ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜವಾನ್'. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಿನ್ನೆ ತಮಿಳುನಾಡಿನಲ್ಲಿ ನಡೆಯಿತು. ಚೆನ್ನೈನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಿರ್ದೇಶಕ ಅಟ್ಲಿ, ಕಿಂಗ್ ಖಾನ್, ಪ್ರಿಯಾಮಣಿ, ವಿಜಯ್ ಸೇತುಪತಿ, ಗಾಯಕ ಅನಿರುದ್ಧ್ ರವಿಚಂದರ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. ಈ ವೇಳೆ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿಚಾರಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು.
'ಜವಾನ್'ನಲ್ಲಿ ಶಾರುಖ್ ಖಾನ್ ಮತ್ತು ವಿಜಯ್ ಸೇತುಪತಿ ವಿರುದ್ಧ ರೋಲ್ಗಳನ್ನು ಪ್ಲೇ ಮಾಡಲಿದ್ದಾರೆ. ಬಾದ್ ಶಾ ನಾಯಕನಾಗಿ ನಟಿಸಿದರೆ, ವಿಜಯ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ವಿಜಯ್ ಸೇತುಪತಿ, ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಂಡರು. ಅಂದಿನ ಒಂದು ಘಟನೆಯನ್ನು ಉಲ್ಲೇಖಿಸಿದ ಅವರು 'ಜವಾನ್' ಮೂಲಕ ಶಾರುಖ್ ಖಾನ್ ವಿರುದ್ಧ ಸೇಡು ತೀರಿಸಿಕೊಂಡಿರುವುದಾಗಿ ಹೇಳಿದರು.
-
Vijay : I had a huge crush on a girl in school, but she was madly in love with SRK, I guess I have finally fulfilled my revenge against him with Jawan, as his antagonist.
— Roвιɴ Roвerт (@PeaceBrwVJ) August 30, 2023 " class="align-text-top noRightClick twitterSection" data="
SRK : You can take revenge, But you can not take my Girls!#Jawan #JawanPreReleaseEvent#LeoRoarsIn50DAYS pic.twitter.com/gi43MRnMB6
">Vijay : I had a huge crush on a girl in school, but she was madly in love with SRK, I guess I have finally fulfilled my revenge against him with Jawan, as his antagonist.
— Roвιɴ Roвerт (@PeaceBrwVJ) August 30, 2023
SRK : You can take revenge, But you can not take my Girls!#Jawan #JawanPreReleaseEvent#LeoRoarsIn50DAYS pic.twitter.com/gi43MRnMB6Vijay : I had a huge crush on a girl in school, but she was madly in love with SRK, I guess I have finally fulfilled my revenge against him with Jawan, as his antagonist.
— Roвιɴ Roвerт (@PeaceBrwVJ) August 30, 2023
SRK : You can take revenge, But you can not take my Girls!#Jawan #JawanPreReleaseEvent#LeoRoarsIn50DAYS pic.twitter.com/gi43MRnMB6
"ನಾನು ಶಾಲೆಯಲ್ಲಿ ಕಲಿಯುತ್ತಿರುವಾಗ ನನಗೆ ಒಂದು ಹುಡುಗಿಯ ಮೇಲೆ ಕ್ರಶ್ ಇತ್ತು. ಆದರೆ ಅವಳು ಶಾರುಖ್ ಖಾನ್ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದಳು. ಇದೀಗ 'ಜವಾನ್' ಸಿನಿಮಾ ಮೂಲಕ ಶಾರುಖ್ ಖಾನ್ ಪ್ರತಿಸ್ಪರ್ಧಿಯಾಗಿ ಅವರ ಮೇಲಿನ ಸೇಡನ್ನು ತೀರಿಸಿಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ" ಎಂದು ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಿಂಗ್ ಖಾನ್, "ನೀವು ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಬಹುದು. ಆದರೆ ನನ್ನ ಹುಡುಗಿಯರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಸದ್ಯ ಈ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ವೈಷ್ಣೋದೇವಿ ಸನ್ನಿಧಿಗೆ ಎಸ್ಆರ್ಕೆ ಭೇಟಿ: ಜವಾನ್ ಪ್ರೀ ರಿಲೀಸ್ ಈವೆಂಟ್ಗೂ ಮುನ್ನ ಪ್ರಸಿದ್ಧ ನಟ ಎಸ್ಆರ್ಕೆ ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟಗಳ ಮೇಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದರು. ಜವಾನ್ ಬಿಡುಗಡೆಗೂ ಮುನ್ನ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಕೊಟ್ಟ ನಟ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಅಧಿಕಾರಿಯೊಬ್ಬರ ಪ್ರಕಾರ 58ರ ಹರೆಯದ ನಟ ಮಂಗಳವಾರ ತಡರಾತ್ರಿ ವೈಷ್ಣೋದೇವಿ ಸನ್ನಿಧಿಗೆ ಭೇಟಿ ಕೊಟ್ಟಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ಶಾರುಖ್ ಖಾನ್ ಭೇಟಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಸೆಪ್ಟೆಂಬರ್ 7ರಂದು ರಿಲೀಸ್: ತಮಿಳು ನಿರ್ದೇಶಕ ಅಟ್ಲಿ ಅವರ ನಿರ್ದೇಶನ 'ಜವಾನ್' ಈಗಾಗಲೇ ಭಾರತದಲ್ಲೆಡೆ ಹವಾ ಸೃಷ್ಟಿಸಿದೆ. ಶಾರುಖ್ ಖಾನ್ ವಿಭಿನ್ನವಾಗಿ ಈ ಚಿತ್ರದಲ್ಲಿ ಕಂಗೊಳಿಸಿದ್ದು, ದಕ್ಷಿಣ ಭಾರತದ ಪ್ರಮುಖ ನಟ ನಟಿಯರಾಗಿರುವ ನಯನತಾರ, ವಿಜಯ್ ಸೇತುಪತಿ ಇದೇ ಮೊದಲ ಬಾರಿಗೆ ಬಾಲಿವುಡ್ನಲ್ಲಿ ಮಿಂಚು ಹರಿಸಿದ್ದಾರೆ. ಇದರ ಜೊತೆಗೆ ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ರಿದ್ದಿ ಡೊಗ್ರಾ ಕೂಡ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗೌರವ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಂಜಯ್ ದತ್ ಮತ್ತು ವಿಜಯ್ ನಟನೆ ಚಿತ್ರದ ಮತ್ತೊಂದು ಹೈಲೈಟ್ ಆಗಿದೆ. ಈ ಚಿತ್ರ ಸೆಪ್ಟೆಂಬರ್ 7ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.