ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿತ್ರದ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ 'ಕ್ಯಾಪ್ಚರ್'. ಪ್ರಿಯಾಂಕ ಉಪೇಂದ್ರ ನಟನೆಯ ಮಮ್ಮಿ, ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ್ ನಿರ್ದೇಶಿಸಿ, ರವಿರಾಜ್ ಅದ್ಧೂರಿ ನಿರ್ಮಾಣದ 'ಕ್ಯಾಪ್ಚರ್' ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ವಿಶೇಷತೆಗಳಿಂದ ಸೌಂಡ್ ಮಾಡುತ್ತಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮಾಡುತ್ತಿರುವ ತಂಡ ಓರ್ವ ಸ್ಪೆಷಲ್ ವ್ಯಕ್ತಿ ಜೊತೆ ಪ್ರಿಯಾಂಕಾ ಉಪೇಂದ್ರ ಅವರನ್ನು ಸಂದರ್ಶನ ಮಾಡಿಸಿತು.
ಅಷ್ಟಕ್ಕೂ ಪ್ರಿಯಾಂಕ ಉಪೇಂದ್ರರನ್ನು ಸ್ಪೆಷಲ್ ಇಂಟರ್ ವ್ಯೂ ಮಾಡಿರೋದು ಉಪೇಂದ್ರ, ಪ್ರಿಯಾಂಕರ ಮುದ್ದಿನ ಮಗ ಆಯುಷ್. ಆಯುಷ್ ಅವರು ಅಮ್ಮನಿಗೆ ಕ್ಯಾಪ್ಚರ್ ಚಿತ್ರದ ಬಗ್ಗೆ ಹಾಗು ದೆವ್ವಗಳನ್ನು ನೋಡಿದ್ದೀರಾ? ಎಂಬೆಲ್ಲ ಸಾಕಷ್ಟು ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಕೇಳಿದರು.
ಹಾರರ್ ಮೂವೀಸ್ ನೋಡಿ ನಿದ್ದೆ ಬಿಟ್ಟಿದ್ದರು ಪ್ರಿಯಾಂಕ: ಪ್ರಿಯಾಂಕ ಚಿಕ್ಕವರಿದ್ದಾಗಿನಿಂದ ಹಾರರ್ ಚಿತ್ರಗಳನ್ನು ನೋಡುತ್ತಿದ್ದರಂತೆ. ಈ ರೀತಿಯ ಸಿನಿಮಾಗಳಲ್ಲಿ ಹೆಚ್ಚು ಆಸಕ್ತಿ ಇತ್ತಂತೆ. ತಾವು ಮೊದಲು ತಾವು ನೋಡಿದ ಹಾರರ್ ಚಿತ್ರವನ್ನು ಅವರು ತಿಳಿಸಿದ್ದಾರೆ. ಹಾಲಿವುಡ್ನ 'ದಿ ಎಕ್ಸಾರ್ಸಿಸ್ಟ್' ಮೂವಿಯನ್ನು ನೋಡಿ 3-4 ತಿಂಗಳು ನಿದ್ದೆಯನ್ನೇ ಮಾಡಿಲ್ವಂತೆ.
ಇನ್ನು ತಮ್ಮ ಸಿನಿಮಾ ಕೆರಿಯರ್ನಲ್ಲಿ ಹಾರರ್ ಚಿತ್ರದಲ್ಲಿ ನಟಸಿರುವ ಬಗ್ಗೆ ಕೇಳಿದಾಗ, 'ಮಮ್ಮಿ' ಸಿನಿಮಾ ಮೊದಲ ಹಾರರ್ ಚಿತ್ರವಾಗಿದ್ದು, ನಿರ್ದೇಶಕ ಲೋಹಿತ್ ಸ್ಕ್ರಿಪ್ಟ್ ತಿಳಿಸಿದ ರೀತಿಯಿಂದಲೇ ನಾನು ತುಂಬಾ ಥ್ರಿಲ್ ಆಗಿದ್ದೆ. ಮಮ್ಮಿ ಸಿನಿಮಾ ಕೇವಲ ಹಾರರ್ ಅಲ್ಲದೆ, ಅದರಲ್ಲಿ ಗರ್ಭಿಣಿ ಪಾತ್ರವಾಗಿರಬಹುದು, ತಾಯಿ, ಮಗು ರೀತಿಯ ಬೇರೆ ಬೇರೆ ಅಂಶಗಳಿದ್ದವು ಎಂದು ತಿಳಿಸಿದರು. ಜತೆಗೆ ಪ್ರಿಯಾಂಕರ ಮಮ್ಮಿ ಸಿನಿಮಾದ ಫಸ್ಟ್ ಶೋ ನೋಡಿದ್ದ ಮಗ ಆಯುಷ್ ಥಿಯೆಟರ್ನಿಂದಲೇ ಓಡಿ ಹೋಗಿರುವ ವಿಚಾರವನ್ನೂ ಇಂಟರ್ವ್ಯೂನಲ್ಲಿ ಬಿಚ್ಚಿಟ್ಟಿದ್ದಾರೆ.
ಮುಂದುವರೆದು ಮಾತನಾಡಿ, ಉಪೇಂದ್ರ ನಟನೆಯ ಕಲ್ಪನಾ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಮೆಚ್ಚಿನ ಸಿನಿಮಾಗಳಲ್ಲಿ ಇದೂ ಒಂದು. ಉಪೇಂದ್ರ ಉತ್ತಮವಾಗಿ ನಟಿಸಿದ್ದಾರೆ. ಇದರ ತಮಿಳು ಆವೃತ್ತಿಯ ಸಿನಿಮಾ ಕೂಡ ಇಷ್ಟವಾಯಿತು. ಉಪೇಂದ್ರ ನಿರ್ದೇಶನದ ಶ್ ಚಿತ್ರ ಕೂಡ ಪ್ರಪಂಚದಲ್ಲಿರುವ ಕನ್ನಡ ಪ್ರೇಕ್ಷಕರೆಲ್ಲರೂ ಇಷ್ಟಪಟ್ಟಿರುವ ಸಿನಿಮಾ ಎಂದರು.
ಉಪೇಂದ್ರರನ್ನು ನೋಡಿ ಭಯಪಟ್ಟಿದ್ದ ಪ್ರಿಯಾಂಕ: ಕಲ್ಪನಾ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಅವರು ಕಲ್ಪನಾ ವೇಷದಲ್ಲಿಯೇ ಒಂದು ದಿನ ಮಧ್ಯರಾತ್ರಿ ಮನೆಗೆ ಬಂದಿದ್ದರಂತೆ. ರಿಯಲ್ ಸ್ಟಾರ್ ಕಲ್ಪನಾ ಲುಕ್ ನೋಡಿ ಸಿಕ್ಕಾಪಟ್ಟೆ ಹೆದರಿಕೊಂಡಿದ್ದೆ ಅಂತಾರೆ ಪ್ರಿಯಾಂಕ. ಉಪೇಂದ್ರ ಅವರಿಗೂ ಹಾರರ್ ಸಿನಿಮಾ ಅಂದ್ರೆ ಇಷ್ಟ ಎಂದು ಪ್ರಿಯಾಂಕ ತಿಳಿಸಿದರು.
ನನಗೆ ಮಮ್ಮಿ ಸಿನಿಮಾದ ಶೂಟಿಂಗ್ನಲ್ಲಿ ನೆಗೆಟಿವ್ ಅನುಭವ ಆಗಿತ್ತು. ಶೂಟಿಂಗ್ ಸೆಟ್ನಲ್ಲಿ ಒಮ್ಮೆ ಚಿತ್ರಕ್ಕೆ ಬಳಸಿದ್ದ ದೆವ್ವದ ಮುಖವಾಡವನ್ನು ಒಂದು ರೂಮ್ನೊಳಗೆ ಇಟ್ಟಿದ್ದರಂತೆ. ಇದನ್ನು ಸಿನಿಮಾದಲ್ಲಿ ಪ್ರಿಯಾಂಕರ ತಂಗಿಯಾಗಿ ನಟಿಸಿದ್ದ ಐಶ್ವರ್ಯ ಸಿಂಧೋಗಿ ಅವರ ಕೇಶ ವಿನ್ಯಾಸಕಿ ನೋಡಿ ನಿಜವಾದ ದೆವ್ವವೆಂದೇ ಹೆದರಿಕೊಂಡಿದ್ದರಂತೆ. ಹಾಗೆಯೇ ಲೋಹಿತ್ ಅವರಿಗೆ ರೆಸಾರ್ಟ್ನ ರೂಮ್ನಲ್ಲಿ ಮಲಗಿದ್ದಾಗ ಕಿಟಿಕಿಯಲ್ಲಿ ಟಕ್ಟಕ್ ಸೌಂಡ್ ಕೇಳಿದ್ದ ಅನುಭವವಾಗಿತ್ತು ಎಂದು ಅವರು ಹೇಳಿದರು.
ಇದೀಗ ಕ್ಯಾಪ್ಚರ್ ಸಿನಿಮಾದ ಶೂಟಿಂಗ್ ಹೆಚ್ಚಾಗಿ ರಾತ್ರಿಯೇ ನಡೆದಿದ್ದು, ಬೆಳಗಾಗುವ ಸಮಯಕ್ಕೆ ಮಲಗುತ್ತಿದ್ದೆವು. ಈ ಸಿನಿಮಾದಿಂದ ತುಂಬಾ ಭಯಪಟ್ಟಿದ್ದೇವೆ. ಈ ಮೂವಿಯನ್ನು ಸಿಸಿಟಿವಿಯಿಂದ ರೆಕಾರ್ಡ್ ಆಗಿರುವ ಹಾಗೆಯೇ ಚಿತ್ರೀಕರಿಸಲಾಗಿದೆ ಎಂದರು.
ಇದನ್ನೂ ಓದಿ: ''ಚಿ.ತು ಯುವಕರ ಸಂಘ'' ಸಿನಿಮಾಗೆ ಜೋಗಿ ಪ್ರೇಮ್, ಅಧ್ಯಕ್ಷ ಶರಣ್ ಸಾಥ್