ETV Bharat / entertainment

Thalaivar171: ಲೋಕೇಶ್​ ಕನಕರಾಜ್​ ಜೊತೆ ರಜನಿಕಾಂತ್ ಮುಂದಿನ ಸಿನಿಮಾ ಘೋಷಣೆ - ಈಟಿವಿ ಭಾರತ ಕನ್ನಡ

Rajinikanth's next with Lokesh Kanagaraj: ಸೂಪರ್​ಸ್ಟಾರ್​ ರಜನಿಕಾಂತ್​ ಮತ್ತು ಸ್ಟಾರ್​ ನಿರ್ದೇಶಕ ಲೋಕೇಶ್​ ಕನಕರಾಜ್ ಕಾಂಬೋದಲ್ಲಿ 'ತಲೈವರ್​ 171' ಸಿನಿಮಾ ಅಧಿಕೃತ ಘೋಷಣೆಯಾಗಿದೆ.

Thalaivar171
ಲೋಕೇಶ್​ ಕನಕರಾಜ್​ ಜೊತೆ ರಜನಿಕಾಂತ್ ಮುಂದಿನ ಸಿನಿಮಾ ಘೋಷಣೆ
author img

By ETV Bharat Karnataka Team

Published : Sep 11, 2023, 5:01 PM IST

ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್​' ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಚಿತ್ರ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆಗಸ್ಟ್​ 10ರಂದು ತೆರೆಕಂಡು ವಿಶ್ವಾದ್ಯಂತ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ದಾಖಲೆ ಸೃಷ್ಟಿಸಿದೆ. ಈ ಮೂಲಕ ರಜನಿಕಾಂತ್​ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾಗಳಲ್ಲಿ ಇದು ಒಂದಾಗಿದೆ. ಇದರ ಹೊರತಾಗಿ ತಲೈವಾ ಮುಂದಿನ ಪ್ರಾಜೆಕ್ಟ್​ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಹೌದು. ಈವರೆಗೆ ರಜನಿಕಾಂತ್​ ಅವರ ಮುಂದಿನ ಸಿನಿಮಾಗಳ ಬಗ್ಗೆ ಕೆಲವು ಊಹಾಪೋಹಗಳು ಕೇಳಿ ಬರುತ್ತಿದ್ದವು. ತಲೈವರ್​ 171ನೇ ಸಿನಿಮಾಗೆ ನಿರ್ದೇಶಕ ಲೋಕೇಶ್​ ಕನಕರಾಜ್​ ಆಕ್ಷನ್​ ಕಟ್​ ಹೇಳಲಿದ್ದಾರೆ ಎಂಬ ವಿಚಾರಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದೀಗ ಖ್ಯಾತ ನಿರ್ಮಾಣ ಸಂಸ್ಥೆ ಸನ್​ ಪಿಕ್ಚರ್ಸ್​ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ. ಸೂಪರ್​ಸ್ಟಾರ್​ ರಜನಿಕಾಂತ್​ ಮತ್ತು ಸ್ಟಾರ್​ ನಿರ್ದೇಶಕ ಲೋಕೇಶ್​ ಕನಕರಾಜ್ ಕಾಂಬೋದಲ್ಲಿ ಮತ್ತೊಂದು ಬ್ಲಾಕ್​ಬಸ್ಟರ್​ ಚಿತ್ರ ಬರಲಿದೆ ಎಂದು ಅಧಿಕೃತ ಘೋಷಣೆಯಾಗಿದೆ.

'ಜೈಲರ್'​ ಸೂಪರ್​ ಹಿಟ್​ ಆದ ನಂತರ, ರಜನಿಕಾಂತ್​ ಅವರು ತಮ್ಮ 171ನೇ ಚಿತ್ರಕ್ಕಾಗಿ ಸನ್​ಪಿಕ್ಚರ್ಸ್​ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ತಲೈವರ್​ 171 ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾಗೆ ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್​ ಕನಕರಾಜ್ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಶಾರುಖ್​ ಖಾನ್​ ನಟನೆಯ 'ಜವಾನ್'​ ಸಿನಿಮಾದ ಯಶಸ್ಸಿನಲ್ಲಿರುವ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಮ್ಯೂಸಿಕ್​ನಲ್ಲಿ ​ತಲೈವರ್​ 171 ಹಾಡುಗಳು ಕೂಡ ಬರಲಿದೆ.

ಇದನ್ನೂ ಓದಿ: Jailer: ಜೈಲರ್​ ವೀಕ್ಷಿಸಿಲ್ವಾ? ನೋಡಿಲ್ಲವಾದ್ರೆ ಒಟಿಟಿಯಲ್ಲಿ ಲಭ್ಯ!

ಸನ್​ ಪಿಕ್ಚರ್ಸ್​ ಪೋಸ್ಟ್​: ತಲೈವರ್​ 171ನೇ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲು ಸನ್​ ಪಿಕ್ಚರ್ಸ್​ ಎಕ್ಸ್​ (ಹಿಂದಿನ ಟ್ವಿಟರ್​) ವೇದಿಕೆಯನ್ನು ಬಳಸಿಕೊಂಡಿತು. "ಸೂಪರ್​ಸ್ಟಾರ್​ ರಜನಿಕಾಂತ್​ ಅವರ ತಲೈವರ್​ 171 ಅನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಲೋಕೇಶ್​ ಕನಕರಾಜ್​ ಬರೆದು ನಿರ್ದೇಶಿಸಲಿದ್ದಾರೆ. ಅನಿರುದ್ಧ್​ ರವಿಚಂದರ್​ ಸಂಗೀತ ನೀಡಲಿದ್ದಾರೆ. ಅನ್ಬರಿವ್​ ಆ್ಯಕ್ಷನ್​ ಇರಲಿದೆ" ಎಂಬ ಬರಹದೊಂದಿಗೆ ಚಿತ್ರದ ಫಸ್ಟ್​ ಪೋಸ್ಟರ್​ ಅನ್ನು ಹಂಚಿಕೊಂಡಿದೆ.

ಇನ್ನೂ ಕೈದಿ, ವಿಕ್ರಮ್​ ಮತ್ತು ಲಿಯೋಗೆ ಹೆಸರುವಾಸಿಯಾಗಿರುವ ನಿರ್ದೇಶಕ ಕನಕರಾಜ್​ ಅವರು ರಜನಿಕಾಂತ್​ ಜೊತೆಗೆ ಕೆಲಸ ಮಾಡುವ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. "ತಲೈವರ್ ರಜನಿಕಾಂತ್​ ಸರ್​ ಜೊತೆಗೆ ಮತ್ತು ಸನ್​ ಪಿಕ್ಚರ್ಸ್​ನೊಂದಿಗೆ ಕೈ ಜೋಡಿಸುತ್ತಿರುವುದಕ್ಕೆ ಉತ್ಸುಕನಾಗಿದ್ದೇನೆ. ಅನಿರುದ್ಧ್​ ರವಿಚಂದರ್​ ಮ್ಯೂಸಿಕಲ್​. ಅನ್ಬರಿವ್​ ಸ್ಟಂಟ್​" ಎಂದು ಎಕ್ಸ್​ನಲ್ಲಿ ನಿರ್ದೇಶಕರು ಬರೆದುಕೊಂಡಿದ್ದಾರೆ. ಇನ್ನೂ ರಜನಿಕಾಂತ್​ ಅವರು ಕೊನೆಯದಾಗಿ ಜೈಲರ್​ನಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಪ್ರಸ್ತುತ ಪ್ರೈಮ್​ ವಿಡಿಯೋದಲ್ಲಿ ಸ್ಟ್ರೀಮ್​ ಆಗುತ್ತಿದೆ.

ಇದನ್ನೂ ಓದಿ: ಜೈಲರ್​ ಗೆದ್ದ ಖುಷಿ: ಮ್ಯೂಸಿಕ್​ ಡೈರೆಕ್ಟರ್​ ಅನಿರುಧ್ ರವಿಚಂದರ್​ಗೆ ಸಿಕ್ತು ದುಬಾರಿ ಕಾರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.