ಆರ್ಆರ್ಆರ್ ಮೂಲಕ ಭರ್ಜರಿ ಯಶಸ್ಸು ಗಳಿಸಿರುವ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಅವರು ಭಾರತೀಯ ಸಿನಿಮಾ ರಂಗದ ಬಿಗ್ ಪ್ರಾಜೆಕ್ಟ್ ಒಂದನ್ನು ಘೋಷಿಸಿದ್ದಾರೆ. ಇದು ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಬಯೋಪಿಕ್. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಅವರ ಜೀವನಾಧಾರಿತ ಚಿತ್ರ ''ಮೇಡ್ ಇನ್ ಇಂಡಿಯಾ'' ವನ್ನು ಪ್ರೇಕ್ಷಕರೆದುರು ಪ್ರಸ್ತುತಪಡಿಸುವುದಾಗಿ ತಿಳಿಸಿದ್ದಾರೆ. ಚಿತ್ರದ ನಿರೂಪಣೆಯನ್ನು ಕೇಳಿದಾಗ, ಸ್ಕ್ರಿಪ್ಟ್ ಭಾವನಾತ್ಮಕ ಎನಿಸಿತೆಂದು ಆರ್ಆರ್ಆರ್ ಸಾರಥಿ ರಾಜಮೌಳಿ ತಿಳಿಸಿದ್ದಾರೆ.
ಎಸ್ಎಸ್ ರಾಜಮೌಳಿ ಟ್ವೀಟ್: ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ನಿರ್ದೇಶಕರು ತಮ್ಮ ಮುಂದಿನ ಸಿನಿಮಾವನ್ನು ಘೋಷಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ''ಯಾವಾಗ ನಾನು ಚಿತ್ರದ ನಿರೂಪಣೆಯನ್ನು ಕೇಳಿದೆನೋ, ಅಂದು ಅದು ನನ್ನಲ್ಲಿ ಬಹಳ ಭಾವನಾತ್ಮಕವಾಗಿ ಚಲಿಸಿತು. ಬಯೋಪಿಕ್ (ಜೀವನಚರಿತ್ರೆ) ಮಾಡುವುದೇ ಒಂದು ಕಠಿಣ ಕೆಲಸ. ಅಂತಹದರಲ್ಲಿ ಭಾರತೀಯ ಚಿತ್ರರಂಗದ ಪಿತಾಮಹನ ಬಗ್ಗೆ ಸಿನಿಮಾ ಸಿದ್ಧಪಡಿಸುವುದು ಇನ್ನೂ ಹೆಚ್ಚಿನ ಸವಾಲಿನ ಸಂಗತಿ. ನಮ್ಮ ಹುಡುಗರು ಈ ಸವಾಲಿಗೆ ಸಿದ್ಧರಾಗಿದ್ದಾರೆ. ಅಪಾರ ಹೆಮ್ಮೆಯಿಂದ 'ಮೇಡ್ ಇನ್ ಇಂಡಿಯಾ'ವನ್ನು ಪ್ರಸ್ತುತಪಡಿಸಲಿದ್ದೇವೆ'' ಎಂದು ಟ್ವೀಟ್ ಮಾಡಿದ್ದಾರೆ.
-
When I first heard the narration, it moved me emotionally like nothing else.
— rajamouli ss (@ssrajamouli) September 19, 2023 " class="align-text-top noRightClick twitterSection" data="
Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)
With immense pride,
Presenting MADE IN INDIA… pic.twitter.com/nsd0F7nHAJ
">When I first heard the narration, it moved me emotionally like nothing else.
— rajamouli ss (@ssrajamouli) September 19, 2023
Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)
With immense pride,
Presenting MADE IN INDIA… pic.twitter.com/nsd0F7nHAJWhen I first heard the narration, it moved me emotionally like nothing else.
— rajamouli ss (@ssrajamouli) September 19, 2023
Making a biopic is tough in itself, but conceiving one about the FATHER OF INDIAN CINEMA is even more challenging. Our boys are ready and up for it..:)
With immense pride,
Presenting MADE IN INDIA… pic.twitter.com/nsd0F7nHAJ
'ಇಂಡಿಯನ್ ಸಿನಿಮಾದ ಬಯೋಪಿಕ್'... ನಿರ್ದೇಶಕರು ಅನೌನ್ಸ್ಮೆಂಟ್ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋ, ಮುಂಬರುವ ಈ ಬಿಗ್ ಪ್ರಾಜೆಕ್ಟ್ 'ಇಂಡಿಯನ್ ಸಿನಿಮಾದ ಬಯೋಪಿಕ್' ಎಂದು ವರ್ಣಿಸಿದೆ. ಮೇಡ್ ಇನ್ ಇಂಡಿಯಾ ಬಯೋಪಿಕ್ ಅನ್ನು ಫಿಲ್ಮಿಸ್ತಾನ್, ಮಿತ್ರನ್, ಜವಾನಿ ಜಾನೆಮನ್ ಚಿತ್ರಗಳಿಗೆ ಹೆಸರುವಾಸಿಯಾಗಿರುವ ನಿತಿನ್ ಕಕ್ಕರ್ ನಿರ್ದೇಶಿಸಲಿದ್ದಾರೆ. ರಾಜಮೌಳಿ ಅವರ ಪುತ್ರ ಎಸ್.ಎಸ್ ಕಾರ್ತಿಕೇಯ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಇದು ಅವರ ನಿರ್ಮಾಣದ ಚೊಚ್ಚಲ ಚಲನಚಿತ್ರ. ಇದಕ್ಕೂ ಮುನ್ನ ಆರ್ಆರ್ಆರ್ನ ಲೈನ್ ಪ್ರೊಡ್ಯೂಸರ್ ಆಗಿ ಮನ್ನಣೆ ಪಡೆದಿದ್ದಾರೆ.
ರಾಜಮೌಳಿಯವ್ರ ಪುತ್ರ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ: ''ನಿರ್ಮಾಪಕನಾಗುವ ಕನಸು ಕಂಡು, ಅದನ್ನು ನನಸಾಗಿಸಲು ಬಯಸಿ ವರ್ಷಗಳೇ ಕಳೆದಿವೆ. ಅಂತಿಮವಾಗಿ ಆ ಕ್ಷಣ ಬಂದಿದೆ. ಮೇಡ್ ಇನ್ ಇಂಡಿಯಾ.. ಅತ್ಯಂತ ಜವಾಬ್ದಾರಿಯಿಂದ, ಇದನ್ನು ಸವಾಲಾಗಿ ಸ್ವೀಕರಿಸುತ್ತಿದ್ದೇನೆ'' ಎಂದು ಎಸ್.ಎಸ್ ಕಾರ್ತಿಕೇಯ ಅವರು ಸಾಮಾಜಿಕ ಜಾಲತಾಣ X ನಲ್ಲಿ ಬರೆದುಕೊಂಡಿದ್ದಾರೆ. ಕಾರ್ತಿಕೇಯ ಜೊತೆ ವರುಣ್ ಗುಪ್ತಾ ಅವರೂ ಕೂಡ ಈ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ.
ದಾದಾಸಾಹೇಬ್ ಫಾಲ್ಕೆ: ಭಾರತೀಯ ಚಿತ್ರರಂಗದ ಪಿತಾಮಹ ಎಂದು ಕರೆಯಲ್ಪಡುವ ದಾದಾಸಾಹೇಬ್ ಫಾಲ್ಕೆ ಅವರು 1913ರಲ್ಲಿ ರಾಜಾಹರಿಶ್ಚಂದ್ರ ಶೀರ್ಷಿಕೆಯ ಮೊದಲ ಭಾರತೀಯ ಸಿನಿಮಾವನ್ನು ಮಾಡಿದರು. ಮಹಾರಾಷ್ಟ್ರದ ತ್ರಿಂಬಕ್ನಲ್ಲಿ ಜನಿಸಿದ ದಾದಾಸಾಹೇಬ್ ಫಾಲ್ಕೆ ಅವರ ನಿಜವಾದ ಹೆಸರು ಧುಂಡಿರಾಜ್ ಗೋವಿಂದ್ ಫಾಲ್ಕೆ. ಫಿಲ್ಮ್ ಮೇಕಿಂಗ್ ಅನ್ನು ಸೆಸಿಲ್ ಹೆಪ್ವರ್ತ್ (Cecil Hepworth) ಅವರಿಂದ ಕಲಿಯಲು ಲಂಡನ್ಗೆ ತೆರಳಿದರು. ಬಳಿಕ 1913ರಲ್ಲಿ ಭಾರತದ ಮೊದಲ ಸಿನಿಮಾ ಮಾಡಿದರು. ರಾಜಾ ಹರಿಶ್ಚಂದ್ರ ಚಿತ್ರದ ನಿರ್ದೇಶಕರಾಗಿ ಹೊರಹೊಮ್ಮಿದರು. 19 ವರ್ಷಗಳ ವೃತ್ತಿಜೀವನದಲ್ಲಿ 95 ಸಿನಿಮಾಗಳು, 27 ಕಿರುಚಿತ್ರಗಳನ್ನು ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ, ಸರ್ಕಾರದ ವತಿಯಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಡುವ ಮೂಲಕ ಭಾರತೀಯ ಚಿತ್ರರಂಗದ ಪಿತಾಮಹನಿಗೆ ಗೌರವ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 'ದಿ ವ್ಯಾಕ್ಸಿನ್ ವಾರ್' ಸ್ಪೆಷಲ್ ಸ್ಕ್ರೀನಿಂಗ್: ಭಾರತೀಯರೆನ್ನಲು ಹೆಮ್ಮೆಪಡಿ ಎಂದ ಸುಧಾ ಮೂರ್ತಿ
ಆರ್ಆರ್ಆರ್ ಸಿನಿಮಾದ ಜಾಗತಿಕ ಯಶಸ್ಸಿನ ನಂತರ ನಿರ್ದೇಶಕ ರಾಜಮೌಳಿ ಅವರು ಪ್ರಸ್ತುತಪಡಿಸುತ್ತಿರುವ ಮೊದಲ ಚಿತ್ರವಿದು. ಚಿತ್ರದ ತಾರಾಗಣ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಶೀಘ್ರದಲ್ಲೇ ಕೊಡಲಿದೆ. ಸದ್ಯ ಘೋಷಣೆ ಆಗಿರುವ ಸಿನಿಮಾವು ಪ್ರೇಕ್ಷಕರು ಮಾತ್ರವಲ್ಲದೇ, ಚಿತ್ರರಂಗದ ಗಣ್ಯರಲ್ಲೂ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಪರಿಣಿತಿ-ರಾಘವ್ ಮದುವೆ: ವರನ ಮನೆಗೆ ವಿಶೇಷ ಶೃಂಗಾರ- ವಿಡಿಯೋ ನೋಡಿ!