ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೋಡಿ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಲಕಾಲ ಡೇಟಿಂಗ್ ನಡೆಸಿ, 2023ರ ಆರಂಭದಲ್ಲಿ ಹಸೆಮಣೆ ಏರಿದ ಪ್ರೇಮಪಕ್ಷಿಗಳು ಆಗಾಗ್ಗೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಾರೆ. ಇದೀಗ ನಟ ನಟಿಯ ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದಾಗುತ್ತಿದೆ.
ಕಿಯಾರಾ ಅಡ್ವಾಣಿ ಜನ್ಮದಿನಕ್ಕೆ ದಿನಗಣನೆ: ಬಹುಬೇಡಿಕೆ ನಟಿ ಕಿಯಾರಾ ಅಡ್ವಾಣಿ ಜುಲೈ 31 ರಂದು ತಮ್ಮ ಹುಟ್ಟುಹಬ್ಬ ಆಚರಿಸಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಪತಿ ಮಲ್ಹೋತ್ರಾ ಅವರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ಗುರುವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಸೆಲೆಬ್ರಿಟಿ ಕಪಲ್ ಕಾಣಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ ಮುಂಬೈ ಏರ್ಪೋರ್ಟ್ನಲ್ಲಿ ಸಿದ್ ಕಿಯಾರಾ ಕ್ಯಾಶುವಲ್ ಲುಕ್ನಲ್ಲಿದ್ದರು. ಕಿಯಾರಾ ಅಡ್ವಾಣಿಯವರ ಸಂತಸ, ಉತ್ಸಾಹ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಕಿಯಾರಾ ಪ್ರವಾಸಕ್ಕೂ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ ಸಿದ್ಧಾರ್ಥ್ ಜೊತೆಗಿನ ಸುಂದರ ಸೆಲ್ಫಿ ಶೇರ್ ಮಾಡಿದ್ದಾರೆ. ಕಪಲ್ ಫೋಟೋ ಹಂಚಿಕೊಂಡ ನಟಿ, 'ಟೈಮ್ ಟು' ಎಂದು ಬರೆದು ಏರೋಪ್ಲೇನ್ ಎಮೋಜಿ ಹಾಕಿದ್ದಾರೆ.
ಪಾಪರಾಜಿಗಳು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಿದ್ಧಾರ್ಥ್ ಕಿಯಾರಾ ವಿಡಿಯೋ ಶೇರ್ ಮಾಡಿದ್ದಾರೆ. ನಟ-ನಟಿಯ ಮುಂಬೈ ಏರ್ಪೋರ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಜೋಡಿ ಮೇಲಿನ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ಮತ್ತು ಕಿಯಾರಾ ಮೇಡ್ ಫಾರ್ ಈಚ್ ಅದರ್ ಎನ್ನುವಂತಹ ಕಾಂಪ್ಲಿಮೆಂಟ್ಸ್ ಕೊಡುತ್ತಿದ್ದಾರೆ. ಉಳಿದಂತೆ ಅಭಿಮಾನಿಗಳು ರೆಡ್ ಹಾರ್ಟ್, ಫೈರ್, ಲವ್ ಎಮೋಜಿಗಳೊಂದಿಗೆ ಮೆಚ್ಚಿನ ತಾರೆಯರ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿಯಲ್ಲಿ ಹಸೆಮಣೆ ಏರುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣರಾದರು. ವಿವಾಹಕ್ಕೂ ಮುನ್ನ ಈ ಬಾಲಿವುಡ್ ಲವ್ ಬರ್ಡ್ಸ್ ಎಲ್ಲಿಯೂ ತಮ್ಮ ಪ್ರೀತಿಯ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಈ ಜೋಡಿ ಡೇಟಿಂಗ್ನಲ್ಲಿರಬಹುದು ಎಂಬ ಗುಸುಗುಸು ಹರಡಿತ್ತು. ಸಿನಿಮಾ ಈವೆಂಟ್ಗಳು, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ವದಂತಿಗಳಿಗೆ ತುಪ್ಪ ಸುರಿದಿದ್ದರು.
ಇದನ್ನೂ ಓದಿ: Kiara Advani Photos: ಬಾರ್ಬಿ ಲುಕ್ನಲ್ಲಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ
ಇತ್ತೀಚಿನ ಸಂದರ್ಶನವೊಂದರಲ್ಲಿ ಸಿದ್ಧಾರ್ಥ್ ಮೇಲೆ ಕಿಯಾರಾ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು. ಎರಡು ಜೀವಗಳು ಸೇರಿ ಒಂದು ಮನೆ ಮಾಡುತ್ತಾರೆ. ಸಿದ್ಧಾರ್ಥ್ ಅನ್ನು ಬಾಳಸಂಗಾತಿಯಾಗಿ ಪಡೆದಿರುವ ನಾನು ಬಹಳ ಅದೃಷ್ಟಶಾಲಿ. ನನಗೆ ಎಲ್ಲವೂ ಅವರೇ. ನಾವು ಈ ಜಗತ್ತಿನಲ್ಲಿ ಎಲ್ಲೇ ಇದ್ದರೂ, ಯಾವ ನಗರದಲ್ಲೇ ಇದ್ದರೂ, ಸಿದ್ಧಾರ್ಥ್ ಅವರೇ ನನ್ನ ಮನೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಸಹೋದ್ಯೋಗಿಗಳು 'ಪರಿ'ಣಿತಿ ಹೆಸರೇಳಿ ನನ್ನನ್ನು ಚುಡಾಯಿಸುತ್ತಿದ್ದರು: ಸಂಸದ ರಾಘವ್ ಚಡ್ಡಾ