ETV Bharat / entertainment

ಸಿನಿಮಾವಾಗಲಿದೆ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣ: ಜೈಲು ಜೀವನದ ಅನುಭವ ತೆರೆಗೆ! - ಮುಂಬೈನ ಆರ್ಥರ್​​ ರೋಡ್​ ಜೈಲಿನಲ್ಲಿ ರಾಜ್​ ಕುಂದ್ರಾ

ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್​ ಕುಂದ್ರಾ ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ.

Shilpa Shetty' husband Raj Kundra
ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ
author img

By

Published : Jul 20, 2023, 10:25 PM IST

ಜೈಲು ಜೀವನ ಆಧಾರಿತ ಚಿತ್ರವೊಂದು ಬಾಲಿವುಡ್​ನಲ್ಲಿ ಸಿದ್ಧವಾಗಲಿದೆ. ಫಿಟ್ನೆಸ್​ ಐಕಾನ್​ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್​ ಕುಂದ್ರಾ ಸಿನಿ ರಂಗಕ್ಕೆ ಪದಾರ್ಪಣೆ ಮಾಡಲಿದ್ದಾರಂತೆ. ಅವರು ತಮ್ಮ ಜೈಲು ಜೀವನದ ಅನುಭವದ ಕುರಿತು ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಅವರೇ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂಬೈನ ಆರ್ಥರ್​​ ರೋಡ್​ ಜೈಲಿನಲ್ಲಿ ರಾಜ್​ ಕುಂದ್ರಾ ಎದುರಿಸಿದ ಸಂಕಷ್ಟಗಳನ್ನು ಕಥಾವಸ್ತುವನ್ನಾಗಿರಿಸಿ ಸಿನಿಮಾ ತಯಾರಾಗಲಿದೆ.

ನಿರ್ಮಾಣದಿಂದ ಸ್ಕ್ರಿಪ್ಟ್​ವರೆಗೆ ಎಲ್ಲಾ ವಿಭಾಗಗಳಲ್ಲೂ ರಾಜ್​ ಕುಂದ್ರಾ ಮುತುವರ್ಜಿ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರೀಕರಣ ಮುಗಿಯುವವರೆಗೂ ನಿರ್ದೇಶಕರ ವಿವರಗಳನ್ನು ಗೌಪ್ಯವಾಗಿಡಲು ನಿರ್ಧರಿಸಲಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಅವರು ಈಗಾಗಲೇ ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸಿದ್ದಾರೆ ಎಂದು ಬಾಲಿವುಡ್ ವಿಶ್ಲೇಷಕರು ಹೇಳುತ್ತಿದ್ದಾರೆ. ರಾಜ್​ ಕುಂದ್ರಾ ತಮ್ಮ ಹಿಂದಿನ ವಿವಾದಗಳಿಂದ ಹೊರಬರಲು ಈ ಚಿತ್ರವನ್ನು ವೇದಿಕೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

2021 ರಲ್ಲಿ ರಾಜ್​ ಕುಂದ್ರಾ ಅವರ ಬಂಧನವಾಗಿತ್ತು. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್​ಕುಂದ್ರಾ ಜೈಲು ಪಾಲಾಗಿದ್ದರು. ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಎಫ್‌ಐಆರ್‌ನಲ್ಲಿ ಶೆರ್ಲಿನ್ ಚೋಪ್ರಾ, ಪೂನಂ ಪಾಂಡೆ ಅವರನ್ನೂ ಸಹ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಹೆಚ್ಚಾಗಿ ಎಲ್ಲಿಯೂ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಜೊತೆಗೆ ತಮ್ಮ ಚಿತ್ರವನ್ನೂ ಎಲ್ಲಿಯೂ ಕಾಣದಂತೆ ನೋಡುಕೊಳ್ಳುತ್ತಿದ್ದರು. ಇದೀಗ ಒಮ್ಮೆಲೆ ಸಿನಿಮಾದಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.

ಇದನ್ನೂ ಓದಿ: ಒಂದೇ ಫ್ರೇಮ್​ನಲ್ಲಿ ಸೌತ್​ ಸೂಪರ್​​ಸ್ಟಾರ್ಸ್.. ಅಮೆರಿಕದಲ್ಲಿ ಕಮಲ್​ ಹಾಸನ್​​, ಪ್ರಭಾಸ್ ಮಿಂಚಿಂಗ್​​

ಶಿಲ್ಪಾ ಶೆಟ್ಟಿ ಮುಂದಿನ ಸಿನಿಮಾಗಳು: ಇನ್ನೂ ಫಿಟ್ನೆಸ್​ ಐಕಾನ್​ ಶಿಲ್ಪಾ ಶೆಟ್ಟಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಪೊಲೀಸ್ ಪಡೆಯ ಕುರಿತ ವೆಬ್​ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇದರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಕೂಡ ಇದ್ದಾರೆ.

ಇದಲ್ಲದೇ ಆಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅಭಿನಯದ 'ಕೆಡಿ-ದಿ ಡೆವಿಲ್' ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ. ಸತ್ಯವತಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಪ್ರೇಮ್​ ನಿರ್ದೇಶನದ ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಅಲ್ಲದೇ, ಬಾಲಿವುಡ್​ ಖಳನಾಯಕ ಸಂಜಯ್​ ದತ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಉಪಾಸನಾ ಹುಟ್ಟುಹಬ್ಬಕ್ಕೆ ವಿಶೇಷ ವಿಡಿಯೋ ಹಂಚಿಕೊಂಡ ರಾಮ್​ಚರಣ್​: ಮಗಳ ಬಗ್ಗೆ ಹೇಳಿದ್ದೇನು?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.