ETV Bharat / entertainment

ಶಾರುಖ್​ ಮುಂದಿನ ಚಿತ್ರ 'ಜವಾನ್' ಟೀಸರ್ ಬಿಡುಗಡೆ

ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್​ರ ಮುಂಬರುವ ಸಿನಿಮಾ 'ಜವಾನ್' ಟೀಸರ್​ ರಿಲೀಸ್​ ಆಗಿದೆ. ಈ ಟೀಸರ್​ ಅನ್ನು ನಟ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಜೂನ್ 2, 2023 ರಂದು ಬಿಡುಗಡೆಯಾಗಲಿದೆ.

author img

By

Published : Jun 3, 2022, 3:51 PM IST

Shah Rukh Khan releases teaser of his upcoming project 'Jawan'
ಶಾರುಖ್​ ಮುಂದಿನ ಚಿತ್ರ 'ಜವಾನ್' ಟೀಸರ್ ಬಿಡುಗಡೆ

ಹೈದರಾಬಾದ್: 'ಕಿಂಗ್ ಖಾನ್' ಶಾರುಖ್ ಖಾನ್ ಮತ್ತೆ ಹೊಸ ಅವತಾರದಲ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. 2018 ರಲ್ಲಿ ಶಾರುಖ್​​ ನಟನೆಯ 'ಝೀರೋ' ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಅದು ಬಾಕ್ಸ್ ಆಫೀಸ್​ನಲ್ಲಿ ಅಷ್ಟು ಹಿಟ್​ ಆಗಿರಲಿಲ್ಲ. ಈ ಸಿನಿಮಾವಾದ ಬಳಿಕ ಅಭಿಮಾನಿಗಳನ್ನು ಎರಡು ವರ್ಷಗಳ ಕಾಲ ಕಾಯಿಸಿದ ನಟ ಶಾರುಖ್ ಖಾನ್ ಇತ್ತೀಚೆಗೆ 'ಪಠಾಣ್' ಮತ್ತು 'ಡಂಕಿ' ಚಿತ್ರಗಳನ್ನು ಘೋಷಿಸಿದರು.

ಇದರ ಬೆನ್ನಲ್ಲೇ ಶುಕ್ರವಾರ ಮತ್ತೊಂದು ಘೋಷಣೆ ಮಾಡಿದ್ದು, 'ಜವಾನ್' ಸಿನಿಮಾವನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಸಿನಿಮಾವು ಜೂನ್ 2, 2023 ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ಪ್ರಾಜೆಕ್ಟ್‌ಗಾಗಿ ಅವರು ದಕ್ಷಿಣ ಭಾರತದ ನಿರ್ದೇಶಕರಾದ ಅಟ್ಲಿ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಶಾರುಖ್ ಖಾನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಶಾರುಖ್​ ಅಭಿನಯದ ‘ಪಠಾಣ್’ ಸಿನಿಮಾ ಮುಂದಿನ ವರ್ಷ ಜನವರಿ 25ಕ್ಕೆ ಬಿಡುಗಡೆಯಾಗಲಿದೆ. ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಅವರ ಇನ್ನೊಂದು ಚಿತ್ರ 'ಡಂಕಿ' ರಾಜ್‌ಕುಮಾರ್ ಹಿರಾನಿ ನಿರ್ದೇಶನ ಮಾಡಲಿದ್ದು, ಇದರಲ್ಲಿ ಶಾರುಖ್ ಸರ್ದಾರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ವಿಕ್ರಮ್​ ಸಿನಿಮಾದ ಪ್ರಚಾರ : ಬೆಳ್ಳಿತೆರೆಗೆ ಕಮ್​ಬ್ಯಾಕ್​ ಆದ ಕಮಲ್​ ಹಾಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.