ETV Bharat / entertainment

ಮೋಹಕ ತಾರೆ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​ - ಈಟಿವಿ ಭಾರತ ಕನ್ನಡ

ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ನಿರ್ಮಾಣದ, ರಾಜ್.ಬಿ.ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನವೆಂಬರ್ 24ರಂದು ಬಿಡುಗಡೆಯಾಗಲಿದೆ.

Swathi mutthina male haniye
ಮೋಹಕ ತಾರೆ ರಮ್ಯಾ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್​
author img

By ETV Bharat Karnataka Team

Published : Oct 24, 2023, 2:30 PM IST

ಮೋಹಕ ತಾರೆ ರಮ್ಯಾ ನಿರ್ಮಾಣದ ತಮ್ಮ 'ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌' ಮೂಲಕ ನಿರ್ಮಾಣ ಮಾಡುತ್ತಿರುವ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. 'ಒಂದು ಮೊಟ್ಟೆಯ ಕಥೆ', 'ಟೋಬಿ' ಖ್ಯಾತಿಯ ಪ್ರತಿಭಾವಂತ ನಟ ರಾಜ್​.ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಸಿನಿ ರಸಿಕರು ಕಾತುರದಿಂದ ಕಾಯುತ್ತಿರುವ ಚಿತ್ರವೊಂದರಲ್ಲಿ ಇದೂ ಒಂದು. ಸದ್ದಿಲ್ಲದೇ ಶೂಟಿಂಗ್​ ಮುಗಿಸಿರುವ ಈ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್​ ಆಗಿದೆ.

  • ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು!
    ನಮ್ಮ ಚಿತ್ರ "ಸ್ವಾತಿ ಮುತ್ತಿನ ಮಳೆ ಹನಿಯೇ" ನವೆಂಬರ್ ೨೪ ರಂದು ರಾಜ್ಯಾದ್ಯಂತ ಬಿಡುಗಡೆ.

    Wish you all Happy Vijayadashami. We are elated to share the release date of #SwathiMutthinaMaleHaniye with all of you. See you at the movies 🍿#SMMHonNovember24 pic.twitter.com/sqXf3RNEA2

    — Raj B Shetty (@RajbShettyOMK) October 24, 2023 " class="align-text-top noRightClick twitterSection" data=" ">

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ತಮ್ಮ ನಿರ್ಮಾಣ ಸಂಸ್ಥೆಯಾದ 'ಆಪಲ್ ಬಾಕ್ಸ್ ಸ್ಟುಡಿಯೋಸ್' ವತಿಯಿಂದ ಮೊದಲ ಬಾರಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ರಮ್ಯಾ 'ಲೈಟರ್ ಬುದ್ಧ ಫಿಲಂಸ್' ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ನಟ-ನಿರ್ದೇಶಕ ರಾಜ್.ಬಿ.ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿದ್ದು, ಅವರೊಂದಿಗೆ ಸಿರಿ ರವಿಕುಮಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆಗಾಗಿ ಇಡೀ ಕರುನಾಡ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದರು. ಕೊನೆಗೂ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಪೋಸ್ಟರ್​ ಹಂಚಿಕೊಂಡಿರುವ ರಾಜ್​.ಬಿ.ಶೆಟ್ಟಿ, "ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು! ನಮ್ಮ ಚಿತ್ರ "ಸ್ವಾತಿ ಮುತ್ತಿನ ಮಳೆ ಹನಿಯೇ" ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆ" ಎಂದು ಬರೆದುಕೊಂಡಿದ್ದಾರೆ. ಚಿತ್ರವು ಮುಂದಿನ ತಿಂಗಳ 24ರಂದು ತೆರೆ ಕಾಣಲಿದೆ.

ಇದನ್ನೂ ಓದಿ: 'ರಾಜಹಂಸ' ಬಿಟ್ಟು ಮಲೆನಾಡಿನ 'ಕೆರೆಬೇಟೆ'ಗೆ ಬಂದ್ರು ಗೌರಿ ಶಂಕರ್​

ಸಿನಿಮಾ 2022 ವಿಜಯದಶಮಿಯಂದು ಘೋಷಿಸಲಾಗಿದ್ದು, ಈ ವಿಜಯದಶಮಿಗೆ ಬಿಡುಗಡೆ ದಿನಾಂಕ ಅನೌನ್ಸ್​ ಆಗಿದೆ. ಸಿನಿಮಾವನ್ನು ಹಲವಾರು ಮನೋಜ್ಞ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಮೊದಲನೇ ನೋಟದ ಪೋಸ್ಟರ್ ಹಾಗೂ ಮುಖ್ಯ ಪಾತ್ರಗಳನ್ನು ಪರಿಚಯಿಸಲು ಬಿಡುಗಡೆ ಮಾಡಿದ ಪೋಸ್ಟರ್​ಗಳು ಮೂಲಕ ಈಗಾಗಲೇ ಎಲ್ಲರ ಗಮನವನ್ನು ಸೆಳೆದಿದೆ. 'ಪ್ರೇರಣಾ' ಮತ್ತು 'ಅನಿಕೇತ್' ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್.ಬಿ.ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಒಂದು ಪ್ರಬುದ್ಧ ಲವ್‌ಸ್ಟೋರಿ. ಒಂದು ಭಾವುಕ ಪ್ರಯಾಣ. ಈ ಚಿತ್ರದಲ್ಲಿ ಪ್ರತಿಭಾನ್ವಿತ ನಟರ ದಂಡೇ ಇದ್ದು, ಮುಖ್ಯವಾಗಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ - ಛಾಯಾಗ್ರಹಣ ಹಾಗು ಸಂಕಲನದ ಜವಾಬ್ದಾರಿಯನ್ನು ನಿರ್ವಹಹಿಸಲಿದ್ದಾರೆ. ಸದ್ಯ ಪೋಸ್ಟರ್​ನಿಂದಲೇ ಕುತೂಹಲ ಹುಟ್ಟಿಸಿರೋ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ಟ್ರೇಲರ್​ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಆದಷ್ಟು ಬೇಗ ಈ ಚಿತ್ರದ ಟ್ರೇಲರ್​​ ರಿಲೀಸ್​ ಆಗಲಿದೆ. ಬಳಿಕ ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ಟಗರು ಪಲ್ಯ 'ಸಂಬಂಜ ಅನ್ನೋದು ದೊಡ್ದು ಕನಾ' ಸಾಂಗ್ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.