ETV Bharat / entertainment

ಸೋನು ನಿಗಮ್ ತಂದೆಯ ಮನೆಯಿಂದ 72 ಲಕ್ಷ ಎಗರಿಸಿದ ಮಾಜಿ ಕಾರ್​ ಡ್ರೈವರ್ - ಸೋನು ನಿಗಮ್​ ತಂದೆಗೆ ಕಾರು ಚಾಲಕನಿಂದ ಪಂಗನಾಮ

ಗಾಯಕ ಸೋನು ನಿಗಮ್​ ಅವರ ತಂದೆಯ ಮಾಜಿ ಕಾರು ಚಾಲಕ 72 ಲಕ್ಷ ರೂಪಾಯಿ ಎಗರಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಗಳು ಕೂಡ ಲಭ್ಯವಾಗಿವೆ.

ಗಾಯಕ ಸೋನು ನಿಗಮ್
ಗಾಯಕ ಸೋನು ನಿಗಮ್
author img

By

Published : Mar 23, 2023, 9:38 AM IST

ಮುಂಬೈ: ಪ್ರಸಿದ್ಧ ಗಾಯಕ ಸೋನು ನಿಗಮ್​ ಅವರ 76 ವರ್ಷದ ವೃದ್ಧ ತಂದೆಯ ಮನೆಯಲ್ಲಿ ಕಳ್ಳತನವಾಗಿದೆ. ಮಾಜಿ ಕಾರು ಚಾಲಕನೇ ಈ ಕೃತ್ಯ ನಡೆಸಿದ್ದಾನೆ. ಆತ ಮನೆಯಿಂದ 72 ಲಕ್ಷ ರೂ.ಗಳನ್ನು ಕದ್ದಿದ್ದಾನೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ. ಆತನ ವಿರುದ್ಧ ಕಳ್ಳತನ ಮತ್ತು ಅತಿಕ್ರಮ ಪ್ರವೇಶ ನಡೆಸಿದ ಬಗ್ಗೆ ಎಫ್​ಐಆರ್​ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಸೋನು ನಿಗಮ್​ ​ತಂದೆ ಆಗಮಕುಮಾರ್ ನಿಗಮ್ ಅವರು ಅಂಧೇರಿ ಪಶ್ಚಿಮದ ಓಶಿವಾರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 19 ಮತ್ತು ಮಾರ್ಚ್ 20 ರ ನಡುವೆ ಕಳ್ಳತನ ನಡೆದಿದೆ ಎಂದು ದೂರಿದ್ದಾರೆ.

ಆಗಮಕುಮಾರ್ ಅವರು ಸುಮಾರು 8 ತಿಂಗಳಿನಿಂದ ರೆಹಾನ್ ಎಂಬ ಚಾಲಕನನ್ನು ಹೊಂದಿದ್ದರು. ಆದರೆ, ಆತನ ಕೆಲಸ ಉತ್ತಮವಾಗಿರದ ಕಾರಣ ಆತನನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಭಾನುವಾರ (ಮಾರ್ಚ್ 19) ಮಧ್ಯಾಹ್ನ ಆಗಮಕುಮಾರ್ ಅವರು ವರ್ಸೋವಾ ಪ್ರದೇಶದಲ್ಲಿರುವ ಮಗಳು ನಿಕಿತಾ ಅವರ ಮನೆಗೆ ಊಟಕ್ಕೆ ಭೇಟಿ ತೆರಳಿದ್ದರು. ಸ್ವಲ್ಪ ಸಮಯದ ನಂತರ ಹಿಂತಿರುಗಿದಾಗ, ಮನೆಯ ಕಬೋರ್ಡ್​ನಲ್ಲಿ ಇಟ್ಟಿದ್ದ 40 ಲಕ್ಷ ರೂಪಾಯಿ ಕಳ್ಳತನವಾಗಿದ್ದು ಗೊತ್ತಾಗಿದೆ.

ಎರಡನೇ ಬಾರಿ ಮತ್ತೆ ಕಳ್ಳತನ: ವಿಷಯವನ್ನು ಆಗಕುಮಾರ್​ ಅವರು ಮಗಳಿಗೆ ತಿಳಿಸಿದ್ದರು. ಡಿಜಿಟಲ್​ ಲಾಕರ್​ ಒಳಗಿದ್ದ ಹಣವನ್ನು ಕದ್ದಿರುವುದು ಹಲವು ಅನುಮಾನಗಳನ್ನು ಮೂಡಿಸಿತ್ತು. ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಮರುದಿನ ಆಗಮಕುಮಾರ್ ಅವರು ವೀಸಾ ಸಂಬಂಧಿತ ಕೆಲಸದ ನಿಮಿತ್ತ ಸೋನು ನಿಗಮ್​ ಅವರ ಮನೆಗೆ ಬಂದು ಹೋಗಿದ್ದರು. ಈ ವೇಳೆ ಲಾಕರ್‌ನಿಂದ ಇನ್ನೂ 32 ಲಕ್ಷ ರೂಪಾಯಿ ಎಗರಿಸಿದ್ದು ಕಂಡುಬಂದಿದೆ. ಈ ಬಗ್ಗೆ ಭೀತಿಗೊಂಡ ಕುಟುಂಬ ತಕ್ಷಣವೇ ಎಚ್ಚೆತ್ತುಕೊಂಡಿದೆ.

ಸಿಸಿಟಿವಿಯಲ್ಲಿ ಚಾಲಕ ಪತ್ತೆ: ಆಗಮಕುಮಾರ್ ಮತ್ತು ಮಗಳು ನಿಕಿತಾ ಅವರು ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಮಾಜಿ ಕಾರು ಚಾಲಕ ಬ್ಯಾಗಿನ ಸಮೇತ ನಡೆದು ಹೋಗಿರುವುದು ಕಂಡುಬಂದಿದೆ. ಎರಡೂ ದಿನ ಆತ ಆಗಕುಮಾರ್​ ಅವರ ಮನೆ ಮುಂದೆಯಿಂದ ಬ್ಯಾಗ್​ ಹಿಡಿದುಕೊಂಡು ಹೋಗಿದ್ದಾನೆ.

ಇದರಿಂದ ಮಾಜಿ ಚಾಲಕನೇ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು ಗೊತ್ತಾದ ಬಳಿಕ ಸೋನು ನಿಗಮ್ ಅವರ ತಂಗಿ ನಿಕಿತಾ ಅವರು, ಬುಧವಾರ ಮುಂಜಾನೆ ಓಶಿವಾರಾ ಪೊಲೀಸ್ ಠಾಣೆಗೆ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಚಾಲಕ ರೆಹಾನ್ ತಮ್ಮ ಫ್ಲ್ಯಾಟ್‌ಗೆ ನಕಲಿ ಕೀ ಸಹಾಯದಿಂದ ಪ್ರವೇಶಿಸಿ ಕೋಣೆಯಲ್ಲಿದ್ದ ಡಿಜಿಟಲ್ ಲಾಕರ್‌ನಿಂದ 72 ಲಕ್ಷ ರೂಪಾಯಿ ಕದ್ದಿದ್ದಾನೆ ಎಂದು ತಿಳಿಸಿದ್ದಾರೆ.

ನಿಕಿತಾ ಅವರ ದೂರಿನ ಮೇರೆಗೆ ಓಶಿವಾರಾ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 380, 454 ಮತ್ತು 457 ರ ಅಡಿಯಲ್ಲಿ ಕಳ್ಳತನ ಮತ್ತು ಅತಿಕ್ರಮ ಪ್ರವೇಶಕ್ಕಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಆಧಾರರಹಿತ 1.90 ಕೋಟಿ ರೂಪಾಯಿ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.