ETV Bharat / entertainment

ಸೆಟ್ಟೇರಿದ 'ಸಿಂಘಮ್​ ಅಗೈನ್' ಸಿನಿಮಾ;​ ಮುಂದಿನ ದೀಪಾವಳಿಗೆ ಬಿಡುಗಡೆ - ಅಕ್ಷಯ್​​ ಕುಮಾರ್

Singham again shooting: ರೋಹಿತ್​ ಶೆಟ್ಟಿ ನಿರ್ದೇಶನದ ಸಿಂಘಮ್​ ಅಗೈನ್​ ಸಿನಿಮಾ ಸೆಟ್ಟೇರಿದೆ.

Singham Again:
ಸಿಂಘಮ್​ ಎಗೈನ್​
author img

By ETV Bharat Karnataka Team

Published : Sep 17, 2023, 8:39 AM IST

ಚಿತ್ರಮಂದಿರದಲ್ಲಿ ಮತ್ತೊಮ್ಮೆ ಸಿಂಘಮ್​ ಘರ್ಜಿಸಲು ಸಜ್ಜಾಗಿದೆ. ಬಾಲಿವುಡ್​​ ನಟರಾದ ಅಜಯ್​ ದೇವ್​​ಗನ್, ಅಕ್ಷಯ್​​ ಕುಮಾರ್ ಹಾಗೂ ರಣ್​ವೀರ್​ ಸಿಂಗ್​ ತೆರೆ ಹಂಚಿಕೊಳ್ಳುತ್ತಿರುವ ಹೊಸ ಚಿತ್ರವನ್ನು ರೋಹಿತ್​ ಶೆಟ್ಟಿ ನಿರ್ದೇಶಿಸಲಿದ್ದಾರೆ. ಈಗಾಗಲೇ ಚಿತ್ರದ ಪೂಜಾ ಕಾರ್ಯಕ್ರಮ ನೆರವೇರಿದೆ.

ಅಜಯ್​ ದೇವ್​ಗನ್ ಶೂಟಿಂಗ್​ ಪ್ರಾರಂಭಿಸಿದ್ದಾರೆ. ಚಿತ್ರತಂಡವು ಮುಹೂರ್ತ ಕಾರ್ಯಕ್ರಮದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಪೂಜೆಯಲ್ಲಿ ಅಜಯ್​ ದೇವ್​​ಗನ್ ಹಾಗೂ ರಣ್​ವೀರ್​ ಸಿಂಗ್​ ಹಾಗು ನಿರ್ದೇಶಕ ರೋಹಿತ್​ ಶೆಟ್ಟಿ ಇದ್ದರು. ಸಿಂಘಮ್‌ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಇದೀಗ ಮತ್ತಷ್ಟು ಉತ್ಸುಕರಾಗಿದ್ದಾರೆ.

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಕೂಡಾ ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾ ಕುರಿತು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸಿಂಘಮ್​ ಅಗೈನ್​ ಪೂಜಾ ಫೋಟೋಗಳನ್ನು ಹಂಚಿಕೊಂಡ ಓ ಮೈ ಗಾಡ್​​ ಸಿನಿಮಾ ನಟ, ''ಶೂಟಿಂಗ್​ ಸೆಟ್​ನಲ್ಲಿ ನಿಮ್ಮೊಂದಿಗೆ ಸೇರಿಕೊಳ್ಳಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಚಿತ್ರತಂಡಕ್ಕೆ ಶುಭವಾಗಲಿ, ಜೈ ಮಹಾಕಾಲ್​​​'' ಎಂದು ಬರೆದಿದ್ದಾರೆ.

ನಾಯಕ ನಟ ಅಜಯ್​ ದೇವ್​ಗನ್​ ಸಹ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ''12 ವರ್ಷಗಳ ಹಿಂದೆ ಭಾರತೀಯ ಚಿತ್ರರಂಗಕ್ಕೆ ನಾವು ಅದ್ಭುತ ಸಿನಿಮಾ ನೀಡಿದ್ದೆವು. ಹಲವು ವರ್ಷಗಳಿಂದ ನಾವು ಪಡೆಯುತ್ತಿರುವ ಪ್ರೀತಿಯಿಂದ ಇದೀಗ ಸಿಂಘಮ್​ ಕುಟುಂಬ ದೊಡ್ಡದಾಗಿದೆ. ಸಿಂಘಮ್​ ಅಗೈನ್​ನೊಂದಿಗೆ ನಮ್ಮ ಫ್ರ್ಯಾಂಚೈಸಿಯನ್ನು ಮುನ್ನಡೆಸುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 'ನಾನು ನಿಮ್ಮನ್ನು ಆಹ್ವಾನಿಸಿಲ್ಲ': ಸಿಟ್ಟಾದ ನಟಿ ಪರಿಣಿತಿ ಚೋಪ್ರಾ

ರಣ್​ವೀರ್​ ಸಿಂಗ್​ ಸಹ ಫೋಟೋಗಳನ್ನು ಪ್ರಕಟಿಸಿ, ಹೊಸ ಪ್ರಯಾಣಕ್ಕೆ ಅಭಿಮಾನಿಗಳಲ್ಲಿ ಪ್ರೀತಿ ಮತ್ತು ಆಶೀರ್ವಾದ ಕೇಳಿದ್ದಾರೆ. ನಟನ ಕೊನೆಯ ಸಿನಿಮಾ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ. ಆಲಿಯಾ ಭಟ್​ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದರು. ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿ ಆಗಿತ್ತು.

ಇದನ್ನೂ ಓದಿ: ಜಗ್ಗೇಶ್​ ನಟನೆಯ 'ತೋತಾಪುರಿ 2'ಗೆ ಶಿವಣ್ಣ ಸಾಥ್.. ಗಣಪತಿ ಹಬ್ಬಕ್ಕೆ ಸಿಗಲಿದೆ ಕಾಮಿಡಿ ಕಿಕ್​

ಸಿಂಘಮ್​ ಅಗೈನ್​ ಸಿನಿಮಾದಲ್ಲಿ ಪಠಾಣ್​, ಜವಾನ್​​ ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 'ದೀಪ್​​ವೀರ್' ಜೋಡಿ ಮತ್ತೊಮ್ಮೆ ಸಿನಿಮಾವೊಂದರಲ್ಲಿ ಕೆಲಸ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷದ ದೀಪಾವಳಿಗೆ ತೆರೆಕಾಣಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.