ETV Bharat / entertainment

ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಸೂರ್ಯ: ಬೆಲೆ ಕೇಳಿದ್ರೆ ದಂಗಾಗ್ತೀರಿ! - ಈಟಿವಿ ಭಾರತ ಕನ್ನಡ

ತಮಿಳು ನಟ ಸೂರ್ಯ ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ್ದಾರೆ.

suriya
ನಟ ಸೂರ್ಯ
author img

By

Published : Mar 21, 2023, 10:53 AM IST

ಕಾಲಿವುಡ್​ ಸೂಪರ್​ ಸ್ಟಾರ್​ ಸೂರ್ಯ ಅವರ ಬಗ್ಗೆ ಸಿನಿಮಾ ಮಂದಿಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ಒಂದೆಡೆ ಕಮರ್ಷಿಯಲ್​ ಸಿನಿಮಾ, ಮತ್ತೊಂದೆಡೆ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಸಾರುವ ಚಿತ್ರಗಳನ್ನು ಮಾಡುತ್ತಾ ಸಿನಿಮಾ ವೃತ್ತಿ ಜೀವನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸ ಮಾದರಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೂರರೈ ಪೋಟ್ರು ಚಿತ್ರದ ಮೂಲಕ ವಿಶೇಷವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ನಟ ಸೂರ್ಯ.

ಇದೀಗ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸೂರ್ಯ ಬಗ್ಗೆ ಇಂಟ್ರೆಸ್ಟಿಂಗ್​​ ಸುದ್ದಿ ಹೊರ ಬಿದ್ದಿದೆ. ಕುಟುಂಬಸಮೇತ ಅವರು ಮುಂಬೈಗೆ ಶಿಫ್ಟ್​ ಆಗುತ್ತಿದ್ದಾರೆ ಎಂಬ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಅದಕ್ಕಾಗಿ ಅವರು 70 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್​ ಖರೀದಿಸಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಟಾಪ್​ ಸೆಲೆಬ್ರಿಟಿಗಳು ವಾಸಿಸುವ ಪ್ರದೇಶದಲ್ಲೇ ಮನೆ ಖರೀದಿಸಿದ್ದಾರೆ. ಈ ಮನೆ 9 ಸಾವಿರ ಸ್ಕ್ವಾರ್​ ಫೀಟ್​ನಲ್ಲಿ ನಿರ್ಮಿತವಾಗಿದೆಯಂತೆ.

ಉದ್ಯಾನ, ಸ್ವಿಮ್ಮಿಂಗ್​ ಪೂಲ್​, ಜಿಮ್​, ಪಾರ್ಕಿಂಗ್​, ಲೈಬ್ರೆರಿ, ಥಿಯೇಟರ್​ ಹೀಗೆ ಎಲ್ಲಾ ಆಧುನಿಕ ಸೌಲಭ್ಯಗಳಿರುವ ಮನೆಯನ್ನೇ ಸೂರ್ಯ ತೆಗೆದುಕೊಂಡಿದ್ದಾರೆ. ವಾಸ್ತವವಾಗಿ ಈ ಫ್ಲ್ಯಾಟ್​ 68 ಕೋಟಿ ರೂಪಾಯಿ ಬೆಲೆ ಬಾಳುತ್ತಿದ್ದು, ಸೂರ್ಯ ಬರೀ ಬುಕ್ಕಿಂಗ್​ಗಾಗಿಯೇ 2 ಕೋಟಿ ಖರ್ಚು ಮಾಡಿದ್ದಾರಂತೆ. ಇಂತಹ ಇಂಟ್ರೆಸ್ಟಿಂಗ್​ ವಿಚಾರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಚೆನ್ನೈನಲ್ಲಿ ವಾಸವಿದ್ದ ಸೂರ್ಯ ಕುಟುಂಬ ಮುಂಬೈಗೆ ಶಿಫ್ಟ್​ ಆಗಲಿದ್ದಾರಾ? ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಇದನ್ನೂ ಓದಿ: 50 ದೇಶ, 5 ಭಾಷೆ: ಎರಡೇ ದಿನಕ್ಕೆ 100‌ ಕೋಟಿ ರೂಪಾಯಿ ಕ್ಲಬ್ ಸೇರಿದ‌ 'ಕಬ್ಜ'

ಸೂರ್ಯ 2006 ರಲ್ಲಿ ನಗ್ಮಾ ಸಹೋದರಿ ಜ್ಯೋತಿಕಾ ಅವರನ್ನು ಮದುವೆಯಾಗಿದ್ದಾರೆ. ದಂಪತಿಗೆ ದಿಯಾ ಮತ್ತು ದೇವ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಕಾಲಿವುಡ್​ ಸಿನಿಮಾ ರಂಗದಲ್ಲಿ ಆದರ್ಶ ದಂಪತಿಗಳೆಂಬ ಹೆಗ್ಗಳಿಕೆ ಇವರದ್ದು. ಅಲ್ಲದೇ ಇವರಿಬ್ಬರ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಜ್ಯೋತಿಕಾ ಅವರು ಕೂಡ ನಟಿಯಾಗಿದ್ದು, ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಮರಿ ಸಿಂಹ/ಸಿಂಹಿಣಿ ಬರುತ್ತಿದ್ದಾರಾ?' ಅಭಿಮಾನಿಗಳ ಕುತೂಹಲಕ್ಕೆ ಹರಿಪ್ರಿಯಾ ಏನ್‌ ಹೇಳಿದ್ರು?

ಸೂರ್ಯ ಸಿನಿಮಾ ಬಗ್ಗೆ..: ಇದೀಗ ಸೂರ್ಯ ತಮ್ಮ ಮುಂದಿನ ಚಿತ್ರ 'ಸೂರ್ಯ 42'ರ ಕೆಲಸದಲ್ಲಿ ನಿರತರಾಗಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಸುಮಾರು ಹತ್ತು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಾಯಕಿಯಾಗಿ ದಿಶಾ ಪಟಾನಿ ಕಾಣಿಸಿಕೊಳ್ಳಲಿದ್ದಾರೆ. ಶಿವ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಮತ್ತು ಪ್ರಮೋದ್​ ನಿರ್ಮಾಪಕರಾಗಿದ್ದಾರೆ. ಇದಲ್ಲದೇ ವೆಟ್ರಿಮಾರನ್​ ನಿರ್ದೇಶನದಲ್ಲಿ ವಾಡಿವಾಸಲ್​ ಸಿನಿಮಾ ತಯಾರಾಗುತ್ತಿದ್ದು, ಇದರಲ್ಲೂ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಆಕಾಶದ ನಕ್ಷತ್ರಕ್ಕೆ 'ಅಪ್ಪು' ಹೆಸರು.. ಬಿಗ್ ಲಿಟ್ಲ್ ಕಂಪನಿ ಜೊತೆ ವಿಕ್ರಮ್ ಸಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.