ETV Bharat / entertainment

ಮಾಜಿ ವಿಶ್ವ ಸುಂದರಿಗೆ ಹೃದಯಾಘಾತ.. ಎರಡು ದಿನಗಳ ಬಳಿಕ ಬಹಿರಂಗಪಡಿಸಿದ ನಟಿ ಸುಶ್ಮಿತಾ ಸೇನ್ - Sushmita Sen suffers heart attack

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹೃದಯಾಘಾತ - ಎರಡು ದಿನಗಳ ಬಳಿಕ ಬಹಿರಂಗಪಡಿಸಿದ ಖ್ಯಾತ ನಟಿ - ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಟಿಯ ಇನ್ಸ್​ಟಾಗ್ರಾಮ್​ ಪೋಸ್ಟ್

Sushmita Sen suffers heart attack
Sushmita Sen suffers heart attack
author img

By

Published : Mar 2, 2023, 5:43 PM IST

ಹೈದರಾಬಾದ್​: ಕಳೆದ ಎರಡು ದಿನಗಳ ಹಿಂದೆ ತಮಗೆ ಹೃದಯಾಘಾತ ಆಗಿರುವುದಾಗಿ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹೇಳಿಕೊಂಡಿದ್ದಾರೆ. ಈ ಆಘಾತಕಾರಿ ವಿಷಯ ಹೇಳಿದ ತಕ್ಷಣ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಸ್ತೃತವಾಗಿ ಬರೆದುಕೊಂಡಿರುವ ಅವರು, ಯಾರೂ ಆತಂಕಪಡುವ ಅಗತ್ಯವಿಲ್ಲ. ಸದ್ಯ ತಾನು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದಾರೆ. ಆದರೆ, ಈ ಸುದ್ದಿ ಕೇಳಿದ ತಕ್ಷಣ ಅವರ ಹಿತೈಷಿಗಳು, ಅಭಿಮಾನಿಗಳು, ಬಿಟೌನ್​ ನಟ-ನಟಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಮತ್ತಷ್ಟು ಬಿಸಿ ಏರಿಸಿದ ಮಾಳವಿಕಾ ಮೋಹನನ್ ಅವತಾರ: ನಟಿಯ ನೋಟಕ್ಕೆ ಫ್ಯಾಷನ್​ ಪ್ರಿಯರ ಫಿದಾ

ಎರಡು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಲ್ಲದೇ ಸ್ಟೆಂಟ್ಸ್​ ಕೂಡ ಅಳವಡಿಸಲಾಗಿದೆ. ನನಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹೃದಯಾಘಾತ ಆದ ತಕ್ಷಣ ವೈದ್ಯಕೀಯ ನೆರವು ಸಿಕ್ಕಿತು. ಈಗ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್​ ತಿಳಿಸಿದ್ದಾರೆ.

ಅಲ್ಲದೇ ​ತಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಹಿತೈಷಿಗಳು, ಅಭಿಮಾನಿಗಳು, ಎಲ್ಲರಿಗೂ ಧನ್ಯವಾದ. ಎಲ್ಲವನ್ನೂ ಇನ್ನೊಂದು ಪೋಸ್ಟ್‌ನಲ್ಲಿ ವಿವರಿಸುವೆ. ಸದ್ಯಕ್ಕೆ ಧನ್ಯವಾದ, ವಿಷಯ ಹೇಳಬೇಕಿತ್ತು. ನನ್ನ ಆರೋಗ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಯಿಂದ ನಾನು ಈಗ ಆರೋಗ್ಯವಾಗಿದ್ದೇನೆ. ಸದ್ಯ ನನ್ನಲ್ಲಿ ಯಾವುದೇ ಭಯವಿಲ್ಲ. ಈ ಮೊದಲಿನಂತೆಯೇ ನಾನು ಸಾಮಾನ್ಯ ಜೀವನವನ್ನು ನಡೆಸಬಲ್ಲೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಅವರು ಇನ್ಸ್​ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದ ತಕ್ಷಣ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅವರ ಆರೋಗ್ಯ ಸುಧಾರಿಸಲೆಂದು ಹಲವರು ದೇವರಲ್ಲಿ ಬೇಡಿಕೊಳ್ಳುತ್ತ, ಕಾಮೆಂಟ್​ ಮಾಡುತ್ತಿದ್ದಾರೆ. ಸದ್ಯ ಸುಶ್ಮಿತಾ ಸೇನ್ ಅವರ ಇನ್ಸ್​ಟಾಗ್ರಾಮ್​ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

47 ವರ್ಷದ ಸುಶ್ಮಿತಾ ಸೇನ್​ ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡವರು. ಅವರು ಪ್ರತಿದಿನ ತಪ್ಪದೇ ವರ್ಕೌಟ್​ ಮಾಡುತ್ತಾರೆ. ಈ ಮಧ್ಯೆ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹಾಗಾಗಿ ನೆಟಿಜನ್​ಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಿದ ನಟಿ ಕಾರುಣ್ಯ ರಾಮ್ ತಂಡ: 'ಸಂಸ್ಕಾರ'ಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಬಾಲಿವುಡ್​​ನ ಗ್ಲಾಮರ್‌ ತಾರೆಯೂ ಆಗಿರುವ ಅವರು, ಇತ್ತೀಚೆಗೆ ತಮ್ಮ ಖಾಸಗಿ ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಖತ್​ ಸುದ್ದಿಯಾಗಿದ್ದರು. ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಅವರ ಡೇಟಿಂಗ್​ ಮಾಡುತ್ತಿರುವುದಾಗಿ ಹೇಳಿದ್ದರು. ಈ ಸುದ್ದಿ ಸಂಚಲನ ಸೃಷ್ಟಿಸಿತ್ತು. ಅದಕ್ಕೂ ಮುನ್ನ ರೋಹ್ಮನ್​ ಶಾಲ್​, ವಿಕ್ರಮ್​ ಭಟ್​, ರಣದೀಪ್ ಹೂಡಾ, ಮುದ್ದಿಸ್ಸಿರ್​ ಅಜೀಜ್, ವಾಸಿಂ ಅಕ್ರಮ್​, ಮಾನವ್ ಮೆನನ್ ಸೇರಿದಂತೆ ಹಲವರರೊಂದಿಗೆ ಡೇಟಿಂಗ್​ ಮಾಡುತ್ತಿದ್ದರು ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.