂದಿ ಚಿತ್ರ ಖ್ಯಾತಿ ಪಡೆದಿದೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ನಿಷೇಧ ಆದೇಶಕ್ಕೆ ಸುಪ್ರೀಂ ತಡೆ