ETV Bharat / entertainment

ತೇಜ್​​ರಾನ್​ ಬ್ರೇಕ್​​ ಅಪ್​ ವದಂತಿಗೆ ಫುಲ್​ ಸ್ಟಾಪ್​ ಇಟ್ಟ ನಟಿ ತೇಜಸ್ವಿ ಪ್ರಕಾಶ್​ - ತೇಜಸ್ವಿ ಕರಣ್ ಲವ್

ತೇಜಸ್ವಿ ಪ್ರಕಾಶ್​ ಮತ್ತು ಕರಣ್ ಕುಂದ್ರಾ ಬ್ರೇಕ್​​ ಅಪ್​ ವದಂತಿ ಜೋರಾಗಿಯೇ ಹರಡಿದೆ. ಈ ಬಗ್ಗೆ ಸ್ವತಃ ನಟಿ ತೇಜಸ್ವಿ ಪ್ರಕಾಶ್​ ಪ್ರತಿಕ್ರಿಯಿಸಿದ್ದಾರೆ.

TejRan breakup Rumor
ತೇಜ್​​ರಾನ್​ ಬ್ರೇಕ್​​ ಅಪ್​ ವದಂತಿ
author img

By

Published : Mar 10, 2023, 4:53 PM IST

ಕಿರುತೆರೆ ಕಲಾವಿದರಾದ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದಾ ಸುದ್ದಿಯಲ್ಲಿರುವ ಜೋಡಿ. ಬಾಲಿವುಡ್ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ನಿರೂಪಣೆಯ​​ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 15ನಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರೂ ಅಂತಿಮ ಘಟ್ಟದವರೆಗೆ ತಲುಪಿ ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ 15ರ ವಿಜೇತರಾಗಿ ಹೊರಹೊಮ್ಮಿದರು.

  • na teri shaan kam hoti..
    na rutba ghata hota..
    jo ghamand mein kaha..
    wahi hass ke kaha hota…

    — Karan Kundrra (@kkundrra) March 7, 2023 " class="align-text-top noRightClick twitterSection" data=" ">

ರಿಯಾಲಿಟಿ ಶೋ ಬಿಗ್ ಬಾಸ್ 15ರಲ್ಲಿ ಈ ಜೋಡಿ ಪರಸ್ಪರ ಹತ್ತಿರವಾದರು. ಇವರಿಬ್ಬರ ಕೆಮಿಸ್ಟ್ರಿ ಸಖತ್ ವರ್ಕ್​ ಔಟ್​ ಆಗಿತ್ತು. ಪರಿಣಾಮವಾಗಿ ಅಪಾರ ಅಭಿಮಾನಿಗಳನ್ನು ಆಕರ್ಷಿಸಿದ್ದರು. ಪ್ರೇಮಿಗಳಾಗಿ ಬಹುತೇಕರ ಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಬಂದಿದ್ದಾರೆ. ಇವರ ಮದುವೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ ಕರಣ್ ಅವರ ಇತ್ತೀಚಿನ ಟ್ವೀಟ್​ಗಳು ಕೆಲ ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಜೋಡಿ ಬೇರೆಯಾಗಲಿದ್ದಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿತ್ತು. ಈ ಬಗ್ಗೆ ನಟಿ ತೇಜಸ್ವಿ ಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.

ಮಾರ್ಚ್ 8ರಂದು ಕರಣ್ ಕುಂದ್ರಾ ತಮ್ಮ ಟ್ವಿಟ್ಟರ್​ ಶಾಯರಿಯೊಂದಿಗೆ (ಕವಿತೆ) ಕೆಲ ರಹಸ್ಯ ಸಂದೇಶವನ್ನು ಪೋಸ್ಟ್ ಮಾಡಿದ್ದರು. ಅವರ ಪೋಸ್ಟ್ ಅನೇಕ ಅಭಿಮಾನಿಗಳ ಪ್ರಶ್ನೆಗೆ ಕಾರಣವಾಯಿತು. ತೇಜಸ್ವಿ ಮತ್ತು ಕರಣ್​ ಬೇರೆಯಾಗಿದ್ದಾರೆಯೇ ಎಂದು ಊಹಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬ್ರೇಕ್​ ಅಪ್​ ವದಂತಿ ಹೆಚ್ಚು ಸದ್ದು ಮಾಡಿತು.

ಸಂದರ್ಶನವೊಂದರಲ್ಲಿ ನಟಿ ತೇಜಸ್ವಿ ಪ್ರಕಾಶ್ ಅವರಿಗೆ ಈ ಬ್ರೇಕಪ್​ ವದಂತಿ ಬಗ್ಗೆ ಪ್ರಶ್ನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಾಗಿನ್​ ನಟಿ ತೇಜಸ್ವಿ ಪ್ರಕಾಶ್, ಹಾಗೇನು ಇಲ್ಲ, ನಾವು ಪ್ರೀತಿಯಲ್ಲಿದ್ದೇವೆ, ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇನ್ನು ಮದುವೆ ಬಗ್ಗೆ ಅಂತಿಮ ತೀರ್ಮಾನ ಆದ ಬಳಿಕ ಮಾಹಿತಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಹಾಗಾಗಿ ತೇಜ್‌ರಾನ್ ಅಭಿಮಾನಿಗಳು ಚಿಂತೆ ಮಾಡಲು ಯಾವುದೇ ಕಾರಣವಿಲ್ಲ.

ಇದನ್ನೂ ಓದಿ: ಆಸ್ಕರ್​​ ವೇದಿಕೆಯಲ್ಲಿ RRR​ ಭಾರತವನ್ನು ಹೃದಯದಲ್ಲಿಟ್ಟುಕೊಂಡು ಹೆಜ್ಜೆ ಹಾಕಲಿದೆ: ಜೂ.ಎನ್​​ಟಿಆರ್​

ತಾವು ಕರಣ್‌ನಲ್ಲಿ ಪ್ರೀತಿ ಕಂಡುಕೊಂಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸಾರ್ವಜನಿಕವಾಗಿ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರ ಪ್ರಕಾರ, ಕರಣ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸುವುದು ಬಹಳ ಮುಖ್ಯವಾದ ನಿರ್ಧಾರವಾಗಿದೆ. ಆದಾಗ್ಯೂ, ಅದು ನಿಜವಾಗಿ ಸಂಭವಿಸುವ ಮೊದಲು ಅದನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ತೇಜಸ್ವಿ ಅವರು ಮದುವೆ ವಿಚಾರವನ್ನು ರಹಸ್ಯವಾಗಿಡಲು ಬಯಸುತ್ತಾರೆ. ಪರಸ್ಪವಾಗಿ ಖುಷಿಯಾಗಿದ್ದೇವೆ ಎಂದು ತಿಳಿಸುವ ಮೂಲಕ ಸಂದರ್ಶನದಲ್ಲಿ ಈ ಬಗ್ಗೆ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

ಇದನ್ನೂ ಓದಿ: ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ಹಿಂದಿ ಬಿಗ್​ ಬಾಸ್​ ಸೀಸನ್​ 15ರ ವಿಜೇತೆಯಾಗಿ ಹೊರ ಹೊಮ್ಮಿದ ತೇಜಸ್ವಿ ಪ್ರಕಾಶ್ ಸದ್ಯ ಕಿರುತೆರೆ ಲೋಕದಲ್ಲಿ ಬಹು ಬೇಡಿಕೆ ನಟಿ. ನಾಗಿನ್​ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿರುವ ಇವರು ತಾವು ತೆಗೆದುಕೊಳ್ಳುವ ಸಂಭಾವನೆಯಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.