ಸೇಲಂ (ತಮಿಳುನಾಡು): ಭಾರತದ ಕ್ರಿಕೆಟಿಗ ನಟರಾಜನ್ ಸೇಲಂನಲ್ಲಿ ಮ್ಯಾರಥಾನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮ್ಯಾರಥಾನ್ ಓಟ ಪ್ರತಿಯೊಬ್ಬರಿಗೂ ಮುಖ್ಯವಾಗಿದ್ದು, ಚಿಕ್ಕವರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಮ್ಯಾರಥಾನ್ ಓಡಬೇಕು. ದೈಹಿಕ ಶಕ್ತಿ, ಮಾನಸಿಕ ಶಕ್ತಿ ಹಾಗೂ ಧೈರ್ಯವನ್ನು ಹೆಚ್ಚಿಸಲು ಮ್ಯಾರಥಾನ್ ಸದಾ ಸಹಕಾರಿಯಾಗಿದೆ ಎಂದರು.
ಎಲ್ಲಾ ಕ್ರೀಡೆಗಳಿಗೆ ಓಟದ ಅಗತ್ಯವಿದೆ. ಕ್ರೀಡಾಪಟುಗಳನ್ನು ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಸೆಳೆಯಬೇಕು. ನನ್ನಂತೆ ಇನ್ನಷ್ಟು ಯುವಕರು ಕ್ರೀಡೆಯಲ್ಲಿ ಸಾಧನೆ ಮಾಡಲಿ ಎಂಬುದು ನನ್ನ ಹಾರೈಕೆ. ಮುಂದಿನ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಚೆನ್ನಾಗಿ ಆಡುತ್ತೇನೆ ಎಂದು ತಿಳಿಸಿದರು.
ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತೇನೆ. ನಟ ಶಿವ ಕಾರ್ತಿಕೇಯನ್ ಅಭಿನಯದಲ್ಲಿ ನನ್ನ ಬಯೋಪಿಕ್ ಸಿನಿಮಾವೊಂದು ನಿರ್ಮಾಣವಾಗಲಿದೆ. ನನ್ನ ಕ್ರಿಕೆಟ್ ವೃತ್ತಿ ಜೀವನದ ಯಶಸ್ಸಿನ ನಂತರವೇ ಈ ಸಿನಿಮಾ ಆಗಲಿದೆ. ಶಿವ ಕಾರ್ತಿಕೇಯನ್ ಖಂಡಿತಾ ನಟಿಸುತ್ತಾರೆ, ಬಯೋಪಿಕ್ನ ನಿರ್ಮಾಣವನ್ನೂ ಮಾಡುತ್ತಾರೆ ಎಂದು ಖುಷಿಯಿಂದ ತಿಳಿಸಿದರು.
ಇದನ್ನೂ ಓದಿ: 3 ಗಂಟೆ 12 ನಿಮಿಷವಿರುವ 'ಅವತಾರ್ 2' ಸಿನಿಮಾ ಬಿಡುಗಡೆಗೆ ದಿನಗಣನೆ