ETV Bharat / entertainment

ಹೆಚ್ಚಾಯ್ತು 'ಸಲಾರ್'​ ಫೀವರ್​: ಮಧ್ಯರಾತ್ರಿಯು ಶೋ , ಟಿಕೆಟ್​ ದರ ಹೆಚ್ಚಳಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟ ತೆಲಂಗಾಣ ಸರ್ಕಾರ - ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಚಿತ್ರ

Salaar shows in Telangana: ತೆಲಂಗಾಣ ಸರ್ಕಾರ 'ಸಲಾರ್'​ ​ ಸಿನಿಮಾದ ಮಧ್ಯರಾತ್ರಿ ಶೋಗೆ ಅನುಮತಿ ನೀಡಿ ಪ್ರಭಾಸ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ನೀಡಿದೆ.

telangana-government-agrees-for-salaar-midnight-show

author img

By ETV Bharat Karnataka Team

Published : Dec 20, 2023, 10:20 AM IST

ಹೈದರಾಬಾದ್​: ಪ್ರಶಾಂತ್​ ನೀಲ್​ ನಿರ್ದೇಶನದ 'ಸಲಾರ್'​ ಚಿತ್ರ ಕಾತರತೆ ಹೆಚ್ಚಿಸಿದೆ. ಬಿಡುಗಡೆಗೆ ಮುನ್ನವೇ ಬುಕ್ಕಿಂಗ್​ನಲ್ಲಿ ದಾಖಲೆ ನಿರ್ಮಿಸಿರುವ ಸಿನಿಮಾ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ತೆಲಂಗಾಣ ಸರ್ಕಾರ ಕೂಡ ಅಭಿಮಾನಿಗಳು ಮತ್ತು ಸಿನಿ ತಂಡಕ್ಕೆ ಮತ್ತಷ್ಟು ಸಂತಸ ನೀಡಿದೆ. ಕಾರಣ, ತೆಲಂಗಾಣದಲ್ಲಿ ಮಧ್ಯರಾತ್ರಿಯಿಂದಲೇ ಸಿನಿಮಾದ ಶೋ ಆರಂಭವಾಗಲಿದೆ. ಜೊತೆಗೆ ಟಿಕೆಟ್​ ದರ ಏರಿಕೆಗೂ ಸರ್ಕಾರ ಅನುಮತಿ ನೀಡುವ ಮೂಲಕ ಸಿನಿ ತಂಡಕ್ಕೂ ಸಂತಸ ಮೂಡಿಸಿದೆ.

ಮಾಧ್ಯಮಗಳ ವರದಿ ಪ್ರಕಾರ, ಚಿತ್ರ ಬಿಡುಗಡೆಯ ಮೊದಲ ವಾರಾಂತ್ಯದಲ್ಲಿ ಮಧ್ಯರಾತ್ತಿ 1 ಮತ್ತು ಬೆಳಗಿನ ಜಾವ 4 ಗಂಟೆಗೆ ಶೋ ಪ್ರಾರಂಭಿಸಲು ತೆಲಂಗಾಣ ಸರ್ಕಾರ ಹಸಿರು ನಿಶಾನೆ ತೋರಿದೆ. ಪ್ರಭಾಸ್​ ಅಭಿಮಾನಿಗಳ ಕ್ರೇಜ್​ ಹಿನ್ನೆಲೆ ಶೋ ಸಂಖ್ಯೆ ಹೆಚ್ಚಿಸಲು ಸರ್ಕಾರ ಸಮ್ಮತಿ ನೀಡಿದೆ. ಇದರ ಜೊತೆಗೆ ಮಲ್ಟಿಫ್ಲೆಕ್ಸ್​​ಗಳಲ್ಲಿ ಸಿನಿಮಾದ ಟಿಕೆಟ್​ ದರವನ್ನು 100 ರೂ ವರೆಗೆ ಏರಿಕೆ ಮಾಡಲು ಕೂಡ ಸರ್ಕಾರ ಒಪ್ಪಿದ್ದು, ಚಿತ್ರ ನಿರ್ಮಾಪಕರು ಮತ್ತು ವಿತರಕರಲ್ಲಿ ಹರ್ಷ ಮೂಡಿಸಿದೆ.

  • Telangana Government Has Given Permission to Screen #Salaar    Shows at 1AM in the Following 20 Theatres

    1) Nexus Mall, Kukatpally
    2) AMB cinemas, Gachibowli
    3) Brahmaramba Theatre,
    Kukatpally
    4) Mallikarjuna Theatre, Kukatpally
    5) Arjun Theatre, Kukatpally#Salaar pic.twitter.com/GRK4i0UL4y

    — Aadil THE BOSS (@aadilanjum108) December 19, 2023 " class="align-text-top noRightClick twitterSection" data=" ">

ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರ, "ತೆಲಂಗಾಣ ರಾಜ್ಯದಲ್ಲಿ 'ಸಲಾರ್'​​ ಸಿನಿಮಾದ ಆರನೇ ಶೋ ಡಿಸೆಂಬರ್​ 22ರ ಬೆಳಗಿನ ಜಾವ 4ಗಂಟೆಗೆ ನಡೆಸಲು ಅನುಮತಿ ನೀಡಲಾಗಿದೆ. ಜೊತೆಗೆ ಸಿಂಗಲ್​ ಸ್ಕ್ರೀನ್​ ಮತ್ತು ಮಲ್ಟಿಫ್ಲೆಕ್ಸ್​​ಗಳಲ್ಲಿ ಟಿಕೆಟ್​ ದರವನ್ನು 65 ರೂ ನಿಂದ 100 ರೂವರೆಗೆ ಹೆಚ್ಚಳ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೇ 22 ಡಿಸೆಂಬರ್​ ಮಧ್ಯರಾತ್ರಿ ಕೆಲವು ಆಯ್ದ ಥಿಯೇಟರ್​ನಲ್ಲಿ 1 ಗಂಟೆ ಶೋ ನಡೆಸಬಹುದಾಗಿದೆ" ಎಂದು ತಿಳಿಸಿದೆ.

ಚಿತ್ರೋದ್ಯಮದ ಟ್ರಾಕರ್​ ಸ್ಕ್ಯಾನಿಲ್ಕ್​​ ಪ್ರಕಾರ, 'ಸಲಾರ್'​​ ಸಿನಿಮಾದ ಟಿಕೆಟ್​ ಮಾರಾಟದಲ್ಲಿ ಈಗಾಗಲೇ ಭಾರೀ ಜಿಗಿತ ಕಂಡಿದೆ. ಚಿತ್ರ ಬಿಡುಗಡೆಗೆ ಎರಡು ದಿನ ಮೊದಲೇ 5 ಸಾವಿರ ಟಿಕೆಟ್​ ಮಾರಾಟ ಆಗಿದೆ. ಅಂಕಿ - ಅಂಶಗಳ ವರದಿ ಪ್ರಕಾರ, ಚಿತ್ರ ಬಿಡುಗಡೆ ಮೊದಲ ದಿನವೇ 10 ಕೋಟಿಗೂ ಹೆಚ್ಚಿನ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಪ್ರಭಾಸ್​​ ಮತ್ತು ಪೃಥ್ವಿರಾಜ್​ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದಾರೆ. ಡಿಸೆಂಬರ್​ 22 ರಂದು ಚಿತ್ರ ಥಿಯೇಟರ್​ ಬಿಡುಗಡೆ ಕಾಣಲಿದೆ. ಕನ್ನಡ, ಹಿಂದಿ, ತಮಿಳು​ ಮತ್ತು ಮಲಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಅಬ್ಬಬ್ಬಾ! ಬಿಡುಗಡೆಯಾದ 24 ಗಂಟೆಯಲ್ಲಿ 101 ಮಿಲಿಯನ್​ ವೀಕ್ಷಣೆ ಪಡೆದ 'ಸಲಾರ್'​ ರಿಲೀಸ್ ಟ್ರೇಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.