ಹರಿಯಾಣದ ಬಿಜೆಪಿ ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ (43) ಗೋವಾದಲ್ಲಿ ಸೋಮವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಫೋಗಟ್ ತಮ್ಮ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಬಂಧ ಕುಟುಂಬಸ್ಥರು ಹಲವು ಪ್ರಶ್ನೆಗಳನ್ನು ಎತ್ತಿದ್ದು, ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸೋನಾಲಿ ಫೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ. ಸೋನಾಲಿ ಸಹೋದರ ರಿಂಕು ಢಾಕಾ ಅವರು ಗೋವಾ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸಹೋದರಿಯ ಇಬ್ಬರು ಸಹಾಯಕರು (assistant) ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋನಾಲಿ ಫೋಗಟ್ ಅತ್ಯಾಚಾರ: ಸೋನಾಲಿ ಪಿಎ ಸುಧೀರ್ ಸಾಂಗ್ವಾನ್, ಸುಖ್ವಿಂದರ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಮಾಡಿದ್ದಾರೆ. ಸಾಂಗ್ವಾನ್ ತಮ್ಮ ಸ್ನೇಹಿತ ಸುಖ್ವಿಂದರ್ ಜೊತೆ ಸೇರಿ ಆಕ್ಷೇಪಾರ್ಹ ವಿಡಿಯೋ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಆಹಾರದಲ್ಲಿ ಮದ್ದು ಬೆರೆಸಿ ಬಳಿಕ ಅತ್ಯಾಚಾರ ಮಾಡಿ ಕೊಲೆ ಎಸಗಿದ್ದಾರೆ. ಹತ್ಯೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಸೋನಾಲಿ 2019ರಲ್ಲಿ ತಮ್ಮ ರಾಜಕೀಯ ಅವಧಿಯಲ್ಲಿ ಸುಧೀರ್ ಮತ್ತು ಸುಖ್ವಿಂದರ್ ಅವರನ್ನು ಭೇಟಿಯಾಗಿದ್ದರು. ಸುಧೀರ್ ರೋಹ್ಟಕ್ ಮೂಲದವರು ಮತ್ತು ಸುಖ್ವಿಂದರ್ ಹರಿಯಾಣದ ಭಿವಾನಿಯವರು. 2021ರಲ್ಲಿ ಸೋನಾಲಿ ಮನೆಯಲ್ಲಿ ಕಳ್ಳತನ ನಡೆದಿತ್ತು. ಸುಧೀರ್ ಈ ಕೃತ್ಯದ ಹಿಂದೆ ಇದ್ದನು. ಆದರೆ ಘಟನೆಯ ನಂತರ ಅಡುಗೆಯವರು ಮತ್ತು ಇತರೆ ಸಿಬ್ಬಂದಿಯನ್ನು ವಜಾಗೊಳಿಸಲಾಯಿತು. ಸುಧೀರ್ ಮಾಡಿದ್ದ ಖೀರ್(ಆಹಾರ ಪದಾರ್ಥ) ತಿಂದು ಅಸ್ವಸ್ಥ ಅನುಭವ ಆಗಿದ್ದ ಬಗ್ಗೆ ಸೋನಾಲಿ ಸ್ವತಃ ತನಗೆ ಹೇಳಿದ್ದರು ಎಂದು ಸಹೋದರ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
-
Haryana | I received a call from her the evening before her death. She said she wanted to talk over WhatsApp & said that something fishy is going on... later, she cut the call & then didn't pick up: Rupesh, sister of Haryana BJP leader and content creator Sonali Phogat (23.08) https://t.co/BfMUrypZsj pic.twitter.com/m7pf5vrDw7
— ANI (@ANI) August 24, 2022 " class="align-text-top noRightClick twitterSection" data="
">Haryana | I received a call from her the evening before her death. She said she wanted to talk over WhatsApp & said that something fishy is going on... later, she cut the call & then didn't pick up: Rupesh, sister of Haryana BJP leader and content creator Sonali Phogat (23.08) https://t.co/BfMUrypZsj pic.twitter.com/m7pf5vrDw7
— ANI (@ANI) August 24, 2022Haryana | I received a call from her the evening before her death. She said she wanted to talk over WhatsApp & said that something fishy is going on... later, she cut the call & then didn't pick up: Rupesh, sister of Haryana BJP leader and content creator Sonali Phogat (23.08) https://t.co/BfMUrypZsj pic.twitter.com/m7pf5vrDw7
— ANI (@ANI) August 24, 2022
ಸೋನಾಲಿ ರಾಜಕೀಯ ಮತ್ತು ಚಲನಚಿತ್ರ ವೃತ್ತಿಜೀವನವನ್ನು ಕೊನೆಗೊಳಿಸುವಂತೆ ಸುಧೀರ್ ಅನೇಕ ಸಂದರ್ಭಗಳಲ್ಲಿ ಬೆದರಿಕೆ ಹಾಕಿದ್ದಾರೆ. ಸುಧೀರ್ ಸುಖ್ವಿಂದರ್ ಜೊತೆ ಸೇರಿ ಏನು ಬೇಕಾದರು ಮಾಡಬಹುದು ಎಂದು ಸೋನಾಲಿ ನನ್ನ ಬಳಿ ಪ್ರಸ್ತಾಪಿಸಿದ್ದರು. ಸೋನಾಲಿ ಸಾವಿನ ದಿನ ಫೋನ್ ಸಂಪರ್ಕ ಕಡಿತಗೊಂಡಿತ್ತು ಎಂದು ರಿಂಕು ಢಾಕಾ ತಿಳಿಸಿದ್ದಾರೆ.
ಇನ್ನು ಸೋನಾಲಿ ಅವರ ಸಹೋದರಿ ರೂಪೇಶ್ ಕೂಡ ಸಾವಿನ ಬಳಿಕ ಹಲವು ಆರೋಪಗಳನ್ನು ಮಾಡಿದ್ದರು. ಸೋನಾಲಿ ಫೋಗಟ್ ನಿಧನ ಆಗುವ ಒಂದು ದಿನದ ಮೊದಲು ತಮ್ಮ ತಾಯಿಯೊಂದಿಗೆ ಮಾತನಾಡಿದ್ದರು. ಆ ವೇಳೆ ತನಗೆ ಊಟದ ನಂತರ ಅನ್ ಈಸಿ ಎಂದು ಅನಿಸುತ್ತಿದೆ ಎಂದು ಸೋನಾಲಿ ತಾಯಿಯೊಂದಿಗೆ ತಿಳಿಸಿದ್ದರು. ನನ್ನೊಂದಿಗೂ ಸರಿಯಾಗಿ ಮಾತನಾಡಿಲ್ಲ. ಈ ಸಾವಿನ ಹಿಂದೆ ಯಾವುದೋ ಸಂಚು ಅಡಗಿದೆ ಎಂದು ಆರೋಪಿಸಿದ್ದರು. ಸೋನಾಲಿ ಅವರ ಹಿರಿಯ ಸಹೋದರಿ ರಾಮನ್ ಮಾತನಾಡಿ, ಸೋನಾಲಿ ಫೋಗಟ್ ದೈಹಿಕವಾಗಿ ಸದೃಢರಾಗಿದ್ದರು. ಅವರಿಗೆ ಹೃದಯಾಘಾತವಾಗಿಲ್ಲ. ಸೂಕ್ತ ಸಿಬಿಐ ತನಿಖೆಗೆ ನಾವು ಒತ್ತಾಯಿಸುತ್ತೇವೆ ಎಂದಿದ್ದರು.
ಇದನ್ನೂ ಓದಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ.. ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ
ನನ್ನ ತಾಯಿಗೆ ನ್ಯಾಯ ಸಿಗಬೇಕು. ಪ್ರಕರಣಕ್ಕೆ ಸರಿಯಾದ ತನಿಖೆಯ ಅಗತ್ಯವಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸೋನಾಲಿ ಫೋಗಟ್ ಪುತ್ರಿ ಒತ್ತಾಯಿಸಿದ್ದಾರೆ.