ETV Bharat / entertainment

'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರದ ಟೀಸರ್‌ ರಿಲೀಸ್‌ - ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಟೀಸರ್

ಬಾಲಿವುಡ್‌ ನಟ ರಣದೀಪ್ ಹೂಡಾ ಅವರ ಚೊಚ್ಚಲ ನಿರ್ದೇಶನದ ಸ್ವಾತಂತ್ರ್ಯ ವೀರ್ ಸಾವರ್ಕರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಇದು ವಿ.ಡಿ.ಸಾವರ್ಕರ್ ಜೀವನ ಆಧರಿಸಿದೆ.

Swatantrya Veer Savarkar teaser
'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರದ ಟೀಸರ್‌ (ಚಿತ್ರ ಕೃಪೆ ಯೂಟ್ಯೂಬ್​)
author img

By

Published : May 29, 2023, 10:04 AM IST

ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದುತ್ವ ಸಿದ್ಧಾಂತವಾದಿ ವಿನಾಯಕ್ ದಾಮೋದರ್ (ವಿ.ಡಿ) ಸಾವರ್ಕರ್ ಜೀವನಾಧಾರಿತ 'ಸ್ವಾತಂತ್ರ್ಯ ವೀರ ಸಾವರ್ಕರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಭಾನುವಾರ ಅವರ 140 ನೇ ಜನ್ಮದಿನದ ಪ್ರಯುಕ್ತ ಚಿತ್ರತಂಡ ಸಿನಿಮಾದ ಟೀಸರ್‌ ಅನಾವರಣಗೊಳಿಸಿದೆ. ಚಿತ್ರವನ್ನು ನಟ ರಣದೀಪ್ ಹೂಡಾ ನಿರ್ದೇಶಿಸಿದ್ದಾರೆ. ಉತ್ಕರ್ಷ್ ನೈತಾನಿ ಕಥೆ ಬರೆದಿದ್ದಾರೆ.

ಸಂಭಾವ್ಯ ವಿವಾದಾತ್ಮಕ ಚಿತ್ರದ ಟೀಸರ್ ರಣದೀಪ್ ಅವರ ಧ್ವನಿಯೊಂದಿಗೆ ಪ್ರಾರಂಭವಾಗುತ್ತದೆ. ಹೂಡಾ ವೀರ್ ಸಾವರ್ಕರ್ ಪಾತ್ರ ಪರಕಾಯ ಪ್ರವೇಶ ಮಾಡಿದ್ದಾರೆ. ಥೇಟ್‌ ಸಾವರ್ಕರ್‌ ಅವರಂತೆ ಕಾಣಿಸುತ್ತಿದ್ದಾರೆ. ಟೀಸರ್‌ನಲ್ಲಿ 90 ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟ ನಡೆಯಿತು. ಆದರೆ ಕೆಲವೇ ಜನರು ಈ ಯುದ್ಧದಲ್ಲಿ ಹೋರಾಡಿದರು. ಉಳಿದವರೆಲ್ಲ ಅಧಿಕಾರಕ್ಕಾಗಿ ಹಂಬಲಿಸಿದ್ದರು. "ಮಹಾತ್ಮ ಗಾಂಧೀಜಿ ಕೆಟ್ಟವರಲ್ಲ. ಆದರೆ ಅವರು ತಮ್ಮ ಅಹಿಂಸಾತ್ಮಕ ಚಿಂತನೆಗೆ ಅಂಟಿಕೊಳ್ಳದಿದ್ದರೆ ದೇಶ 35 ವರ್ಷಗಳ ಹಿಂದೆಯೇ ಸ್ವತಂತ್ರವಾಗುತ್ತಿತ್ತು" ಡೈಲಾಗ್‌ಗಳು ಕೇಳಿ ಬರುತ್ತವೆ.

  • " class="align-text-top noRightClick twitterSection" data="">

ಟೀಸರ್​​ನಲ್ಲಿರುವಂತೆ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಖುದಿರಾಮ್ ಬೋಸ್ ಮತ್ತು ಸಶಸ್ತ್ರ ಕ್ರಾಂತಿಗೆ ಪ್ರೇರಣೆ ನೀಡಿದವರು ವೀರ್ ಸಾವರ್ಕರ್. ಬ್ರಿಟಿಷರು ಅತ್ಯಂತ ಭಯಪಡುತ್ತಿದ್ದ ಕ್ರಾಂತಿಕಾರಿಗಳಲ್ಲಿ ಅವರು ಒಬ್ಬರು ಎಂದು ಹೇಳಲಾಗುತ್ತದೆ. ಶಕ್ತಿಯುತ ಡೈಲಾಗ್‌ಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿವೆ.

"ಸಾವರ್ಕರ್ ಅವರು ಅದ್ಭುತ ಜೀವನ ನಡೆಸಿದರು. ನಾನು ಚಲನಚಿತ್ರಕ್ಕಾಗಿ ಸಂಶೋಧಿಸುವಾಗ ಅವರ ಬಗ್ಗೆ ಹೆಚ್ಚು ತಿಳಿದುಕೊಂಡೆ. ಆಗ ನಾನು ಅವರನ್ನು ಅಪಾರವಾಗಿ ಮೆಚ್ಚಿದೆ. ಈಗ ಅವರ 140 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಿತ್ರದ ಟೀಸರ್​ ಬಿಡುಗಡೆ ಮಾಡಲು ನನಗೆ ಅಪಾರ ಸಂತೋಷವಾಗಿದೆ"- ರಣದೀಪ್ ಹೂಡಾ.

ಈ ವರ್ಷ ಬಿಡುಗಡೆಯಾಗಲಿರುವ ಐತಿಹಾಸಿಕ ಚಿತ್ರ ರಣದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಚಿತ್ರಕ್ಕಾಗಿ ನಟ ಸಾಕಷ್ಟು ಶ್ರಮಿಸಿದ್ದಾರೆ ಎಂಬುದು ಟೀಸರ್‌ನಿಂದಲೇ ತಿಳಿಯುತ್ತದೆ.

ಕನ್ನಡದಲ್ಲಿ ವೀರ ಸಾವರ್ಕರ್ ಬಯೋಪಿಕ್: ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾನ್ ಹೋರಾಟಗಾರ ವೀರ್ ಸಾವರ್ಕರ್ ಬಯೋಪಿಕ್‌ ಕನ್ನಡದಲ್ಲಿ ಸುನೀಲ್ ರಾವ್ ಅಭಿನಯಿಸುತ್ತಿದ್ದಾರೆ. ಚೈತ್ರದ ಚಂದ್ರಮ ಹಾಗೂ ಯುಗ ಪುರುಷ ಸಿನಿಮಾವನ್ನ ನಿರ್ದೇಶನ ಮಾಡಿದ್ದ ರಾಧಾಕೃಷ್ಣ ಪಲ್ಲಕ್ಕಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಎಕ್ಸ್‌ಕ್ಯೂಸ್ ಮೀ, ಚಪ್ಪಾಳೆ, ಬಾ ಬಾರೋ ರಸಿಕ, ಸಖ ಸಖಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸುನೀಲ್ ರಾವ್ ತನ್ನದೇ ಬೇಡಿಕೆ ಹೊಂದಿದ್ದಾರೆ. ಮಿನುಗು ಸಿನಿಮಾ ನಂತರ ಸುನೀಲ್ ರಾವ್ ಹಲವು ವರ್ಷಗಳ ಬಳಿಕ ಸಿನಿಮಾ ರಂಗದಿಂದ ಕೊಂಚ ಸಮಯ ದೂರ ಉಳಿದಿದ್ದರು. ತುರ್ತು ನಿರ್ಗಮನ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿರುವ ಸುನೀಲ್ ರಾವ್ ಈಗ ಸಾವರ್ಕರ್ ಬಯೋಪಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾವರ್ಕರ್‌ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಂದೂಕಿನೊಂದಿಗೆ ಛತ್ರಿ ಹಿಡಿದು ಬಂದ 'ಎಕ್ಸ್‌ಕ್ಯೂಸ್ ಮೀ' ಹೀರೋ..'ವೀರ್ ಸಾವರ್ಕರ್ ಸಿನಿಮಾ'ದ ಫಸ್ಟ್ ಲುಕ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.