ETV Bharat / entertainment

ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್ - Shah Rukh Khan

SRK Fans meet: ನಿನ್ನೆ ಸಂಜೆ ಮುಂಬೈ ನಗರದಲ್ಲಿ ಎಸ್​ಆರ್​ಕೆ ಫ್ಯಾನ್ಸ್‌ಗಾಗಿ ಮೀಟ್​ ಆ್ಯಂಡ್​ ಗ್ರೀಟ್​​ ಸೆಷನ್​ ಆಯೋಜಿಸಲಾಗಿತ್ತು.

SRK Fans meet
ಫ್ಯಾನ್ಸ್​​ ಜೊತೆ ಶಾರುಖ್​​
author img

By ETV Bharat Karnataka Team

Published : Nov 3, 2023, 10:08 AM IST

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಗುರುವಾರ ತಮ್ಮ 58ನೇ ಹುಟ್ಟುಹಬ್ಬ ಆಚರಿಸಿಕೊಂಡರು. 2023 ನಟನಿಗೆ ವಿಶೇಷವಾಗಿರುವ ಹಿನ್ನೆಲೆಯಲ್ಲಿ ಬರ್ತ್​​ಡೇ ಸೆಲೆಬ್ರೇಶನ್​ ಕೂಡ ಅದ್ಧೂರಿಯಾಗಿತ್ತು. ಪ್ರಪಂಚದಾದ್ಯಂತ ಇರುವ ಅಭಿಮಾನಿಗಳಿಗಾಗಿ ಮುಂದಿನ ಬಹುನಿರೀಕ್ಷಿತ ಚಿತ್ರ 'ಡಂಕಿ'ಯ ಟೀಸರ್ ಅನ್ನು ಈಗಾಗಲೇ​ ಅನಾವರಣಗೊಳಿಸಲಾಗಿದೆ. ಇದರ ಜೊತೆಗೆ, ಶಾರುಖ್ ತಮ್ಮ ಉತ್ಸಾಹಿ ಅಭಿಮಾನಿಗಳೊಂದಿಗೂ ಉತ್ತಮ ಸಮಯ ಕಳೆದರು.

ಫ್ಯಾನ್ಸ್ ಮೀಟ್​ ಆ್ಯಂಡ್​ ಗ್ರೀಟ್​​: ಬರ್ತ್​​ಡೇ ಹಿನ್ನೆಲೆಯಲ್ಲಿ ಅವರು ಮುಂಬೈ ನಗರದಲ್ಲಿ ಫ್ಯಾನ್ಸ್‌ಗಾಗಿ ಮೀಟ್​ ಆ್ಯಂಡ್​ ಗ್ರೀಟ್​​ ಸೆಷನ್​ ಆಯೋಜಿಸಿದ್ದರು. ಡಂಕಿ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮತ್ತು ಬರಹಗಾರ ಅಭಿಜತ್ ಜೋಷಿ ಅವರೊಂದಿಗೆ ಶಾರುಖ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂಬರುವ ಚಿತ್ರದ ಕುರಿತು ಮಾತನಾಡಿದರು.

ಎಸ್​​ಆರ್​ಕೆ ಮೆಚ್ಚಿನ ಚಿತ್ರ ಯಾವುದು?: ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ನಲ್ಲಿ ಎಸ್‌ಆರ್‌ಕೆ ಫ್ಯಾನ್ಸ್​ ಪೇಜ್​ಗಳು ಈ ಕಾರ್ಯಕ್ರಮದ ಹಲವು ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿವೆ. ವಿಡಿಯೋಗಳಲ್ಲಿ ಕಿಂಗ್ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರೋದು ಮತ್ತು ಡಂಕಿ ಕುರಿತು ಮಾತನಾಡುತ್ತಿರುವುದನ್ನು ನೋಡಬಹುದು. ಈ ಸಂದರ್ಭದಲ್ಲಿ ವರ್ಷದ ಮೆಚ್ಚಿನ ಚಿತ್ರ ಡಂಕಿ ಎಂಬುದನ್ನು ಅವರು ಬಹಿರಂಗಪಡಿಸಿದರು.

58ರ ಹರೆಯದಲ್ಲೂ ಹ್ಯಾಂಡ್ಸಮ್ ಹಂಕ್: ಶಾರುಖ್​ ತಮ್ಮ ಪುತ್ರ ಆರ್ಯನ್ ಖಾನ್ ಅವರ ಜನಪ್ರಿಯ ಬಟ್ಟೆ ಬ್ರ್ಯಾಂಡ್​ನ​​ ಟೀ ಶರ್ಟ್​​​​​ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದರು. ಡೆನಿಮ್, ಜಾಕೆಟ್‌ನೊಂದಿಗೆ ಸಖತ್​​ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರು. ಪೋನಿಟೇಲ್ ಕೇಶವಿನ್ಯಾಸದಲ್ಲಿ ನೋಟ ಬೀರಿದರು.

ಇದನ್ನೂ ಓದಿ: ಎಸ್​ಆರ್​ಕೆ - ಫ್ಯಾನ್ಸ್​ ಮೀಟ್​​: ಶಾರುಖ್​ ಖಾನ್​ ವಿಡಿಯೋ ವೈರಲ್​

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಮತ್ತೊಂದು ವಿಡಿಯೋದಲ್ಲಿ, ಜಲೇಬಿ ಬೇಬಿ ಸಾಂಗ್ ಮೇಕರ್ ತೆಶರ್‌ ಅವರೊಂದಿಗೆ ಎಸ್‌ಆರ್‌ಕೆ ಮೈ ಕುಣಿಸುವುದನ್ನು ಕಾಣಬಹುದು. ಎಸ್​​ಆರ್​ಕೆ ಡೇ ಸೆಲೆಬ್ರೇಶನ್​​​ಗಾಗಿ ತೇಶರ್ ಅವರು ಮುಂಬೈಗೆ ಆಗಮಿಸಿ ಉತ್ತಮ ಸಮಯ ಕಳೆದಿದ್ದಾರೆ. ತೇಶರ್ ತಮ್ಮ ಹಿಟ್ ಸಾಂಗ್​​ 'ಯಂಗ್ ಶಾರುಖ್' ಹಾಡಿದರು. ಎಸ್‌ಆರ್‌ಕೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ, 2023ರ ಹಿಟ್​ ಸಾಂಗ್ಸ್​ಗೆ ಗ್ರೂಪ್ ಡ್ಯಾನ್ಸ್​​ ಮಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಲಾರ್​ ಮೇಲೆ ಬೆಟ್ಟದಷ್ಟು ನಿರೀಕ್ಷೆ: ಸಿನಿಮಾದಲ್ಲಿ 750ಕ್ಕೂ ಹೆಚ್ಚು ವಾಹನಗಳ ಬಳಕೆ!

ಡಂಕಿ ಸಿನಿಮಾ ಎಸ್​ಆರ್​ಕೆ ಮತ್ತು ರಾಜ್‌ಕುಮಾರ್ ಹಿರಾನಿ ಕಾಂಬಿನೇಶನ್​ನ ಚೊಚ್ಚಲ ಚಿತ್ರ. ಬೊಮನ್ ಇರಾನಿ, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಸೇರಿದಂತೆ ಹಲವರು ನಟಿಸಿದ್ದಾರೆ. ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್‌ ನಿರ್ಮಿಸಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ. ಚಿತ್ರಕಥೆಯನ್ನು ಅಭಿಜತ್ ಜೋಶಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಬರೆದಿದ್ದಾರೆ. ಡಿಸೆಂಬರ್‌ 22ರಂದು ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿದೆ. ಅಂದೇ ಭಾರತದ ಮತ್ತೊಂದು ಬಿಗ್​ ಮೂವಿ ಸಲಾರ್​ ಕೂಡ ತೆರೆಗಪ್ಪಳಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.