ETV Bharat / entertainment

'ಟೇಲ್ಸ್ ಆಫ್ ಮಹಾನಗರ' ಟ್ರೇಲರ್​ ರಿಲೀಸ್​: ಸೆ.15ಕ್ಕೆ ತೆರೆ ಕಾಣಲಿದೆ ವಿಭಿನ್ನ ಕಥಾಹಂದರವುಳ್ಳ ಸಿನಿಮಾ - Tales of Mahanagara trailer

Tales of Mahanagara: ಕನ್ನಡದ 'ಟೇಲ್ಸ್ ಆಫ್ ಮಹಾನಗರ' ಸಿನಿಮಾ ಸೆಪ್ಟೆಂಬರ್ 15 ರಂದು ತೆರೆಕಾಣಲಿದೆ.

Tales of Mahanagara
ಟೇಲ್ಸ್ ಆಫ್ ಮಹಾನಗರ
author img

By ETV Bharat Karnataka Team

Published : Sep 6, 2023, 4:54 PM IST

ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚಕ್ಕೆ ಈಗಾಗ್ಲೇ ಸಾಕಷ್ಟು ಕಿರುತೆರೆ ನಟ ನಟಿಯರು ಎಂಟ್ರಿ ಕೊಟ್ಟು ಸಕ್ಸಸ್ ಕಂಡಿದ್ದಾರೆ. ಇದೀಗ ಪುನರ್ ವಿವಾಹ ಮತ್ತು ಪತ್ತೆಧಾರಿ ಪ್ರತಿಭಾ ಸೀರಿಯಲ್ ಖ್ಯಾತಿಯ ಅಥರ್ವ್ ಬಿಗ್​ ಸ್ಕ್ರೀನ್​ನಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಟೇಲ್ಸ್ ಆಫ್ ಮಹಾನಗರ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ ಬಿಗ್​​ ಸ್ಕ್ರೀನ್​ಗೆ ಎಂಟ್ರಿ ಕೊಡುತ್ತಿದ್ದಾರೆ ಅಥರ್ವ್.

  • " class="align-text-top noRightClick twitterSection" data="">

ಹೆಸರಾಂತ ನಿರ್ದೇಶಕ ಗೆಜ್ಜೆನಾದ ವಿಜಯ್ ಕುಮಾರ್ ಪುತ್ರ ಅಥರ್ವ್, ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಬೆಳೆಯಲು ಸರ್ವ ತಯಾರಿಗಳನ್ನೂ ಮಾಡಿಕೊಂಡು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಟೇಲ್ಸ್ ಆಫ್ ಮಹಾನಗರ ಚಿತ್ರದ ಟ್ರೇಲರ್​​ ಬಿಡುಗಡೆ ಆಗಿ ಸಿನಿ ಪ್ರೇಮಿಗಳಿಗೆ ಇಷ್ಟವಾಗಿದೆ.

Tales of Mahanagara
'ಟೇಲ್ಸ್ ಆಫ್ ಮಹಾನಗರ' ಚಿತ್ರತಂಡ​

ಮೊದಲು ಮಾತು ಶುರು ಮಾಡಿದ ಅಥರ್ವ್, ಪುನರ್ ವಿವಾಹ ಹಾಗೂ ಪತ್ತೆಧಾರಿ ಪ್ರತಿಭಾ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೆ. ನನಗಿದು ಮೊದಲ ಸಿನಿಮಾ. ಈ ಚಿತ್ರದ ಮೊದಲಾರ್ಧ ಮೂರು ವಿಭಿನ್ನ ಕಥೆಗಳ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಂದೇ ಆಗುತ್ತವೆ. ನಾನು ಈ ಮೊದಲು, ನಮ್ಮ ಅಪ್ಪನ ಕೈಯಲ್ಲಿ ದುಡ್ಡು ಹಾಕಿಸುವುದು ಬೇಡ. ನಾನೇ ನಿರ್ಮಾಪಕರನ್ನು ಹುಡುಕುತ್ತೇನೆ ಎಂದು ತಿಳಿಸಿದ್ದೆ. ಆದರೆ, ಅದು ಆಗಲಿಲ್ಲ, ಅಪ್ಪನೇ ನಿರ್ಮಾಪಕರಾದರು. ಈ ವಿಭಿನ್ನ ಕಥಾನಕವನ್ನು ಸೆಪ್ಟೆಂಬರ್ 15 ರಂದು ಬಿಡುಗಡೆಗೊಳಿಸುತ್ತಿದ್ದೇವೆ, ಎಲ್ಲರೂ ನೋಡಿ ಎಂದು ಕೇಳಿಕೊಂಡರು.

Tales of Mahanagara
ಟೇಲ್ಸ್ ಆಫ್ ಮಹಾನಗರ ಚಿತ್ರತಂಡ

ನಿರ್ಮಾಪಕ ಗೆಜ್ಜೆನಾದ ವಿಜಯ್ ಕುಮಾರ್ ಮಾತನಾಡಿ, ನನ್ನ ಮಗ ಅಥರ್ವ್ ಹಾಗೂ ನಿರ್ದೇಶಕ ಕಿರಣ್ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಆನಂತರ ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್ ಈ ಚಿತ್ರದ ಟೀಸರ್​ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಮಾಮ ಫೀಸ್ಟ್ ಅವರು ನಮ್ಮೊಟ್ಟಿಗಿದ್ದಾರೆ. ಧರ್ಮೇಂದ್ರ ಎಂ ರಾವ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಜನಮನ್ನಣೆ ಪಡೆಯುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: Parineeti Raghav: ಈ ತಿಂಗಳಲ್ಲೇ ಹಸೆಮಣೆ ಏರಲಿದ್ದಾರೆ ರಾಘವ್ ಚಡ್ಡಾ ಪರಿಣಿತಿ ಚೋಪ್ರಾ; ಮದುವೆ ಡೀಟೆಲ್ಸ್​ ಇಲ್ಲಿದೆ!

ನಿರ್ದೇಶಕ ಕಿರಣ್ ವೆನಿಯಲ್ ಮಾತನಾಡಿ, ನಾನು ಎಂಜಿನಿಯರ್ ವಿದ್ಯಾರ್ಥಿ. ಸಿನಿಮಾ ಮಾಡುವುದು ನನ್ನ ಕನಸು. ಆ ಕನಸೀಗ ಈಡೇರಿದೆ. ಅದಕ್ಕೆ ಕಾರಣ ನಿರ್ಮಾಪಕರು. ಚಿತ್ರ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ಶೀಘ್ರದಲ್ಲೇ ನಮ್ಮ ಊರಿನಲ್ಲಿ ಸಿಗೋಣ'.. ಮೋಹಕತಾರೆ ರಮ್ಯಾ ಟ್ವೀಟ್​

ಟೇಲ್ಸ್ ಆಫ್ ಮಹಾನಗರ ಚಿತ್ರದಲ್ಲಿ ಅಥರ್ವ್ ಜೋಡಿಯಾಗಿ ರೆಮೋಲ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ನಟ ಆರ್ ಜೆ ಅನೂಪ ಹಾಗೂ ನಾಗರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಗೋಪಾಲ್ ಸಂಕಲನವಿದ್ದು, ಸಿದ್ದಾರ್ಥ್ ಪರಾಶರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸದ್ಯ ಟ್ರೈಲರ್​ನಿಂದ ಗಮನ ಸೆಳೆಯುತ್ತಿರೋ ಟೇಲ್ಸ್ ಆಫ್ ಮಹಾನಗರ ಚಿತ್ರ ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.