ETV Bharat / entertainment

34 ಲಕ್ಷ ಮತ ಪಡೆದು ಸೇಫ್​ ಆದ್ರೂ ಹೊರಹೋಗುತ್ತೇನೆಂದ ವರ್ತೂರು ಸಂತೋಷ್: ಕುತೂಹಲ ಮೂಡಿಸಿದ ಕಿಚ್ಚನ ವಾರದ ಕಥೆ! - sudeep

ಲಕ್ಷ ಲಕ್ಷ ಮತ ಪಡೆದು ಸೇಫ್​ ಆದ್ರೂ ಕೂಡ ಬಿಗ್​ ಬಾಸ್​ ಮನೆಯಿಂದ ಹೊರ ನಡೆಯುತ್ತೇನೆಂದ ವರ್ತೂರು ಸಂತೋಷ್ ನಿರ್ಧಾರಕ್ಕೆ ನಟ ಸುದೀಪ್​ ಬೇಸರಗೊಂಡಿದ್ದಾರೆ.

sudeep upset for bigg boss contestant varthur santhosh decision
ವರ್ತೂರು ಸಂತೋಷ್ ನಿರ್ಧಾರಕ್ಕೆ ಸುದೀಪ್ ಅಸಮಧಾನ
author img

By ETV Bharat Karnataka Team

Published : Nov 12, 2023, 11:45 AM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ''ಬಿಗ್​ ಬಾಸ್​ ಸೀಸನ್​​ 10'' ಉತ್ತಮ ವೀಕ್ಷಣೆ ಪಡೆದುಕೊಳ್ಳುತ್ತಿದೆ. ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಬಿಗ್​ ಬಾಸ್​ ಸಖತ್​ ಸದ್ದು ಮಾಡುತ್ತಿದೆ.

'ವಾರದ ಕಥೆ ಕಿಚ್ಚನ ಜೊತೆ'... ಕನ್ನಡ ಬಿಗ್​ ಬಾಸ್​ ಸೀಸನ್​ 10ರ ನಾಲ್ಕನೇ ವಾರವೂ ಪೂರ್ಣಗೊಂಡಿದೆ. ಶನಿವಾರ ವೀಕೆಂಡ್​ ಎಪಿಸೋಡ್​ ಕೂಡ ಪ್ರಸಾರವಾಗಿದೆ. ಭಾನುವಾರದ ಸಂಚಿಕೆಗೆ ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಯಾರು ಹೊರ ಹೋಗುತ್ತಾರೆಂಬುದು ಕಿಚ್ಚನ ಸೂಪರ್​ ಸಂಡೆಯಲ್ಲಿ ಗೊತ್ತಾಗಲಿದೆ. 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್​ನಲ್ಲಿ ಕಿಚ್ಚನ ಕಿಚ್ಚು ಜೋರಾಗಿದೆ. ಯಾಕೆ ಅಂತೀರಾ?. ವರ್ತೂರು ಸಂತೋಷ್​ ಅವರು ಸೇಫ್​​ ಆದ್ರೂ ಕೂಡ ಮನೆಯಿಂದ ಹೊರ ನಡೆಯುತ್ತೇನೆ ಎಂದು ತಿಳಿಸಿದ್ದು ಕಿಚ್ಚನಿಗೆ ಹಿಡಿಸಿಲ್ಲ.

ಸುದೀಪ್​ ಬೇಸರ.. ಹೌದು, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಎಲಿಮಿನೇಷನ್​ ಕೂಡ ನಡೆಯುತ್ತೆ. ಮನೆಯಿಂದ ಓರ್ವ ಸ್ಪರ್ಧಿ ಹೊರ ನಡೆಯುತ್ತಾರೆ. ಅದು ಯಾರು? ಎಂದು ತಿಳಿದುಕೊಳ್ಳಲು ಮನೆಯ ಸ್ಪರ್ಧಿಗಳ ಜೊತೆ ಪ್ರೇಕ್ಷಕರು ಕೂಡ ಕಾತರರಾಗಿರುತ್ತಾರೆ. ಎಲಿಮಿನೇಷನ್​ಗೂ ಮುನ್ನ ಸೇಫ್​​ ಆದ ಸ್ಪರ್ಧಿಗಳ ಹೆಸರು ಬರುತ್ತದೆ. ಆ ಪ್ರಕಾರ ನಿರೂಪಕ ಸುದೀಪ್​​, ವರ್ತೂರು ಸಂತೋಷ್​ ಹೆಸರನ್ನು ತೆಗೆದುಕೊಂಡಿದ್ದಾರೆ. ಆದ್ರೆ ನಾನು ಮನೆಯಿಂದ ಹೊರ ಹೋಗುತ್ತೇನೆಂದು ಸೇಫ್​ ಆದ ವರ್ತೂರು ಸಂತೋಷ್​​ ಕಣ್ಣೀರಿಟ್ಟಿದ್ದಾರೆ. ಸೇಫ್​ ಆದ್ರೂ ಕೂಡ ಹೊರ ಹೋಗುವ ವರ್ತೂರು ಸಂತೋಷ್​​ ನಿರ್ಧಾರ ಕೇಳಿ ಮನೆ ಮಂದಿಗೆ ಶಾಕ್​​ ಆಗಿದೆ. ನಟ ಸುದೀಪ್​ ಕೂಡ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ ಬರ್ತ್​ಡೇ ಸೆಲೆಬ್ರೇಶನ್​: ಭೈರಾದೇವಿ, ಅಜಾಗ್ರತ ಸಿನಿಮಾ ಮಾಹಿತಿ ಇಲ್ಲಿದೆ

ಹೊರಗೆ ನಡೆದಂತಹ ಕೆಲ ಘಟನೆಗಳನ್ನು ಮರೆತು ನನಗೆ ಆಟ ಆಡಲು ಆಗುತ್ತಿಲ್ಲ. ಮತ್ತೆ ಬಿಗ್​ ಬಾಸ್​ಗೆ ಬಂದರೂ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಲು ಆಗುತ್ತಿಲ್ಲ ಅಂತಾ ಸ್ಪರ್ಧಿ ವರ್ತೂರು ಸಂತೋಷ್​ ಭಾವುಕರಾಗಿದ್ದಾರೆ. ವರ್ತೂರು ಸಂತೋಷ್​ ನಿರ್ಧಾರಕ್ಕೆ ಕಿಚ್ಚ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ನಿಮಗೆ 34 ಲಕ್ಷದ 15 ಸಾವಿರದ 475 ಪ್ರೇಕ್ಷಕರು ವೋಟ್​ ಮಾಡಿದ್ದಾರೆ. ಜನರ ವಿರುದ್ಧ ನಾನು ಹೋಗಲು ಸಾಧ್ಯವಿಲ್ಲ. ನಿಮ್ಮ ಈ ನಿರ್ಧಾರದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ ಎಂದು ಹೇಳಿ ಸುದೀಪ್​ ವೇದಿಕೆಯಿಂದ ಹೊರ ನಡೆದಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಅನಾವರಣಗೊಂಡಿರುವ, 'ಸೇಫ್​ ಆದರೂ ಮನೆಯಿಂದ ಹೊರ ನಡೆಯುವ ತೀರ್ಮಾನ ಮಾಡಿದ ವರ್ತೂರು ಸಂತೋಷ್​' ಶೀರ್ಷಿಕೆಯ ಪ್ರೋಮೋ ಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡಿಸಿದೆ. ಏನಾಗಬಹುದು? ವರ್ತೂರು ಸಂತೋಷ್​ ಮನೆಯಲ್ಲೇ ಉಳಿಯುತ್ತಾರಾ? ಅಥವಾ ಹೊರ ನಡೆಯುತ್ತಾರಾ? ಎಂಬ ಕುತೂಹಲ ಪ್ರೇಕ್ಷಕರದ್ದು..

ಇದನ್ನೂ ಓದಿ: ರಾಘವ್​ ಚಡ್ಡಾ ಜನ್ಮದಿನ: ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡ ಪತ್ನಿ ಪರಿಣಿತಿ ಚೋಪ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.