ETV Bharat / entertainment

'ಮದುವೆಯೆಂಬುದು ಪಾರ್ಟಿಯಲ್ಲ, ಅದು ಹೆಚ್ಚಿನ ಜವಾಬ್ದಾರಿ'; ಹೀಗೆ ಹೇಳಿದ್ದೇಕೆ ತಮನ್ನಾ!?

ಮದುವೆ ವಿಚಾರದಲ್ಲಿ ಮಿಲ್ಕ್​ ಬ್ಯೂಟಿ ತಮನ್ನಾ ಭಾಟಿಯ ತಮ್ಮದೇ ಆದ ನಿಲುವು ಹೊಂದಿದ್ದು ಆ ಕುರಿತು ಮೊದಲ ಬಾರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

tamnna bhatia
ನಟಿ ತಮನ್ನಾ ಭಾಟಿಯ
author img

By

Published : Jun 17, 2023, 9:00 AM IST

ಹೈದರಾಬಾದ್: ಅಮೆಜಾನ್​ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ 'ಜೀ ಕರ್ದಾ' ವೆಬ್​ ಸಿರೀಸ್​ನ ಪ್ರಚಾರಕಾರ್ಯದಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ ಭಾಟಿಯಾ ಮದುವೆ ಕುರಿತಾದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮದುವೆ ಎನ್ನುವಂಥದ್ದು ಹೆಚ್ಚಿನ ಜವಾಬ್ದಾರಿಯೊಂದಿಗೆ ಬರುತ್ತದೆ. ಬೇರೆಯವರು ಮದುವೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ನಾವು ಮದುವೆಯಾಗಬಾರದು ಎಂಬ ತಮ್ಮ ಅನಿಸಿಕೆಯನ್ನು ನೀಡಿದ್ದಾರೆ.

ಸಿನಿಮಾದಲ್ಲಿನ ಮಹಿಳೆಯರ ಶೆಲ್ಫ್‌ಲೈಫ್‌ಗೆ ಸಂಬಂಧಿಸಿದಂತೆ ಎಲ್ಲವೂ ಒಳ್ಳೆಯದಕ್ಕಾಗಿ ಬದಲಾಗಿದೆ. ನನಗೆ ಅನಿಸುವ ಪ್ರಕಾರ, ನಿಮಗೆ ಮದುವೆಯಾಗಬೇಕೆಂದ ಎನಿಸಿದಾಗ ನೀವು ಮದುವೆಯಾಗುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಮದುವೆ ಎನ್ನುವುದು ದೊಡ್ಡ ಜವಾಬ್ದಾರಿ. ಮದುವೆ ಎಂದರೆ ಅದು ಮೋಜು ಮಸ್ತಿಯ ಪಾರ್ಟಿಯಲ್ಲ, ಹೇಗೆ ನಾವು ಸೂಕ್ಷ್ಮವಾಗಿ ಸಸ್ಯ- ಗಿಡಗಳನ್ನು, ನಾಯಿಗಳನ್ನು, ಮಕ್ಕಳನ್ನು ನೋಡಿಕೊಳ್ಳುವಂತೆಯೇ ಮದುವೆಗೂ ಸಾಕಷ್ಟು ಕೆಲಸಗಳಿವೆ.

ಹಾಗಾಗಿ ಯಾವಾಗ ನೀವು ಆ ಜವಾಬ್ದಾರಿಯನ್ನು ನಿರ್ವಹಿಸಲು ತಯಾರಾಗಿದ್ದೀರಿ ಆಗ ನೀವು ಮದುವೆಯಾಗಬಹುದು ಆ ಕೆಲಸವನ್ನು ಮಾಡಬಹುದು. ಜೊತೆಗೆ ವಿವಾಹವಾಗುವ ಸಮಯವಾಗಿದೆ ಎಂಬ ಕಾರಣಕ್ಕಾಗಿ ಅಥವಾ ಬೇರೆಯವರು ಆಗುತ್ತಿದ್ದಾರೆ ಎಂಬ ಕಾರಣಕ್ಕಾಗಿ ಆಗಬೇಡಿ ಎಂಬ ಸಲಹೆಯ ಅಭಿಪ್ರಾಯವನ್ನೂ ಅವರು ನೀಡಿದ್ದಾರೆ. ಈ ಮೂಲಕ ತಮನ್ನಾ ಈಗ ವಿವಾಹವಾಗುವ ಕಲ್ಪನೆಯನ್ನು ಹೊಂದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿರುವ ಮಿಲ್ಕಿ​ ಬ್ಯೂಟಿ, ನಾನು ವರ್ಷಗಳ ಹಿಂದೆ ಸಿನಿಮಾ ಇಂಡಸ್ಟ್ರೀಯಲ್ಲಿ ಕೆಲಸ ಮಾಡಲು ಶುರುಮಾಡಿದಾಗ ನಟನಾ ವೃತ್ತೀ ಜೀವನ ಕೇವಲ 8 ರಿಂದ 10 ವರ್ಷಗಳವರೆಗೆ ಮಾತ್ರ ಎಂದುಕೊಂಡಿದ್ದೆ. ಹಾಗಾಗಿ ನಾನು ನನ್ನ ಮುಂದಿನ ಜೀವನದ ಬಗ್ಗೆ ಆಗ ಲೆಕ್ಕ ಹಾಕಿದ್ದು ಅದರ ಪ್ರಕಾರ ನನಗೆ 30 ವರ್ಷ ತುಂಬುವ ಹೊತ್ತಿಗೆ ನನ್ನ ವೃತ್ತೀ ಜೀವನದ ಕೆಲಸವೆಲ್ಲ ಮುಗಿಸಿ ಮದುವೆಯಾಗಿ 2 ಮಕ್ಕಳನ್ನು ಪಡೆಯುತ್ತೇನೆ ಎಂದು ಭಾವಿಸಿದ್ದೆ.

ಹಾಗಾಗಿ ಅಂದು ನಾನು ನನ್ನ 30 ವರ್ಷದ ನಂತರ ಜೀವನದ ಬಗ್ಗೆ ಯೋಜಿಸಿರಲಿಲ್ಲ. ಯಾವಾಗ 30 ರ ವರ್ಷಕ್ಕೆ ಕಾಲಿಟ್ಟೆ ಆಗ ನಾನು ಈಗಷ್ಟೇ ಹುಟ್ಟಿರುವೆ ಎಂಬುದನ್ನು ಕಂಡುಕೊಂಡೆ. ಆ ಯೋಚನೆ ಆ ಸಮಯ ನನಗೆ ಪೂರ್ಣ ಜನನದಂತಿತ್ತು. ಇಂದು ನಮಗೆ ಹೆಚ್ಚಿನ ಆಯ್ಕೆಗಳಿಲ್ಲ, ಇರುವ ದಾರಿಗಳನ್ನೇ ನಾವು ಆಯ್ಕೆಯೆಂದು ಪರಿಗಣಿಸಬೇಕು ಎಂದು ವಿವಾಹದ ಕುರಿತಾದ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಸಿನಿಮಾಗೆ ಸಂಬಂಧಿಸಿ ತಮನ್ನಾ ಅವರ ಸದ್ಯದ ಪ್ರಾಜೆಕ್ಟ್​ಗಳನ್ನು ನೋಡುವುದಾದರೆ, ತಮನ್ನಾ ತಮ್ಮ ಗೆಳೆಯ ವಿಜಯ್ ವರ್ಮಾ ಜೊತೆಗಿನ 'ಲಸ್ಟ್ ಸ್ಟೋರೀಸ್ 2' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ, ಕೊಂಕಣ ಸೆಂಶರ್ಮಾ, ಆರ್ ಬಾಲ್ಕಿ ಮತ್ತು ಸುಜೋಯ್ ಘೋಷ್ ನಿರ್ದೇಶಿಸಿದ್ದಾರೆ. 'ಲಸ್ಟ್ ಸ್ಟೋರೀಸ್ 2' ಚಲನಚಿತ್ರವು ಜೂನ್ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ: 'ಲಸ್ಟ್ ಸ್ಟೋರೀಸ್ 2' ಸೆಟ್​​ನಲ್ಲಿ ಅರಳಿದ ವಿಜಯ್ ವರ್ಮಾ-ತಮನ್ನಾ ಭಾಟಿಯಾ ಪ್ರೇಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.