ಹೊಸ ವೆಬ್ ಸರಣಿ ತಾಲಿ ಅಲ್ಲಿ ಬಾಲಿವುಡ್ ತಾರೆ ಸುಶ್ಮಿತಾ ಸೇನ್ ತೃತೀಯ ಲಿಂಗಿ ( transgender activist) ಕಾರ್ಯಕರ್ತೆ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ರಚನೆಯ ತಾಲಿ ಸೀರಿಸ್ ನಲ್ಲಿ ತೃತೀಯಲಿಂಗಿ ಕಾರ್ಯಕರ್ತೆ ಗೌರಿ ಸಾವಂತ್ ಪಾತ್ರ ನಿರ್ವಹಿಸಲಿದ್ದಾರೆ.
ಆರ್ಯ ವೆಬ್ ಸರಣಿಯ ನಂತರ ತಾಲಿ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ ಸೇನ್ ತಮ್ಮ ಫಸ್ಟ್ ಲುಕ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಫೋಟೋದಲ್ಲಿ, ಕೆಂಪು - ಹಸಿರು ಸೀರೆ ಧರಿಸಿ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಹಣೆಯ ಮೇಲೆ ದೊಡ್ಡ ಬಿಂದಿ, ಕೆಂಪು ಲಿಪ್ ಸ್ಟಿಕ್ ಹಾಕಿದ್ದು, ಸಖತ್ ಬೋಲ್ಡ್ ಲುಕ್ ನೀಡಿದ್ದಾರೆ. ಈ ಫೋಟೋ ಹಂಚಿಕೊಂಡು, ತೃತೀಯ ಲಿಂಗಿಗಳ ಹೋರಾಟ, ಕಷ್ಟಗಳನ್ನು ಈ ವೆಬ್ ಸಿರಿಸ್ ಹೇಳಲಿದೆ ಎಂದು ತಿಳಿಸಿದ್ದಾರೆ.
ಈ ತಾಲಿ ವೆಬ್ ಸೀರಿಸ್ ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಗೌರಿ ಸಾವಂತ್ ಅವರ ಜೀವನವನ್ನು ಆಧರಿಸಿದೆ. ಸುಶ್ಮಿತಾ ಅವರು ಗೌರಿ ಪಾತ್ರದಲ್ಲಿ ನಟಿಸುತ್ತಿದ್ದು, ಗೌರಿ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಅವಕಾಶ ಎಲ್ಲರಿಗೂ ಸಿಗಲಿದೆ.
ಈ ವೆಬ್ ಸರಣಿಯನ್ನು ಗ್ಲೋಬಲ್ ಸ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಮೀಡಿಯಾ ಸೊಲ್ಯೂಷನ್ಸ್ ಬ್ಯಾನರ್ ಅಡಿ ನಿರ್ಮಿಸಲಾಗುತ್ತಿದೆ. ಇದನ್ನು ಅರ್ಜುನ್ ಸಿಂಗ್ ಬರನ್ ಮತ್ತು ಕಾರ್ತಿಕ್ ಡಿ ನಿಶಾಂದರ್ ನಿರ್ಮಿಸಿದ್ದಾರೆ. ವೆಬ್ ಸೀರೀಸ್ 6 ಕಂತುಗಳಲ್ಲಿ ತಯಾರಾಗಲಿದೆ. ವರದಿಗಳ ಪ್ರಕಾರ, ಈ ವೆಬ್ ಸರಣಿಯ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಮರಾಠಿ ಚಿತ್ರ ನಿರ್ಮಾಪಕ ರವಿ ಜಾಧವ್ ಈ ವೆಬ್ ಸರಣಿಯ ನಿರ್ದೇಶಕರು. ವೂಟ್‌ನಲ್ಲಿ ಸೀರಿಸ್ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹೃದಯಾಘಾತ.. ಅಸ್ಸೋಂ ಬಾಲ ಕಲಾವಿದೆ ಸಾವು ; ಆಸ್ಪತ್ರೆ ಮೇಲ್ವಿಚಾರಕಿ ಅಮಾನತು!
ಗಣೇಶ್ ಆಗಿ ಹುಟ್ಟಿ ಪುಣೆಯಲ್ಲಿ ಬೆಳೆದ ಸಾವಂತ್, 2013ರಲ್ಲಿ ಸಲ್ಲಿಸಲಾದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಅರ್ಜಿದಾರರಲ್ಲಿ ಒಬ್ಬರಾಗಿದ್ದರು. ಟ್ರಾನ್ಸ್ ಜೆಂಡರ್ ಅನ್ನು ಸುಪ್ರೀಂ ಕೋರ್ಟ್ 2014ರಲ್ಲಿ ಅನ್ನು ಮೂರನೇ ಲಿಂಗ ಎಂದು ಪರಿಗಣಿಸಿ ಅಂತಿಮ ತೀರ್ಪು ನೀಡಿತ್ತು. ಅವರ ಕುರಿತಾಗಿದೆ ಈ ತಾಲಿ ಸೀರಿಸ್.