ETV Bharat / entertainment

ಸಾಮಾಜಿಕ ಜಾಲತಾಣದಲ್ಲಿ ಹಾಟ್​ ಟಾಪಿಕ್​ ಆದ ರಶ್ಮಿಕಾ - ಗಿಲ್​ ಸುದ್ದಿ..! ಕಾರಣ ಇಲ್ಲಿದೆ - ಹಾಟ್​ ಟಾಪಿಕ್​ ಆದ ರಶ್ಮಿಕಾ

ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಜೊತೆ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ಟೀಂ ಇಂಡಿಯಾದ ಯುವ ಕ್ರಿಕೆಟರ್​ ಶುಭ್​ಮನ್​ ಗಿಲ್​ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅವರ ಪ್ರತಿಕ್ರಿಯೆ ಕೆಲವರಿಗೆ ಅಚ್ಚರಿ ತರಿಸಿದೆ. ಕಾರಣ?

Shubman Gill Reaction
Shubman Gill Reaction
author img

By

Published : Mar 8, 2023, 8:13 PM IST

Updated : Mar 8, 2023, 8:57 PM IST

ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಬಗ್ಗೆ ಭಾರತೀಯ ಕ್ರಿಕೆಟ್​ ತಂಡದ ಯುವ ಆಟಗಾರ ಶುಭ್‌ಮನ್ ಗಿಲ್ ಮೌನ ಮುರಿದಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಪೋಸ್ಟ್​ವೊಂದನ್ನು ಹಂಚಿಕೊಂಡು ಕೆಲವರಿಗೆ ಶಾಕ್​ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಯನ್ನು ನಂಬದಂತೆ ಪರೋಕ್ಷವಾಗಿ ಅವರು ತಮ್ಮ ಕ್ರೀಡಾಭಿಮಾನಿಗಳಿಗೆ ಕಿವಿ ಮಾತು ಕೂಡ ಹೇಳಿದ್ದಾರೆ. 'ನಟಿ ರಶ್ಮಿಕಾ ಮಂದಣ್ಣ ಬಗ್ಗೆ ನಾನು ಎಲ್ಲಿಯೂ ಏನನ್ನೂ ಹೇಳಿಕೊಂಡಿಲ್ಲ. ಇದೆಲ್ಲವೂ ಕಪೋಕಲ್ಪಿತ ಸುದ್ದಿಯಾಗಿದೆ' ಎಂದು ಶುಭ್‌ಮನ್ ಗಿಲ್ ಪೋಸ್ಟ್​ನಲ್ಲಿ ಬರೆದುಕೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಗಿಲ್​ ಅವರ ಈ ಫೋಸ್ಟ್​ ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Shubman Gill Reaction
ಕ್ರಿಕೆಟರ್​ ಶುಭ್​ಮನ್​ ಗಿಲ್​ ಪ್ರತಿಕ್ರಿಯೆ

ಆಂಗ್ಲ ಪತ್ರಿಕೆಯೊಂದು ನಟಿ ರಶ್ಮಿಕಾ ಮಂದಣ್ಣ ಯುವ ಕ್ರಿಕೆಟಿಗ ಶುಭ್‌ಮನ್ ಅವರ ಕ್ರಶ್​ ಎಂಬ ಸುದ್ದಿಯೊಂದನ್ನು ಪ್ರಕಟಿಸಿತ್ತು. ಎಲ್ಲಿಂದಲೋ ಬಂದ ಈ ಗಾಳಿ ಸುದ್ದಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾರಿ​ ವೈರಲ್​ ಆಗಿತ್ತು. ನೆಟಿಜನ್​ಗಳು ಸಹ ಈ ಸುದ್ದಿ ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲದೇ ತರಹೇವಾರಿ ಕಮೆಂಟ್​ ಮಾಡುವ ಮೂಲಕ ಗಾಳಿ ಸುದ್ದಿಗೆ ರೆಕ್ಕೆ-ಪುಕ್ಕ ಕೂಡ ಕಟ್ಟಿದ್ದರು. ಇದು ಶುಭ್‌ಮನ್ ಗಿಲ್ ಅವರ ಕಿವಿಗೂ ತಲುಪಿತ್ತು. ಹಾಗಾಗಿ ಈ ವದಂತಿಯನ್ನು ಮುಂದೆ ಹರಿಬಿಡದ ಅವರು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು ಗಾಳಿ ಸುದ್ದಿಗೆ ಅಂತ್ಯ ಹಾಡಿದ್ದಾರೆ.

ಆದರೆ, ಈ ಪೋಸ್ಟ್​ ಹಲವರಿಗೆ ಅಚ್ಚರಿ ತರಿಸಿದೆ. ಕಾರಣ, ಶುಭ್‌ಮನ್ ಅವರು ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್​ ಮಾಡುತ್ತಿರುವ ಬಗ್ಗೆ ಸಾಕಷ್ಟು ವೈರಲ್​ ಆಗಿತ್ತು. ಅದೆಷ್ಟೋ ಸಲ ಗಿಲ್ ಮತ್ತು ಸಾರಾ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸುದ್ದಿಗೆ ಆಹಾರವಾಗಿದ್ದರು. ಆಗ ಬಗ್ಗೆ ಪ್ರತಿಕ್ರಿಯೆ ನೀಡದೇ ಅವರು, ಮೌನ ವಹಿಸಿದ್ದರು. ಆದರೆ, ಇದೀಗ ರಶ್ಮಿಕಾ ಮಂದಣ್ಣ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು ಅಚ್ಚರಿ ತರಿಸಿದೆ.

ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಪೋಸ್ಟ್​

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಶುಭಮನ್ ಗಿಲ್ ಅವರು ತಮ್ಮ ಮನದ ಮಾತು ಹೇಳಿಕೊಂಡಿದ್ದರು. 'ನಿಮ್ಮ ನೆಚ್ಚಿನ ಬಾಲಿವುಡ್ ನಾಯಕಿ ಯಾರು?' ಎಂದು ಕೇಳಲಾದ ಸಂದರ್ಶಕರ ಪ್ರಶ್ನೆಗೆ ಅವರು 'ರಶ್ಮಿಕಾ ಮಂದಣ್ಣ' ನನ್ನ ಕ್ರಶ್ ಎಂದು ಉತ್ತರಿಸಿದ್ದರು. ಈ ಹೇಳಿಕೆ ಕೇಳಿದ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಸಾರಾ ಅಲಿ ಖಾನ್ ಹೆಸರು ಹೇಳದೇ ಇದ್ದರೆ ಸಾರಾ ತೆಂಡೂಲ್ಕರ್ ಹೆಸರಾದರೂ ಕೇಳಿ ಬರುತ್ತದೆ ಎಂದು ಕಾಯುತ್ತಿದ್ದ ಅವರು ಈ ರಶ್ಮಿಕಾ ಹೆಸರು ಪ್ರಸ್ತಾಪ ಕಂಡು ಅಚ್ಚರಿ ವ್ಯಕ್ತಪಡಿಸಿದ್ದರು.

ಅಂದುಕೊಂಡಿದ್ದ ಹೆಸರುಗಳ ನಡುವೆ ತೂರಿ ಬಂದ ರಶ್ಮಿಕಾ ಹೆಸರು ಕಂಡು ಪ್ರಶ್ನೆ ಮಾಡಲಾರಂಭಿಸಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಟ್ವಿಟ್ಟರ್​ನಲ್ಲಿ ಟ್ರೆಂಡ್ ಸಹ ಆಗಿತ್ತು. ಇದನ್ನು ಗಮನಿಸಿದ ಶುಭಮನ್ ಗಿಲ್, ಈ ಹೊಸ ಪೋಸ್ಟ್​ ಮೂಲಕ ಮಾಧ್ಯಮಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಕಳೆದ ವರ್ಷ ಸಹ ಇದೇ ರೀತಿಯ ಸಂದರ್ಶನವೊಂದರಲ್ಲಿ ಶುಭ್‌ಮಾನ್‌ ಗಿಲ್​ಗೆ 'ಬಾಲಿವುಡ್‌ನಲ್ಲಿ ನಿಮ್ಮ ನೆಚ್ಚಿನ ನಟಿ ಯಾರು?' ಎಂದು ಕೇಳಲಾಗಿತ್ತು. ಆಗ ಅವರು ತಕ್ಷಣವೇ ಸಾರಾ ಅಲಿ ಖಾನ್ ಎಂದು ಉತ್ತರಿಸಿದ್ದರು. ಆದರೆ 'ನೀವು ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ?' ಎಂದು ಮರು ಪ್ರಶ್ನೆ ಮಾಡಿದಾಗ ದ್ವಂದ್ವ ಹೇಳಿಕೆ ನೀಡಿ ಸುದ್ದಿಯನ್ನು ಮರೆಮಾಚಲು ಪ್ರಯತ್ನ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಶುಭ್‌ಮನ್, ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಹಂಚಿಕೊಂಡ ಫೋಟೋಗಳಲ್ಲಿ ಅವರ ಜೊತೆ ಸಾರಾ ಅಲಿ ಖಾನ್ ಕೂಡ ಕಾಣಿಸಿಕೊಂಡಿದ್ದರು. ಇಬ್ಬರು ಜೊತೆಯಾಗಿರುವ ಫೋಟೋ ನೋಡಿದ ನೆಟಿಜನ್ಸ್​ ಅಚ್ಚರಿಗೊಳಗಾಗಿದ್ದರು.

ರಶ್ಮಿಕಾ ಮಂದಣ್ಣ 'ಪುಷ್ಪ ದಿ ರೈಸ್' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಗುರುತಿಸಿಕೊಂಡವರು. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಅವರಿಗೆ, ಯುಕೆಯಲ್ಲಿರುವ ಅಭಿಮಾನಿಯೊಬ್ಬರು ಚಿಟ್ಟೆ ವಿನ್ಯಾಸಗಳಿಂದ ತುಂಬಿರುವ ವರ್ಣರಂಜಿತ ಹೂಗುಚ್ಛವನ್ನು ವಿಶೇಷವಾಗಿ ಕಳುಹಿಸಿದ್ದಾರೆ. ಈ ಅಚ್ಚರಿಯ ಉಡುಗೊರೆ ನೋಡಿದ ರಶ್ಮಿಕಾ, 'ಈ ಉಡುಗೊರೆ ನನ್ನ ಹೃದಯವನ್ನು ಮುಟ್ಟಿತು. ಇದರಲ್ಲಿ ಕಳುಹಿಸಿದವರ ಹೆಸರಿಲ್ಲ. ಅವರು ಯಾರೇ ಆಗಿರಲಿ, ನಾನು ಅವರನ್ನು ಯಾವಾಗಲೂ ಪ್ರೀತಿಸುತ್ತೇನೆ. ಕೃತಜ್ಞತೆಗಳು ಎಂದು ಪೋಸ್ಟ್​ ಹಂಚಿಕೊಂಡಿದ್ದರು.

ಇದನ್ನೂ ಓದಿ: ವಿಶ್ರಾಂತಿ ಪಡೆಯುತ್ತಿರುವ ಬಿಗ್​ ಬಿ; ಹೋಳಿ ಸಂಭ್ರಮ ಮಿಸ್​ ಮಾಡಿಕೊಂಡ ಅಮಿತಾಭ್​​​ ಬಚ್ಚನ್​​

Last Updated : Mar 8, 2023, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.