ಹಿಂದಿ ಕಿರುತೆರೆ ನಟಿ ಶ್ರೀಜಿತ ಡೇ ಅವರು ನಿಶ್ಚಿತ ವರ ಮೈಕೆಲ್ ಬ್ಲೋಮ್-ಪೇಪ್ ಅವರೊಂದಿಗೆ ವಿವಾಹವಾಗಿದ್ದಾರೆ. ಜರ್ಮನಿಯಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮದುವೆಯ ಫೋಟೋಗಳನ್ನು ಹಂಚಿಕೊಳ್ಳಲು ನಟಿ ಇನ್ಸ್ಟಾ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ತಾನು ಮತ್ತು ಮೈಕೆಲ್ ಪ್ರಾರ್ಥನಾ ಮಂದಿರದಲ್ಲಿ ವಿವಾಹವಾಗಿರುವುದಾಗಿ ಬಿಗ್ ಬಾಸ್ ಆಲಂ ಹೇಳಿದ್ದಾರೆ.
"ಇಂದು ನಾವು ಕೊನೆಯವರೆಗೆ ಜೊತೆಯಾಗಿ ಇರುವುದಾಗಿ ಸಂಭ್ರಮಿಸುತ್ತಿದ್ದೇವೆ. ಕೈಯಲ್ಲಿ ಕೈಜೋಡಿಸುತ್ತೇವೆ" ಎಂದು ಪೋಸ್ಟ್ಗೆ ಕ್ಯಾಪ್ಶನ್ ನೀಡಿದ್ದಾರೆ. ನಟಿ ಬಿಳಿ ಬಣ್ಣದ ಗೌನ್ನಲ್ಲಿ ತುಂಬಾ ಮುದ್ದಾಗಿ ಕಂಡಿದ್ದಾರೆ. ಮೈಕೆಲ್ ಕಪ್ಪು ಟುಕ್ಸೆಡೊದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು, ಅದಕ್ಕೆ ತಕ್ಕಂತೆ ಜೋಡಿ ತಮ್ಮನ್ನು ಸಿಂಗರಿಸಿಕೊಂಡಿದ್ದರು.
ವರದಿಗಳ ಪ್ರಕಾರ, ಈ ಜೋಡಿ ವರ್ಷದ ಕೊನೆಯಲ್ಲಿ ಬೆಂಗಾಳಿ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಚರ್ಚ್ ವಿವಾಹವು, ಮೈಕಲ್ ಅವರ ಸ್ಥಳವಾದ ಜರ್ಮನಿಯಲ್ಲಿ ನಡೆದಿದೆ. ಮದುವೆಯ ಪೂರ್ವ ಸಂದರ್ಶನವೊಂದರಲ್ಲಿ ನಟಿ, ಕ್ರಿಶ್ಚಿಯನ್ ಸಮಾರಂಭಕ್ಕೆ ಬಿಳಿ ಗೌನ್ ಧರಿಸುವುದಾಗಿ ಹೇಳಿದ್ದರು.
-
Bigg Boss 16’s Sreejita De got married to beau Michael Blohm-Pape in Germany today. Congratulations!!! pic.twitter.com/ac92iZd59o
— #BiggBoss_Tak👁 (@BiggBoss_Tak) July 2, 2023 " class="align-text-top noRightClick twitterSection" data="
">Bigg Boss 16’s Sreejita De got married to beau Michael Blohm-Pape in Germany today. Congratulations!!! pic.twitter.com/ac92iZd59o
— #BiggBoss_Tak👁 (@BiggBoss_Tak) July 2, 2023Bigg Boss 16’s Sreejita De got married to beau Michael Blohm-Pape in Germany today. Congratulations!!! pic.twitter.com/ac92iZd59o
— #BiggBoss_Tak👁 (@BiggBoss_Tak) July 2, 2023
ಇದನ್ನೂ ಓದಿ: Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್ ಹೊಸ ಸಿನಿಮಾದ ಟೀಸರ್ ರಿಲೀಸ್, ರಗಡ್ ಲುಕ್‌ನಲ್ಲಿ ಅಬ್ಬರ!
"ಮದುವೆಗೆ ಮೊದಲು ನಾನು ಸ್ವಲ್ಪ ಮಟ್ಟಿಗೆ ನನ್ನನ್ನು ಅಲಂಕರಿಸಲು ಬಯಸುತ್ತೇನೆ. ಕೂದಲಿಗೆ ಹೊಸ ಬಣ್ಣವನ್ನು ಹಚ್ಚಿ ಕೇಶವನ್ನು ಸುಂದರಗೊಳಿಸಬೇಕು ಎಂದಿದ್ದೇನೆ. ನನ್ನ ಈಗಿನ ಕೂದಲ ಬಣ್ಣ ಲಾಂಗ್ ಟೈಮ್ ಅಲ್ಲ. ನಾನು ಮದುವೆಗೆ ಡ್ರೆಸ್ ಈಗಾಗಲೇ ಆರಿಸಿದ್ದೇನೆ. ಇದು ವೆಸ್ಟರ್ನ್ ವೆಡ್ಡಿಂಗ್" ಎಂದು ಹೇಳಿದ್ದರು.
ಶ್ರೀಜಿತ ಡೇ ಮತ್ತು ಮೈಕೆಲ್ ಬ್ಲೋಮ್- ಪೇಪ್ ಜರ್ಮನಿಯಲ್ಲಿ ತಮ್ಮ ಕ್ರಿಶ್ಚಿಯನ್ ವಿವಾಹದ ನಂತರ ಅವರಿಬ್ಬರ ಮದುವೆಯ ನೆನಪಿಗಾಗಿ ಜುಲೈ 17 ರಂದು ಅದ್ದೂರಿ ಆರತಕ್ಷತೆಯನ್ನು ಆಯೋಜಿಸಲು ಮುಂಬೈಗೆ ಹಿಂತಿರುಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಗೋವಾದಲ್ಲಿ ನಡೆಯಲಿರುವ ಬೆಂಗಾಳಿ ಶೈಲಿಯ ವಿವಾಹಕ್ಕಾಗಿ ಅವರು ಆಕರ್ಷಕ ಆಲೋಚನೆಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ತೆರೆ ಹಂಚಿಕೊಂಡ ದೀಪಿಕಾ, ರಣ್ವೀರ್, ರಾಮ್ಚರಣ್, ತ್ರಿಶಾ - ಯಾವುದು ಈ ಸಿನಿಮಾ?
ಈ ಜೋಡಿ 2019 ರಿಂದ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ, ಜೋಡಿ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡರು. ಎರಡು ವರ್ಷಗಳ ಡೇಟಿಂಗ್ ನಂತರ, ಮೈಕೆಲ್ 2021 ರಲ್ಲಿ ಪ್ಯಾರಿಸ್ನಲ್ಲಿ ನಟಿಗೆ ಪ್ರಪೋಸ್ ಮಾಡಿದ್ದರು. ಶ್ರೀಜಿತ ಡೇ ನಟಿಯಾದರೆ, ಮೈಕೆಲ್ ಕಂಪನಿ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.
ಬಿಗ್ ಬಾಸ್ 16 ರ ಮನೆಯಲ್ಲಿದ್ದ ಸಮಯದಲ್ಲಿ, ಶ್ರೀಜಿತಾ ತನ್ನ ಸಂಗಾತಿ ಮೈಕೆಲ್ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಅವರಿಬ್ಬರ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು. ಶ್ರೀಜಿತಾ ಅವರನ್ನು ಅಚ್ಚರಿಗೊಳಿಸುವ ಸಲುವಾಗಿಯೇ ಮೈಕೆಲ್, ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: Tiger Shroff and Disha Patani: ಬ್ರೇಕಪ್ ವದಂತಿ ನಂತರ ಜೊತೆಯಾಗಿ ಕಾಣಿಸಿಕೊಂಡ ಟೈಗರ್ ಶ್ರಾಫ್- ದಿಶಾ ಪಟಾನಿ