ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರತಿಷ್ಠಿತ ಎಂದು ಪರಿಗಣಿಸಲ್ಪಟ್ಟಿರುವ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಮುಂದಿನ ತಿಂಗಳು 10 ಮತ್ತು 11 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೈಮಾ ವೇದಿಕೆಯಲ್ಲಿ ಸ್ಪರ್ಧಿಸಲಿರುವ ಟಾಪ್ ನಟರ ಚಿತ್ರಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾದ ಮತ್ತು ನಾಮನಿರ್ದೇಶನಕ್ಕೆ ಆಯ್ಕೆಯಾದ ಚಲನಚಿತ್ರಗಳು ಇವಾಗಿದ್ದು ಎಷ್ಟು ವಿಭಾಗಗಳಲ್ಲಿ ಸ್ಪರ್ಧಿಸಲಿವೆ ಎಂದು ತಿಳಿಸಲಾಗಿದೆ.
ಕನ್ನಡದ ವಿಷಯಕ್ಕೆ ಬಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರವು 10 ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ (ನಿರ್ದೇಶನ) ನಟನೆಯ ಸಿನಿಮಾ ಗರುಡ ಗಮನ ವೃಷಭ ವಾಹನ ಕೂಡ 8 ವಿಭಾಗಗಳಲ್ಲಿ ನಾಮಿನೇಟ್ ಆದರೆ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಚಿತ್ರವು 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಇವುಗಳ ಜೊತೆಗೆ ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನ ಮಾಡಿರುವ ಸಲಗ ಮತ್ತು ಶಿವರಾಜ್ ಕುಮಾರ್ ನಟನೆಯ ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರ ಕೂಡ ನಾಮನಿರ್ದೇಶನಗೊಂಡಿವೆ.
-
#SIIMANominations for Best Film in Kannada for the year 2021 are #Roberrt #Yuvarathnaa #GarudaGamanaVrishabhaVahana #Salaga #Bhajarangi2 #10YearsofSIIMA #SIIMA2022 pic.twitter.com/CoMAQmgEcP
— SIIMA (@siima) August 17, 2022 " class="align-text-top noRightClick twitterSection" data="
">#SIIMANominations for Best Film in Kannada for the year 2021 are #Roberrt #Yuvarathnaa #GarudaGamanaVrishabhaVahana #Salaga #Bhajarangi2 #10YearsofSIIMA #SIIMA2022 pic.twitter.com/CoMAQmgEcP
— SIIMA (@siima) August 17, 2022#SIIMANominations for Best Film in Kannada for the year 2021 are #Roberrt #Yuvarathnaa #GarudaGamanaVrishabhaVahana #Salaga #Bhajarangi2 #10YearsofSIIMA #SIIMA2022 pic.twitter.com/CoMAQmgEcP
— SIIMA (@siima) August 17, 2022
ಟಾಲಿವುಡ್ನಲ್ಲಿ 'ಪುಷ್ಪ', 'ಅಖಂಡ', 'ಉಪ್ಪೇನ' ಮತ್ತು 'ಜಾತಿರತ್ನ' ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆಗಿವೆ. ಸೌತ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ-ದಿ ರೈಸ್' ಚಿತ್ರ 12 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದರೆ, ಬಾಲಯ್ಯ ಅಭಿನಯದ 'ಅಖಂಡ' ಸಿನಿಮಾ 10 ವಿಭಾಗಗಳಲ್ಲಿ ಎರಡನೇ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದೆ.
ಮಲಯಾಳಂನಲ್ಲಿ ಟೊವಿನೋ ಥಾಮಸ್ ನಟನೆಯ 'ಮಿನ್ನಲ್ ಮುರಳಿ' 10 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅಲ್ಲದೆ ದುಲ್ಕರ್ ಸಲ್ಮಾನ್ ಅಭಿನಯದ ಕುರುಪ್ ಚಿತ್ರವು 6 ವಿಭಾಗಗಳಲ್ಲಿ ನಾಮಿನೇಟ್ ಆದರೆ, ಫಹಾದ್ ಫಾಜಿಲ್ ನಟನೆಯ ಜೋಜಿ ಚಿತ್ರ ಕೂಡ 6 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ತಮಿಳಿನಲ್ಲಿ ಸೆಲ್ವರಾಜ್ ನಿರ್ದೇಶನದ ಧನುಷ್ ನಟನೆಯ ಕರ್ಣನ್ ಚಿತ್ರವು 10 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ಅಲ್ಲದೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ವಿಜಯ್ ನಟನೆಯ ಮಾಸ್ಟರ್ ಚಿತ್ರ ಸೇರಿದಂತೆ ಡಾಕ್ಟರ್ ಮತ್ತು ತಲೈವಿ ತಲಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಪ್ರಶಸ್ತಿ ವಿತರಣಾ ಸಮಾರಂಭವು ಸೆಪ್ಟೆಂಬರ್ 10 ಮತ್ತು 11 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಇದನ್ನೂ ಓದಿ: ಟೆಲಿವಿಷನ್ ಪ್ರೀಮಿಯರ್ ಲೀಗ್: ನಾಳೆಯಿಂದ 3 ದಿನ ಕಿರುತೆರೆ ಕಲಾವಿದರಿಗೆ ಕ್ರಿಕೆಟ್ ಹಬ್ಬ