ETV Bharat / entertainment

ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ - ಹೊಂಬಾಳೆ ಫಿಲ್ಸ್ಮ್ ಜೊತೆ ನಟ ಸುದೀಪ್ ಸಿನಿಮಾ

ಹೊಂಬಾಳೆ ಫಿಲ್ಮ್ಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಂಚಿಕೊಂಡಿರುವ ಒಂದು ಫೋಟೋ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ನಟ ಸುದೀಪ್ ಅವರ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಕಾರ್ತಿಕ್, ಹೊಸ ಆರಂಭ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

sudeeps-new-movie-with-hombale-films
ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ
author img

By

Published : Oct 6, 2022, 10:30 PM IST

ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನ ಬಳಿಕ ಕಿಚ್ಚನ ಮುಂದಿನ ಸಿನಿಮಾ ಯಾವುದು?, ಯಾವ ನಿರ್ಮಾಣ ಸಂಸ್ಥೆ?, ಯಾವ ನಿರ್ದೇಶಕನ ಜೊತೆ ಅಂತಾ ಗಾಂಧಿನಗರ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ.

ಈ ಮಧ್ಯೆ ಈಗ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ದೊಡ್ಡ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಕಿಚ್ಚ ಸುದೀಪ್ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಟ್ರೆಂಡ್ ಆಗುತ್ತಿದೆ. ಮತ್ತೊಂದು ಕಡೆ ಈ ಫೋಟೋ ನೋಡಿದ ಕಿಚ್ಚನ ಫ್ಯಾನ್ಸ್ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಜೊತೆಗೆ ಎಂಬ ಪ್ರಶ್ನೆಯೊಂದನ್ನು ಹುಟ್ಟು ಹಾಕಿದೆ.

ಹೌದು, ರಾಜಕುಮಾರ, ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ಹಾಗೂ ಸಲಾರ್ ಸಿನಿಮಾ ಅಲ್ಲದೇ ಪರಭಾಷೆಯ ಸ್ಟಾರ್​ಗಳ ಜೊತೆ ಅದ್ದೂರಿ ಮೇಕಿಂಗ್ ಹಾಗು ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರೋ ಹೊಂಬಾಳೆ ಫಿಲ್ಸ್ಮ್ ಜೊತೆ ಕಿಚ್ಚನ ಸುದೀಪ್ ಮುಂದಿನ ಸಿನಿಮಾ ಎಂಬ ಟಾಕ್ ಶುರುವಾಗಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಹೊಂಬಾಳೆ ಫಿಲ್ಮ್ಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಂಚಿಕೊಂಡಿರುವ ಒಂದು ಫೋಟೋ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸುದೀಪ್ ಅವರ ಜೊತೆಗೆ ಇರುವ ಫೋಟೋ ಹಂಚಿಕೊಂಡಿರುವ ಕಾರ್ತಿಕ್, ಹೊಸ ಆರಂಭ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

sudeeps-new-movie-with-hombale-films
ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ

ಈ ಬಗ್ಗೆ ಕಿಚ್ಚ ಸುದೀಪ್ ಆಪ್ತರು ಬಳಿ ವಿಚಾರಿಸಿದಾಗ ಮುಂದಿನ ದಿನಗಳಲ್ಲಿ ಸುದೀಪ್ ಅವರು ಹೊಂಬಾಳೆ ಫಿಲ್ಸ್ಮ್ ಜೊತೆ ಸಿನಿಮಾ ಮಾಡಬಹುದು. ಆದರೆ, ಈಗ ಅಲ್ಲ ಎಂಬ ಮಾತನ್ನ ಹೇಳಿದ್ದಾರೆ. ಆದರೆ, ವಿಕ್ರಾಂತ್ ರೋಣ ಸಿನಿಮಾ ರಿಲೀಸ್‌ಗೂ ಮುಂಚೆ ಸುದೀಪ್, ಅನೂಪ್ ಭಂಡಾರಿ ಜೊತೆಗೆ ಇನ್ನೊಂದು ಸಿನಿಮಾ ಮಾಡುತ್ತೇನೆ ಅಂತಾ ಹೇಳಿದ್ದರು. ಅದುವೇ ಬಿಲ್ಲಾ ರಂಗ ಬಾಷಾ ಅಂತಾ ಹೇಳಿದರು. ಈಗ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಸುದೀಪ್ ಜೊತೆಗಿನ ಫೋಟೋ ಮಾತ್ರ ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣ ಸಿನಿಮಾ ಅನ್ನೋದು ಪಕ್ಕಾ ಅನ್ನುವಂತಿದೆ.

ಸದ್ಯ ಹೊಂಬಾಳೆ ಫಿಲ್ಮ್ಸ್‌ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ನಟಿಸಿ ಹಾಗೂ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಒಂದು ವಾರಕ್ಕೆ 20ರಿಂದ 25 ಕೋಟಿ ಕಲೆಕ್ಷನ್ ಮಾಡಿದೆ ಅಂತಾ ಗಾಂಧಿಗರದಲ್ಲಿ ಸಿನಿಮಾ ಪಂಡಿತರು ಹೇಳುವ ಮಾತು. ಅಷ್ಟೇ ಅಲ್ಲ, ಈಗಾಗಲೇ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾವ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಕುರಿತು ಕೂಡ ಚಿತ್ರತಂಡ ಯೋಚಿಸಿದೆ.

ಇದನ್ನೂ ಓದಿ: ಬನಾರಸ್ ಸಿನಿಮಾ ವಿತರಣಾ ಹಕ್ಕು ಪಡೆದ ಕೇರಳದ ಮಲಕುಪ್ಪಡಮ್ ಫಿಲಂಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.