ETV Bharat / entertainment

ಸಿದ್ಧಾರ್ಥ್ ಮಲ್ಹೋತ್ರಾ ಬರ್ತ್​​ಡೇ: ರೊಮ್ಯಾಂಟಿಕ್​ ವಿಡಿಯೋ ಶೇರ್ ಮಾಡಿದ ಕಿಯಾರಾ ಅಡ್ವಾಣಿ - ಕಿಯಾರಾ ಅಡ್ವಾಣಿ

ಸಿದ್ಧಾರ್ಥ್ ಮಲ್ಹೋತ್ರಾ ಜನ್ಮದಿನಕ್ಕೆ ಪತ್ನಿ ಕಿಯಾರಾ ಅಡ್ವಾಣಿ ವಿಶೇಷವಾಗಿ ಶುಭ ಕೋರಿದ್ದಾರೆ.

Sidharth Malhotra Kiara Advani
ಕಿಯಾರಾ ಅಡ್ವಾಣಿ - ಸಿದ್ಧಾರ್ಥ್ ಮಲ್ಹೋತ್ರಾ
author img

By ETV Bharat Karnataka Team

Published : Jan 16, 2024, 4:28 PM IST

Updated : Jan 16, 2024, 4:33 PM IST

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಾಲಿವುಡ್​ನ ಜನಪ್ರಿಯ ತಾರಾಜೋಡಿ. ಉತ್ತಮ ಸಿನಿಮಾಗಳ ಜೊತೆ ಜೊತೆಗೆ ವೈಯಕ್ತಿಕ ವಿಚಾರಗಳಿಂದಲೂ ಅಭಿಮಾನಿಗಳ ಮೆಚ್ಚಿನ ಜೋಡಿಯಾಗಿ ಉಳಿದುಕೊಂಡಿದ್ದಾರೆ. ಪ್ರೀತಿಸಿ ದಾಂಪತ್ಯ ಜೀವನ ಆರಂಭಿಸಿರುವ ಈ ಜೋಡಿ ತಮ್ಮ ಪ್ರೀತಿಯನ್ನು ಯಾವುದೇ ಹಿಂಜರಿಕೆಯಿಲ್ಲದೇ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಾರೆ. ಅದರಂತೆ ಇಂದು ಕಿಯಾರಾ ಅಡ್ವಾಣಿ ಶೇರ್ ಮಾಡಿರೋ ರೊಮ್ಯಾಂಟಿಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

Sidharth Malhotra Kiara Advani
ಕಿಯಾರಾ ಅಡ್ವಾಣಿ ಇನ್​ಸ್ಟಾಗ್ರಾಮ್​ ಸ್ಟೋರಿ

ಇಂದು ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜನ್ಮದಿನ. 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ನಟನಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪತ್ನಿ ಕಿಯಾರಾ ಅಡ್ವಾಣಿ ಕೂಡ ಸುಂದರ ವಿಡಿಯೋ ಶೇರ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಜೋಡಿಯ ಸಂತಸದ ಕ್ಷಣಗಳು, ಚುಂಬನದ ದೃಶ್ಯಗಳು, ಬರ್ತ್​​ ಡೇ ಸೆಲೆಬ್ರೇಶನ್​​ ಎಲ್ಲವನ್ನೂ ಶೇರ್ಷಾ ನಟಿ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.

ಇಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ಶೇರ್ ಮಾಡಲಾಗಿರುವ ಸುಂದರ ವಿಡಿಯೋದಲ್ಲಿ, ಇಬ್ಬರೂ ಚುಂಬಿಸಿ, ಅಪ್ಪಿಕೊಂಡಿದ್ದಾರೆ. ಕ್ಯಾಮರಾಗೆ ಪೋಸ್ ನೀಡುತ್ತಿದ್ದ ಸಂದರ್ಭ ಇಬ್ಬರ ಮೊಗದಲ್ಲೂ ಸಂತಸ ಎದ್ದುಕಂಡಿದೆ. ಸಿನಿಮಾ ಥೀಮ್​​ನಲ್ಲಿ ಕೇಕ್​ ರೆಡಿಯಾಗಿತ್ತು. ಫಿಲ್ಮ್ ರೀಲ್ ಅನ್ನು ಹೋಲುವ ವಿನ್ಯಾಸದಲ್ಲಿ ರೆಡಿ ಮಾಡಲಾಗಿದ್ದ ಕೇಕ್​​ನಲ್ಲಿ ಸಿದ್ಧಾರ್ಥ್ ಅವರ ಪ್ರತಿಮೆಯನ್ನು (ಕೇಕ್​) ಸಹ ಇರಿಸಲಾಗಿತ್ತು. ಕಿಯಾರಾ ಸ್ಟೈಲಿಶ್ ಬ್ಲ್ಯಾಕ್​​ ಡ್ರೆಸ್​ನಲ್ಲಿ ಬೆರಗುಗೊಳಿಸುವ ನೋಟ ಬೀರಿದ್ದಾರೆ. ಸಿದ್ಧಾರ್ಥ್ ರೈನ್​ಬೋ ಕಲರ್​​ನ ಟೀ ಶರ್ಟ್, ಪ್ಯಾಂಟ್‌ ಧರಿಸಿದ್ದರು. ವಿಡಿಯೋ ಹಂಚಿಕೊಂಡ ಪತ್ನಿ ಕಿಯಾರಾ ಅಡ್ವಾಣಿ, ರೆಡ್​​ ಹಾರ್ಟ್ ಎಮೋಜಿಯೊಂದಿಗೆ "ಹ್ಯಾಪಿ ಬರ್ತ್‌ಡೇ ಲವ್" ಎಂಬ ಕ್ಯಾಪ್ಷನ್​​ ಕೊಟ್ಟಿದ್ದರು.

Sidharth Malhotra Kiara Advani
ಕಿಯಾರಾ ಅಡ್ವಾಣಿ ಇನ್​ಸ್ಟಾಗ್ರಾಮ್​ ಸ್ಟೋರಿ

ನಟ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ 39ನೇ ಜನ್ಮದಿನವನ್ನು ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ಅವರ ಪೋಷಕರು ಜಗದೀಪ್ ಅಡ್ವಾಣಿ ಮತ್ತು ಜಿನೆವೀವ್ ಜಾಫ್ರಿ ಅವರು ಬರ್ತ್​ಡೇ ಸೆಲೆಬ್ರೇಶನ್​ಗೆ ಆಗಮಿಸಿದ್ದರು. ಖ್ಯಾತ ಚಲನಚಿತ್ರ ನಿರ್ಮಾಪಕ - ನಿರ್ದೇಶಕರಾದ ಕರಣ್ ಜೋಹರ್ ಮತ್ತು ಶಕುನ್ ಬತ್ರಾ ಸಹ ಸೆಲೆಬ್ರೇಶನ್​ಗೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ: 'ಕಂಗುವ' ಪೋಸ್ಟರ್: ವಿಭಿನ್ನ ಅವತಾರಗಳಲ್ಲಿ ಸೂಪರ್​ ಸ್ಟಾರ್ ಸೂರ್ಯ

ಸಿನಿಮಾ ವಿಚಾರ ಗಮನಿಸುವುದಾದರೆ, ಸಿದ್ಧಾರ್ಥ್ ಮಲ್ಹೋತ್ರಾ ಅವರು ರೋಹಿತ್ ಶೆಟ್ಟಿ ಅವರ ಆ್ಯಕ್ಷನ್-ಪ್ಯಾಕ್ಡ್ ವೆಬ್ ಸರಣಿ ಇಂಡಿಯನ್ ಪೊಲೀಸ್ ಫೋರ್ಸ್‌ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದೇ ಜನವರಿ 19ರಂದು ಅಮೆಜಾನ್ ಪ್ರೈಮ್‌ನಲ್ಲಿ ಪ್ರೀಮಿಯರ್ ಆಗಲಿದೆ. ಇದಲ್ಲದೇ, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ' ಯೋಧ'ದಲ್ಲಿ ಸಹ ನಟ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಭರತ್, ತಾಂಡವ್​ ಕಾಂಬಿನೇಶನ್​ನ 'ದೇವನಾಂಪ್ರಿಯ' ಫಸ್ಟ್ ಲುಕ್ ರಿವೀಲ್​

Last Updated : Jan 16, 2024, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.