ETV Bharat / entertainment

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ 'ಜೋರಾಮ್' ಇದೇ 8ಕ್ಕೆ ತೆರೆಗೆ

ಪದ್ಮಶ್ರೀ ಪುರಸ್ಕೃತ ನಟ ಮನೋಜ್ ಬಾಜ್‌ಪೇಯಿ ಮುಖ್ಯಭೂಮಿಕೆಯಲ್ಲಿರುವ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಜೋರಾಮ್ ಸಿನಿಮಾ ಡಿಸೆಂಬರ್​ 8ಕ್ಕೆ ಬಿಡುಗಡೆ ಆಗಲಿದೆ.

Joram
Joram
author img

By ETV Bharat Karnataka Team

Published : Dec 6, 2023, 10:34 PM IST

ಬೆಂಗಳೂರು: ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳು ಹಾಗು ವಿಶಿಷ್ಟ ಅಭಿನಯದ ಮೂಲಕ ಗಮನ ಸೆಳೆದಿರುವ, ಪದ್ಮಶ್ರೀ ಪುರಸ್ಕೃತ ನಟ ಮನೋಜ್ ಬಾಜ್‌ಪೇಯಿ 'ಜೋರಾಮ್' ಎಂಬ ಆದಿವಾಸಿಗಳ ಭೂ ಸಂಘರ್ಷದ ಕಥೆಯಾಧಾರಿತ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆಡಳಿತದಿಂದ ತೊಂದರೆಗಳನ್ನು ಅನುಭವಿಸುವ ಸಮಾಜಮುಖಿ ಕಥನವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಪರಿಚಯಿಸಲು ಸಿನಿಮಾ ತಂಡ ಮುಂದಾಗಿದ್ದು, ಪ್ರಚಾರದ ಸಲುವಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಜೋರಾಮ್​ ಸಿನಿಮಾ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದಿದೆ. ಜೋರಾಮ್​ ಸಿನಿಮಾವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ರೋಟರ್‌ಡ್ಯಾಮ್, ಸಿಡ್ನಿ ಚಲನಚಿತ್ರೋತ್ಸವ, ಡರ್ಬನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, 28ನೇ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು 59ನೇ ಚಿಕಾಗೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗಿತ್ತು. ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯೂ ದೊರೆತಿದೆ. ಡಿಸೆಂಬರ್​ 8ಕ್ಕೆ ಹಿಂದಿ ಭಾಷೆಯಲ್ಲಿ ಚಿತ್ರ ದೇಶದೆಲ್ಲೆಡೆ ಬಿಡುಗಡೆ ಆಗಲಿದೆ.

ಪತ್ರಕರ್ತರ ಕ್ಷಮೆ ಯಾಚಿದ ನಟ: ಸಿನಿಮಾ ಪ್ರಮೋಷನ್​ಗೆ ತಡವಾಗಿ ಬಂದ ಕಾರಣಕ್ಕೆ ಮನೋಜ್ ಬಾಜ್‌ಪೇಯಿ ಪತ್ರಕರ್ತರಲ್ಲಿ ಕ್ಷಮೆ ಕೇಳಿದರು. ಬಳಿಕ ಮಾತನಾಡಿದ ಅವರು, "ಬೆಂಗಳೂರು ಬಗ್ಗೆ ನನಗೆ ಸ್ಪಲ್ಪ ಗೊತ್ತಿದೆ. ನನ್ನ ಪೂರ್ವಜರು ಕರ್ನಾಟಕದವರು. ಕನ್ನಡ ಚಿತ್ರರಂಗ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅದರಲ್ಲೂ 'ಗರುಡ ಗಮನ ವೃಷಭ ವಾಹನ', 'ಕಾಂತಾರ' ಚಿತ್ರಗಳನ್ನು ನೋಡಿದ್ದೇನೆ. ಅದು ನನ್ನನ್ನು ತುಂಬಾ ಕಾಡಿದೆ. ಇಂತಹ ಚಿತ್ರಗಳು ನನಗೆ ಧೈರ್ಯ, ಸ್ಪೂರ್ತಿ ತುಂಬುತ್ತದೆ" ಎಂದರು.

ತಮ್ಮ ಸಿನಿಮಾ ಕುರಿತ ಮಾತನಾಡಿ, "ಈ ಸಿನಿಮಾವು ಆದಿವಾಸ ಜನಾಂಗದ ಕಥೆಯೊಂದನ್ನು ಹೇಳಲಿದೆ. ಒಂದು ದೃಶ್ಯದಲ್ಲಿ ಮೂರು ತಿಂಗಳ ಮಗುವನ್ನು ಹಿಡಿದುಕೊಂಡು ಓಡುವುದು, ಫೈಟ್ ಮಾಡುವುದು ಮಾಡಬೇಕಿತ್ತು ಅದು ನನಗೆ ತುಂಬಾ ಕಷ್ಟವಾಗಿತ್ತು. ಸಿನಿಮಾ ಮುಂಬೈನಿಂದ ಜಾರ್ಖಂಡ್ ಕಾಡಿಗೆ ಪಯಣ ಬೆಳೆಸುತ್ತದೆ. ಭೂಮಿಯನ್ನು ಕಿತ್ತುಕೊಳ್ಳುವ ಅನೈತಿಕತೆಯ ಅಂಶಗಳು, ಅಪರಾಧ ಮತ್ತು ದುಃಖದ ಆಳವಾದ ಪ್ರಜ್ಞೆಯನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಸ್ಥಳೀಯ ಶಾಸಕನ ದಬ್ಬಾಳಿಕೆಯಿಂದ ವ್ಯವಸ್ಥೆಯು ವಿರುದ್ಧ ಹೋರಾಡುವ ಸನ್ನಿವೇಶಗಳು ಇದರಲ್ಲಿದೆ ಎಂದು ತಿಳಿಸಿದರು.

Starring Manoj Bajpayee Joram Movie release on Dec 8th
ನಟ ಮನೋಜ್ ಬಾಜ್‌ಪೇಯಿ ಜೊತೆಗೆ ನಿರ್ದೇಶಕ ದೇವಶಿಷ್ ಮಖೀಜಾ

ರಚನೆ, ಚಿತ್ರಕಥೆ, ನಿರ್ಮಾಣದಲ್ಲಿ ಪಾಲುದಾರರಾಗಿರುವ ದೇವಶಿಷ್ ಮಖೀಜಾ ಸಿನಿಮಾಕ್ಕೆ ಆ್ಯಕ್ಷನ್ ​ಕಟ್ ಹೇಳಿದ್ದಾರೆ. ಜೀ ಸ್ಟುಡಿಯೋಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಚಿತ್ರದಲ್ಲಿ ಸ್ಮಿತಾ ತಾಂಬೆ, ಮೇಘಾ ಮಾಥುರ್, ತನ್ನಿಷ್ಠಾ ಚಟರ್ಜಿ ಮತ್ತು ರಾಜಶ್ರೀ ದೇಶಪಾಂಡೆ ನಟಿಸಿದ್ದಾರೆ. ಮಂಗೇಶ್ ದಾಕ್ಡೆ ಸಂಗೀತ ನಿರ್ದೇಶನ ಮಾಡಿದ್ದು, ಛಾಯಾಗ್ರಹಣ ಪಿಯೂಪ್​ ಪುಟಿ, ಸಂಕಲನ ಆಬ್ರೋ ಬ್ಯಾನರ್ಜಿ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ನಟ ಶ್ರೀಮುರಳಿ ಬರ್ತ್​​​ಡೇಯಂದು 'ಬಘೀರ' ಟೀಸರ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.