ETV Bharat / entertainment

ಪುತ್ರನೊಂದಿಗೆ ಮುಂಬೈ 'ಲಾಲ್​ಬೌಚ ರಾಜಾ' ಗಣಪತಿ ದರ್ಶನ ಪಡೆದ ಶಾರುಖ್​ ಖಾನ್​- ವಿಡಿಯೋ - ಈಟಿವಿ ಭಾರತ ಕನ್ನಡ

ಕಿರಿಯ ಪುತ್ರ ಅಬ್ರಾಮ್​ ಜೊತೆ ನಟ ಶಾರುಖ್​ ಖಾನ್​ ಮುಂಬೈನ ಪ್ರಸಿದ್ಧ 'ಲಾಲ್​ಬೌಚ ರಾಜಾ' ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

Shah Rukh Khan
ಪುತ್ರನ ಜೊತೆ 'ಲಾಲ್​ಬೌಚ ರಾಜಾ'ಗೆ ನಟ ಶಾರುಖ್​ ಖಾನ್​ ಭೇಟಿ, ಪೂಜೆ ಸಲ್ಲಿಕೆ
author img

By ETV Bharat Karnataka Team

Published : Sep 22, 2023, 7:59 AM IST

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ಗುರುವಾರ ತಮ್ಮ ಕಿರಿಯ ಪುತ್ರ ಅಬ್ರಾಮ್​ ಜೊತೆ ಮುಂಬೈನ ಪ್ರಸಿದ್ಧ 'ಲಾಲ್​ಬೌಚ ರಾಜಾ' ಸನ್ನಿಧಾನದಲ್ಲಿ (Lalbaugcha Raja) ವಿಶೇಷ ಪೂಜೆ ಸಲ್ಲಿಸಿದರು. 'ಲಾಲ್​ಬೌಚ ರಾಜಾ' ಲಾಲ್​ಬಾಗ್​ನಲ್ಲಿ ಇರಿಸಲಾಗಿರುವ ದೊಡ್ಡ ಗಣೇಶನ ವಿಗ್ರಹವಾಗಿದೆ. ಪೂಜೆ ಸಂದರ್ಭದಲ್ಲಿ ನಟ​ ಬಿಳಿ​ ಶರ್ಟ್​ ಧರಿಸಿದ್ದರೆ, ಮಗ ಅಬ್ರಾಮ್​ ಕೆಂಪು ಕುರ್ತಾದಲ್ಲಿ ಮುದ್ದಾಗಿ ಕಾಣುತ್ತಿದ್ದರು.

ಸೂಪರ್​ಸ್ಟಾರ್​ 'ಲಾಲ್​ಬೌಚ ರಾಜಾ'ಗೆ ಭೇಟಿ ನೀಡಿರುವ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. 1934 ರಲ್ಲಿ ಸ್ಥಾಪಿತವಾದ ಪೂಜಾ ಸ್ಥಳವಾದ ಪುಟ್ಲಬಾಯಿ ಚಾಲ್​ನಲ್ಲಿರುವ 'ಲಾಲ್​ಬೌಚ ರಾಜಾ'ದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣೇಶ ವಿಗ್ರಹ ಇತಿಹಾಸ ಪ್ರಸಿದ್ಧವಾಗಿದೆ. ಕಳೆದ ಶುಕ್ರವಾರ ಸಂಜೆ ಲಾಲ್​ಬೌಚ ರಾಜಾದ ಗಣೇಶ ಮೂರ್ತಿಯನ್ನು ಅನಾವರಣಗೊಳಿಸಲಾಗಿತ್ತು.

ಗಣೇಶ ಚತುರ್ಥಿ 10 ದಿನಗಳ ಹಬ್ಬವಾಗಿದ್ದು, ಹಿಂದೂ ಚಂದ್ರಮಾನ ಕ್ಯಾಲೆಂಡರ್​ ತಿಂಗಳ 'ಭಾದ್ರಪದ'ದ ನಾಲ್ಕನೇ ದಿನದಂದು ಪ್ರಾರಂಭವಾಗುತ್ತದೆ. ಈ ವರ್ಷ ಹಬ್ಬವು ಸೆಪ್ಟೆಂಬರ್​ 19ರಿಂದ ಪ್ರಾರಂಭವಾಗಿದೆ. ಹಬ್ಬದ ಸಮಯದಲ್ಲಿ ಗಣೇಶ ಭೂಮಿಗೆ ಬಂದು, ತನ್ನ ಭಕ್ತರಿಗೆ 10 ದಿನ ಆಶೀರ್ವಾದ ನೀಡಿ ನಂತರ ಹೆತ್ತವರಾದ ಶಿವ ಮತ್ತು ಪಾರ್ವತಿಯ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ಹಿಂದಿರುಗುತ್ತಾನೆ ಅನ್ನೋದು ನಂಬಿಕೆ.

ಇದನ್ನೂ ಓದಿ: ಶಾರುಖ್​ ಸ್ಟಾರ್​​ಡಮ್​ ಪವರ್​​: ಚಿತ್ರರಂಗದವರ ಹುಬ್ಬೇರಿಸಿದ 'ಜವಾನ್' ಕಲೆಕ್ಷನ್!

ಅಂಬಾನಿ ನಿವಾಸದಲ್ಲಿ ಚೌತಿ ಸಂಭ್ರಮ: ಗಣೇಶ ಚತುರ್ಥಿ ಮೊದಲ ದಿನವಾದ ಮಂಗಳವಾರ ದೇಶದಾದ್ಯಂತ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಬಿಲಿಯನೇರ್ ಉದ್ಯಮಿ ಮುಖೇಶ್​ ಅಂಬಾನಿ ಅವರ ಮುಂಬೈನ ಐಷಾರಾಮಿ ನಿವಾಸದಲ್ಲಿ ಅದ್ಧೂರಿ ಗಣೇಶ ಚತುರ್ಥಿ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಚಿತ್ರರಂಗ, ರಾಜಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

ಶಾರುಖ್​ ಖಾನ್​ ಕುಟುಂಬವೂ ಕಾರ್ಯಕ್ರಮಕ್ಕೆ ಆಗಮಿಸಿತ್ತು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಕುಟುಂಬ, ಸಲ್ಮಾನ್​ ಖಾನ್​, ಐಶ್ವರ್ಯಾ ರೈ ಬಚ್ಚನ್​ ಮತ್ತು ಮಗಳು ಆರಾಧ್ಯ, ಆಲಿಯಾ ಭಟ್​, ರಣ್​ವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ, ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ವಿಘ್ನೇಶ್​ ಜೋಡಿ, ವಿಕ್ಕಿ ಕೌಶಲ್​, ಅಟ್ಲೀ, ಅಥಿಯಾ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿದಂತೆ ಬಾಲಿವುಡ್​ನ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಶಾರುಖ್​ ಖಾನ್​ ಸಿನಿಮಾ: ಅಟ್ಲೀ ನಿರ್ದೇಶನದ 'ಜವಾನ್'​ ಸಿನಿಮಾ ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಈ ಚಿತ್ರದ ಯಶಸ್ಸಿನೊಂದಿಗೆ ಶಾರುಖ್​ ಮತ್ತೊಮ್ಮೆ ತಮ್ಮ ಸ್ಟಾರ್​ಡಮ್​ ಸಾಬೀತುಪಡಿಸಿದ್ದಾರೆ. ನಾಲ್ಕು ವರ್ಷಗಳ ಬ್ರೇಕ್​ ಬಳಿಕ ಬಂದ ಪಠಾಣ್​ ಸೂಪರ್​​ ಹಿಟ್ ಆಗಿತ್ತು. ಇದೀಗ ಜವಾನ್​ ಸದ್ದು ಮಾಡುತ್ತಿದೆ. ಈ ವರ್ಷದ ಕೊನೆಯಲ್ಲಿ ಡಂಕಿ ಸಿನಿಮಾ ತೆರೆ ಕಾಣಲಿದೆ.

ಇದನ್ನೂ ಓದಿ: 'ಕೆಜಿಎಫ್​ 2' ಹಿಂದಿಕ್ಕಿ ದೇಶದ 4ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ 'ಜವಾನ್​'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.