ETV Bharat / entertainment

'ರೋಜಿ'ಗಾಗಿ ಒಂದಾದ ಲೂಸ್​ ಮಾದ ಯೋಗಿ-ಶ್ರೀನಗರ ಕಿಟ್ಟಿ - Loose Mada Yogi starrer Roji

Srinagar Kitty entry for Roji movie: ಲೂಸ್ ಮಾದ ಯೋಗಿ ಅಭಿನಯದ 50ನೇ ರೋಜಿಯಲ್ಲಿ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಅಭಿನಯಿಸಲಿದ್ದಾರೆ.

Roji
ರೋಜಿ
author img

By ETV Bharat Karnataka Team

Published : Dec 4, 2023, 2:48 PM IST

ಕನ್ನಡ ಚಿತ್ರರಂಗದಲ್ಲಿ ಟೈಟಲ್​ ಹಾಗು ಸ್ಟಾರ್ ಕಾಸ್ಟ್​ನಿಂದ ಟಾಕ್ ಆಗುತ್ತಿರುವ ಸಿನಿಮಾ 'ರೋಜಿ'. ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರವಾಗಿರೋ ರೋಜಿ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಹೆಡ್ ಬುಷ್ ಚಿತ್ರದ ಬಳಿಕ ಶೂನ್ಯ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ರೋಜಿ ಚಿತ್ರತಂಡಕ್ಕೆ ಮತ್ತೊಬ್ಬ ಕನ್ನಡ‌ ನಟನ ಎಂಟ್ರಿಯಾಗಿದೆ.

ಹೌದು, ಶ್ರೀನಗರ ಕಿಟ್ಟಿ ರೋಜಿ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಡುಗರು ಚಿತ್ರ ಆದ ಬಳಿಕ ಶ್ರೀನಗರ ಕಿಟ್ಟಿ ಲೂಸ್ ಮಾದ ಯೋಗಿ ಈ‌ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ‌.

ಈ ಹಿಂದೆ ಲಿಯೋ ಖ್ಯಾತಿಯ ಸ್ಯಾಂಡಿ ಮಾಸ್ಟರ್​ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಚಾರ ತಿಳಿಸಿದ್ದರು. ಈಗ ಶ್ರೀನಗರ ಕಿಟ್ಟಿ "ರೋಜಿ" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್​ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ 30 ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಗಿದೆ.

ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನೂ ಹೆಚ್ಚಿನ ಖುಷಿಯಾಗಿದೆ. "ಕ್ರಿಸ್ಟೋಫರ್" ನನ್ನ ಪಾತ್ರದ ಹೆಸರು ಎಂದು ಶ್ರೀನಗರ ಕಿಟ್ಟಿ ಚಿತ್ರದಲ್ಲಿನ ತನ್ನ ಪಾತ್ರವನ್ನು ಪರಿಚಯಿಸಿಕೊಂಡರು. ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದ ನಟ ಯೋಗಿ, ನಾವಿಬ್ಬರು "ಹುಡುಗರು" ಚಿತ್ರದ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದೇವೆ ಎಂದರು.

ಈ ಸಿನಿಮಾಗೆ ಶೂನ್ಯ ಅವರು ನಿರ್ದೇಶನ ಮಾಡುತ್ತಿದ್ದು, ಗುರುಕಿರಣ್ ಅವರ ಸಂಗೀತ ಈ ಚಿತ್ರಕ್ಕಿದೆ. ನಿರ್ಮಾಪಕ ಡಿ.ವೈ ರಾಜೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರೋಜಿ ಚಿತ್ರ ಮುಂದಿನ ವರ್ಷ ಅಂದ್ರೆ 2024ರಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ: ರೆಡ್​ ಮಾರ್ಕೆಟ್​ 'ಮಾಫಿಯಾ' ಟೀಸರ್​ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.