ETV Bharat / entertainment

ಕೇರಳ ಸ್ಟೋರಿ ಬ್ಯಾನ್​ 'ರಾಜಕೀಯ ಪ್ರೇರಿತ': ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳಿ ಎಂದ ನಿರ್ದೇಶಕ

ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧಿಸಲಾಗಿದ್ದು, ಈ ಬಗ್ಗೆ ನಿರ್ದೇಶಕ ಸುದಿಪ್ತೋ ಸೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

West Bengal bans kerala story
ಪಶ್ಚಿಮ ಬಂಗಾಳದಲ್ಲಿ ಕೇರಳ ಸ್ಟೋರಿ ಬ್ಯಾನ್
author img

By

Published : May 9, 2023, 3:32 PM IST

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರವು 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಚಲನಚಿತ್ರ ನಿರ್ದೇಶಕ ಸುದಿಪ್ತೋ ಸೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು "ರಾಜಕೀಯ ಪ್ರೇರಿತ" ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಲನಚಿತ್ರವನ್ನು ವೀಕ್ಷಿಸಿ ನಂತರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಅಲ್ಲದೇ "ಮಮತಾ ಬ್ಯಾನರ್ಜಿ ಅವರು ಚಲನಚಿತ್ರವನ್ನು ನೋಡದೇ ಅದನ್ನು ನಿಷೇಧಿಸಿರುವುದು ಅತ್ಯಂತ ದುರದೃಷ್ಟಕರ" ಎಂದು ಸುದಿಪ್ತೋ ಸೇನ್ ತಿಳಿಸಿದ್ದಾರೆ.

"ಚಿತ್ರದಿಂದಾಗಿ ರಾಜ್ಯದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಚಲನಚಿತ್ರವನ್ನು ನಿಷೇಧಿಸುವ ನಿರ್ಧಾರ ರಾಜಕೀಯ ಪ್ರೇರಿತ. ಚಲನಚಿತ್ರವನ್ನು ನೋಡಿ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತೆ ನಾನು ಅವರಲ್ಲಿ (ಸಿಎಂ ಮಮತಾ ಬ್ಯಾನರ್ಜಿ) ವಿನಂತಿಸುತ್ತೇನೆ" ಎಂದು ಸುದಿಪ್ತೋ ಸೇನ್ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿತ್ತು. ಅಲ್ಲಿ ಸಿನಿಮಾ ಹಾಲ್​​ ಹೌಸ್‌ಫುಲ್ ಆಗಿತ್ತು ಎಂದು ಅವರು ಹೇಳಿದರು.

West Bengal bans kerala story
ಕೇರಳ ಸ್ಟೋರಿ ನಿರ್ದೇಶಕ ಸುದಿಪ್ತೋ ಸೇನ್

"ಪಶ್ಚಿಮ ಬಂಗಾಳ ಸಿಎಂ ಅವರ ನಿಷೇಧದ ನಿರ್ಧಾರದ ನಂತರ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿದರು. ನಾನು ರಾಜಕಾರಣಿಯಲ್ಲ, ನಾನು ಚಲನಚಿತ್ರ ನಿರ್ದೇಶಕ, ನಾನು ಚಲನಚಿತ್ರವನ್ನು ಮಾತ್ರ ಮಾಡಬಲ್ಲೆ. ನೀವು ಅದನ್ನು ನೋಡಲು ಬಯಸುವಿರೋ ಅಥವಾ ಬೇಡವೋ ಎಂಬುದನ್ನು ನೀವೇ ನಿರ್ಧರಿಸುವುದು. ಕೋಲ್ಕತ್ತಾದಲ್ಲಿ ನಾಲ್ಕು ದಿನಗಳ ಕಾಲ ಚಿತ್ರ ಬಿಡುಗಡೆಯಾದಾಗ ಯಾವುದೇ ಸಮಸ್ಯೆ ಇರಲಿಲ್ಲ. ಇದ್ದಕ್ಕಿದ್ದಂತೆ ದೀದಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿರಬಹುದು ಎಂದು ಭಾವಿಸಿದರು" ಎಂದು ನಿರ್ದೇಶಕ ಸೇನ್ ತಿಳಿಸಿದರು.

"ಮಹುವಾ ಮೊಯಿತ್ರಾ, ಮಮತಾ ಬ್ಯಾನರ್ಜಿ ಅವರು ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳ ವಿಷಯದಲ್ಲಿ ಚಾಂಪಿಯನ್. ಪದ್ಮಾವತ್ ಚಲನಚಿತ್ರವನ್ನು ನಿಷೇಧಿಸಿದಾಗ ಸಿನಿಮಾವನ್ನು ಬೆಂಬಲಿಸಲು ಬಂದ ಮೊದಲ ರಾಜಕೀಯ ನಾಯಕಿ ಮಮತಾ ಬ್ಯಾನರ್ಜಿ. ಆದರೆ ಅವರಿಗೆ ನನ್ನ ಸಿನಿಮಾ ಸಂಬಂಧ ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇದೆ ಎಂದು ಅವರು ಭಾವಿಸಿದ್ದಾರೆಂದು ತಿಳಿಸಿದರು.

ಯಾವುದೇ ದ್ವೇಷ ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಲು ಹಾಗೂ ರಾಜ್ಯದಲ್ಲಿ ಶಾಂತಿ ಕಾಪಾಡಲು ದಿ ಕೇರಳ ಸ್ಟೋರಿಯನ್ನು ರಾಜ್ಯದಲ್ಲಿ ನಿಷೇಧಿಸಲಾಗುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಆದರೆ ನಾನು ಮೊದಲು ಚಲನಚಿತ್ರವನ್ನು ನೋಡುವಂತೆ ಹಾಗೂ ಜನರ ಅಭಿಪ್ರಾಯಗಳನ್ನು ನಿರ್ಧರಿಸಬೇಡಿ ಎಂದು ನಾನು ಅವರಲ್ಲಿ ವಿನಂತಿಸುವೆ. ನಿಮಗೆ ಚಿತ್ರ ಇಷ್ಟವಾಗುತ್ತದೆ, ಬಂಗಾಳಿ ನಿರ್ದೇಶಕರು ಈ ಜವಾಬ್ದಾರಿಯುತ ಚಿತ್ರ ಮಾಡಿದ್ದಾರೆ ಎಂದು ನೀವು ಹೆಮ್ಮೆಪಡುತ್ತೀರಿ ಎಂದು ಸೇನ್ ತಿಳಿಸಿದರು.

ಇದನ್ನೂ ಓದಿ: ಅರಿಜಿತ್​​ ಸಿಂಗ್ ಕೈ ಹಿಡಿದೆಳೆದ ಮಹಿಳಾ ಅಭಿಮಾನಿ: ಸ್ಟಾರ್​ ಸಿಂಗರ್‌ಗೆ ಗಾಯ

ಸಿನಿಮಾ ಬಿಡುಗಡೆಗೂ ಮುನ್ನ ವಿವಾದವಿತ್ತು. ಚಿತ್ರವನ್ನು ನೋಡಿದ ನಂತರ, ಎಲ್ಲರೂ ಚಿತ್ರವನ್ನು ಇಷ್ಟಪಡಲು ಪ್ರಾರಂಭಿಸಿದರು. ಚರ್ಚೆಗಳು ಸ್ವಯಂಚಾಲಿತವಾಗಿ ಕೊನೆಗೊಂಡಿತು. ತಮಿಳುನಾಡಿನಲ್ಲಿ ಒಂದು ಸಮಸ್ಯೆ ಇತ್ತು, ಅದು ಕೂಡ ದೊಡ್ಡ ಸಮಸ್ಯೆಯೇನಲ್ಲ. ಚಲನಚಿತ್ರ ಮಂದಿರದ ಮಾಲೀಕರಿಗೆ ಬೆದರಿಕೆ ಹಾಕುವ ಒಬ್ಬ ವ್ಯಕ್ತಿ ಇದ್ದನು. ಪ್ರತಿ ಬಾರಿ ತಮಿಳುನಾಡಿನಲ್ಲಿ ನಿರ್ದಿಷ್ಟ ವ್ಯಕ್ತಿ ನಿಂತು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದರು. ಇದೆಲ್ಲದರ ನಂತರ, ತಮಿಳುನಾಡು ಹೈಕೋರ್ಟ್ ನಮಗೆ ಅನುಮತಿ ನೀಡಿದೆ ಮತ್ತು ಸೆನ್ಸಾರ್ ಮಂಡಳಿ ಈಗಾಗಲೇ ಕ್ಲಿಯರೆನ್ಸ್ ನೀಡಿದೆ. ಚಿತ್ರವನ್ನು ನಿಷೇಧಿಸುವಲ್ಲಿ ಯಾವುದೇ ತರ್ಕವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲೂ 'ದಿ ಕೇರಳ ಸ್ಟೋರಿ' ಪ್ರದರ್ಶನ ರದ್ದು: ಶಾಂತಿ ಕಾಪಾಡಲು ಈ ನಿರ್ಧಾರ ಎಂದ ಸಿಎಂ

ಚಲನಚಿತ್ರವನ್ನು ನಿಷೇಧಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಲಾಗಿದ್ದು, ಇದೀಗ ಉತ್ತರ ಪ್ರದೇಶವು ತೆರಿಗೆ ಮುಕ್ತಗೊಳಿಸಲು ನಿರ್ಧರಿಸಿದೆ. ಆದ್ರೆ ಮಮತಾ ಬ್ಯಾನರ್ಜಿ ಅವರು ಚಲನಚಿತ್ರವನ್ನು ಪ್ರದರ್ಶಿಸುತ್ತಿರುವ ಎಲ್ಲಾ ಚಿತ್ರಮಂದಿರಗಳಿಂದ ಸಿನಿಮಾ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನೂ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ ಮಾತನಾಡಿ, "ರಾಜ್ಯ ಸರ್ಕಾರವು ನಮ್ಮ ಮಾತನ್ನು ಕೇಳದಿದ್ದರೆ, ನಾವು ಕಾನೂನು ಮಾರ್ಗಗಳ ಮೂಲಕ ಮುನ್ನಡೆಯುತ್ತೇವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.