ETV Bharat / entertainment

ವದಂತಿಗಳಿಗೆ ಬ್ರೇಕ್​.. ತಮನ್ನಾ ಭಾಟಿಯಾ ಕೈಯಲ್ಲಿರುವುದು ವಜ್ರದ ಉಂಗುರವಲ್ಲವಂತೆ..!​ - ಲಸ್ಟ್ ಸ್ಟೋರೀಸ್​ 2

ಬೆರಳಿಗೆ ಧರಿಸಿರುವುದು ಡೈಮಂಡ್​ ಉಂಗುರವಲ್ಲ ಎಂದು ನಟಿ ತಮನ್ನಾ ಭಾಟಿಯಾ ಸ್ಪಷ್ಟಪಡಿಸಿದ್ದಾರೆ.

Tamannaah Bhatia
ತಮನ್ನಾ ಭಾಟಿಯಾ ಕೈಯಲ್ಲಿರುವುದು ವಜ್ರದ ಉಂಗುರವಲ್ಲವಂತೆ
author img

By

Published : Jul 25, 2023, 6:05 PM IST

ತಮನ್ನಾ ಭಾಟಿಯಾ ಇವರ ಬಗ್ಗೆ ಹೆಚ್ಚು ಹೇಳಬೇಕೆಂದಿಲ್ಲ. ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಇವರು ಕೂಡಾ ಒಬ್ಬರು. ಬಾಲಿವುಡ್​ಗೆ ಯಶಸ್ವಿಯಾಗಿ ಪ್ರವೇಶಿಸಿ, ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ನಟಿ ತಮ್ಮ ಆಭರಣಗಳಿಂದ ಸುದ್ದಿಯಾಗಿದ್ದಾರೆ. 2 ಕೋಟಿ ಮೌಲ್ಯದ ವಜ್ರಾಭರಣವನ್ನು ಹೊಂದಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಈ ವಿಚಾರವನ್ನು ಸ್ವತಃ ತಮನ್ನಾ ಅವರೇ ತಳ್ಳಿ ಹಾಕಿದ್ದಾರೆ.

Tamannaah Bhatia
ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿ

ಇನ್​ಸ್ಟಾಗ್ರಾಮ್​ನಲ್ಲಿ ನಟಿ ತನ್ನ ಉಂಗುರದ ಬೆರಳಿಗೆ ದೊಡ್ಡ ಉಂಗುರ ಧರಿಸಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಆದರೆ, ಅದು ಡೈಮಂಡ್​ ರಿಂಗ್​ ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಫೋಟೋವನ್ನು ಹಂಚಿಕೊಳ್ಳುತ್ತಾ, "ನಿಮಗೆ ಈ ಮಾತು ಇಷ್ಟವಾಗಲ್ಲ. ಆದರೆ ನಾವು ಬಾಟಲ್ ಓಪನರ್‌ನೊಂದಿಗೆ ಫೋಟೋಶೂಟ್ ಮಾಡುತ್ತಿದ್ದೆವು ಮತ್ತು ಅದು ನಿಜವಾದ ವಜ್ರವಲ್ಲ" ಎಂದು ಬರೆದಿದ್ದಾರೆ.

ಇದಕ್ಕೂ ಮೊದಲು, ಆರ್​ಆರ್​ಆರ್​ ಸ್ಟಾರ್​ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಈ ವಜ್ರದ ಉಂಗುರವನ್ನು ತಮನ್ನಾಗೆ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದವು. ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿನ ಕೊಡುಗೆಗಾಗಿ ಉಪಾಸನಾ ಅವರು ಈ ಆಭರಣವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿತ್ತು. 2019ರಲ್ಲಿ ತೆರೆ ಕಂಡ ಈ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಬಾಕ್ಸ್​ ಆಫೀಸ್​ನಲ್ಲೂ ಭರ್ಜರಿ ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ: Watch: ಫ್ಯಾನ್ಸ್​ ಜೊತೆ ಏರ್​ಪೋರ್ಟ್​ನಲ್ಲಿ 'ಕಾವಾಲಾ' ಹಾಡಿಗೆ ಸ್ಟೆಪ್​ ಹಾಕಿದ ತಮನ್ನಾ ಭಾಟಿಯಾ

ಅದಾಗ್ಯೂ ಉಪಾಸನಾ ಅವರು ಈ ಪೋಸ್ಟ್​ ಹಂಚಿಕೊಂಡ ನಂತರ ವದಂತಿಗಳು ಪ್ರಾರಂಭವಾದವು. ಇದೀಗ ತಮನ್ನಾ ಭಾಟಿಯಾ ಈ ಎಲ್ಲಾ ವದಂತಿ ಸುದ್ದಿಗಳನ್ನು ತಳ್ಳಿ ಹಾಕಿದ್ದಾರೆ. ಉಂಗುರ ಕೇವಲ ಬಾಟಲ್​ ಓಪನರ್​ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ಮಾಧ್ಯಮಗಳು ನಟಿಯ ಕೈಯಲ್ಲಿರುವುದು ವಜ್ರದ ಉಂಗುರ ಎಂದು ವರದಿ ಮಾಡಿದ್ದವು. ಇದೀಗ ತಮನ್ನಾ ಅವರ ಪೋಸ್ಟ್​ ಇದೆಲ್ಲದಕ್ಕೂ ಉತ್ತರವಾಗಿದೆ.

ತಮನ್ನಾ ಭಾಟಿಯಾ ಸಿನಿಮಾ: ಇನ್ನೂ ತಮನ್ನಾ ಭಾಟಿಯಾ ಸಿನಿಮಾ ವಿಚಾರವಾಗಿ ನೋಡುವುದಾದರೆ, ಕೊನೆಯದಾಗಿ ಲಸ್ಟ್ ಸ್ಟೋರೀಸ್​ 2 ಮತ್ತು ಜೀ ಕರ್ದಾ ಸೀರಿಸ್​ನಲ್ಲಿ ಕೆಲಸ ಮಾಡಿದ್ದರು. ಸದ್ಯ ಅವರು ತೆಲುಗಿನ ಭೋಲಾ ಶಂಕರ್​ ಮತ್ತು ರಜನಿಕಾಂತ್​ ಅವರ ಜೈಲರ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ, ನಿಖಿಲ್ ಅಡ್ವಾಣಿ ನಿರ್ದೇಶನದ ವೇದಾ (Vedaa) ಸಿನಿಮಾದಲ್ಲಿ ನಟಿಸಲಿದ್ದಾರೆ. ಹೈ ಆ್ಯಕ್ಷನ್​ ಡ್ರಾಮಾ 'ವೇದಾ' ಇತ್ತೀಚೆಗೆ ರಾಜಸ್ಥಾನದಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ.

ಇದನ್ನೂ ಓದಿ: Tamannaah Bhatia: 'ವೇದಾ' ಸಿನಿಮಾಗೆ ಗ್ರೀನ್ ಸಿಗ್ನಲ್​ ಕೊಟ್ಟ ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.