ETV Bharat / entertainment

ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ತೆರಿಗೆ ಮುಕ್ತ: ಭಯಾನಕ ಸತ್ಯ ಬಹಿರಂಗಪಡಿಸುವ ಚಿತ್ರ ಎಂದ ಸಿಎಂ - The Kerala Story

ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೆರಿಗೆ ಮುಕ್ತ ಮಾಡಲಾಗಿದೆ.

The Kerala Story is tax free
ದಿ ಕೇರಳ ಸ್ಟೋರಿ ತೆರಿಗೆ ಮುಕ್ತ
author img

By

Published : May 6, 2023, 2:36 PM IST

Updated : May 6, 2023, 3:20 PM IST

ಮಧ್ಯಪ್ರದೇಶ: 2022ರಲ್ಲಿ ಚಿತ್ರದ ಬಗ್ಗೆ ಘೋಷಣೆಯಾದಾಗಿನಿಂದಲೂ ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಸದ್ದು ಮಾಡುತ್ತಲೇ ಇದೆ. ಚಿತ್ರದ ಕಥೆ ಸೂಕ್ಷ್ಮ ವಿಷಯವಾದ ಹಿನ್ನೆಲೆ, ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಸಿದೆ. ಚಿತ್ರ ಕಥೆ ಕೇರಳದ ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ಸುತ್ತ ಸುತ್ತುತ್ತದೆ. ಈ ಹಿನ್ನೆಲೆ ದೇಶದ ಹಲವೆಡೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  • आतंकवाद की भयावह सच्चाई को उजागर करती फिल्म 'The Kerala Story' मध्यप्रदेश में टैक्स फ्री की जा रही है। pic.twitter.com/l5oizjqK7j

    — Shivraj Singh Chouhan (@ChouhanShivraj) May 6, 2023 " class="align-text-top noRightClick twitterSection" data=" ">

ಮಧ್ಯಪ್ರದೇಶದ ಬಿಜೆಪಿ ರಾಜ್ಯ ಸಚಿವ ರಾಹುಲ್ ಕೊಠಾರಿ (Rahul Kothari) ಅವರು ಈ ಹಿಂದೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ 'ದಿ ಕೇರಳ ಸ್ಟೋರಿ'ಯನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವಂತೆ ಪತ್ರ ಬರೆದಿದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಹಲವಾರು ಹಿಂದೂ ಸಂಘಟನೆಗಳು ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವಂತೆ ಸಿಎಂಗೆ ಒತ್ತಾಯಿಸಿದ್ದವು. ಬಹು ಒತ್ತಾಯದ ಮೇರೆಗೆ ಟ್ಯಾಕ್ಸ್​ ಫ್ರೀ ಮಾಡಲು ನಿರ್ಧರಿಸಲಾಗಿದೆ. ಇಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ರಾಜ್ಯದಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

"ಭಯೋತ್ಪಾದನೆಯ ಭಯಾನಕ ಸತ್ಯವನ್ನು ಬಹಿರಂಗಪಡಿಸುವ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುತ್ತಿದೆ" ಎಂದು ಟ್ವೀಟ್ ಮಾಡಿರುವ ಅವರು, ಚಿತ್ರದ ಬಗ್ಗೆ ಸ್ವತಃ ಮಾತನಾಡಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾ ಹಲವು ಪ್ರತಿಭಟನೆಗಳು ಮತ್ತು ಭಾರೀ ವಿವಾದಗಳ ನಡುವೆಯೇ ಮೇ 5ರಂದು ಬಿಡುಗಡೆ ಆಗಿದೆ. ಸದ್ಯ ಮಧ್ಯಪ್ರದೇಶ ರಾಜ್ಯದಲ್ಲಿ ತೆರಿಗೆ ಮುಕ್ತ ಮಾಡಲಾಗಿದೆ ಎಂದು ಘೋಷಿಸಲಾಗಿದೆ. ಚಲನಚಿತ್ರವು ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಕೆಲವರು ಇದನ್ನು 'ಪ್ರಚಾರದ ಚಿತ್ರ' ಎಂದು ಹೇಳಿದ್ದರೆ, ಮತ್ತೊಂದಿಷ್ಟು ಮಂದಿ ಬೆಂಬಲ ಸೂಚಿಸಿ 'ಅಸಾಧಾರಣ' ಚಲನಚಿತ್ರ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

'ದಿ ಕೇರಳ ಸ್ಟೋರಿ' ಚಿತ್ರದ ಕಥೆ ಅಮಾಯಕ ಹಿಂದೂ ಮಹಿಳೆಯರ ಸುತ್ತ ಸುತ್ತುತ್ತದೆ. ಯುವತಿ ಸ್ನೇಹಿತರಿಂದ ಬ್ರೈನ್ ವಾಶ್​​ಗೆ ಒಳಗಾಗಿ ಮತಾಂತರಗೊಂಡು, ಭಯೋತ್ಪಾದಕ ಸಂಘಟನೆ ISISಗೆ ಸೇರಿಕೊಂಡ ಅಂಶವನ್ನು ಚಿತ್ರದಲ್ಲಿ ತಿಳಿಸಲಾಗಿದೆ. ಸುದಿಪ್ತೋ ಸೇನ್ ನಿರ್ದೇಶನದ ಮತ್ತು ವಿಪುಲ್ ಅಮೃತ್‌ಲಾಲ್ ಶಾ ನಿರ್ಮಿಸಿದ ದಿ ಕೇರಳ ಸ್ಟೋರಿ ನಿಜ ಜೀವನದ ಘಟನೆಗಳನ್ನು ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕೇರಳ ರಾಜ್ಯದ ಸುಮಾರು 32,000 ಮಹಿಳೆಯರು ಕಳ್ಳಸಾಗಣೆ ಆಗಿದ್ದಾರೆಂದು ಚಿತ್ರ ವಿವರಿಸಿದೆ.

ಇದನ್ನೂ ಓದಿ: ಕುದುರೆ ಸವಾರಿ ಮಾಡುವಾಗ ಬಿದ್ದ ಮಿಸ್​​ ಯೂನಿವರ್ಸ್​​​ ಫೈನಲಿಸ್ಟ್ ಕೊನೆಯುಸಿರು

ಚಿತ್ರದ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿದ್ದು, ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿದ್ದ ಮನವಿಯನ್ನು ನಿನ್ನೆ ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಇನ್ನೂ 40 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣ ಆದ ಈ ಚಿತ್ರ ಮೊದಲ ದಿನ 8.03 ಕೋಟಿ ರೂ. ಕಲೆಕ್ಷನ್​ ಮಾಡುವಲ್ಲಿ ಯಶಸ್ವಿ ಆಗಿದೆ. ಇಂದು ಮತ್ತು ನಾಳೆ ಕೆಲಕ್ಷನ್​ ಉತ್ತಮವಾಗಿರಲಿದೆ ಎಂದು ಅಂದಾಜಿಸಲಾಗಿದೆ.

Last Updated : May 6, 2023, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.