ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿಶ್ವದ 9ನೇ ಸುಂದರಿ ಖ್ಯಾತಿಯ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬಹುಬೇಡಿಕೆ ನಟಿಗೆ ಅಭಿಮಾನಿಗಳು, ಆತ್ಮೀಯರು, ಚಿತ್ರರಂಗದವರು ಶುಭ ಕೋರುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್, ಪಠಾಣ್ ಸಹನಟ ಶಾರುಖ್ ಖಾನ್ ಸಹ ದೀಪಿಕಾ ಪಡುಕೋಣೆ ಅವರಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಕೋರಿದ್ದಾರೆ.
- " class="align-text-top noRightClick twitterSection" data="
">
ಶಾರುಖ್ ಖಾನ್ ಪೋಸ್ಟ್: ಇನ್ಸ್ಟಾಗ್ರಾಮ್ನಲ್ಲಿ ಪಠಾಣ್ ಚಲನ ಚಿತ್ರದಿಂದ ದೀಪಿಕಾ ಪಾತ್ರದ ಹೊಸ ನೋಟವನ್ನು ಹಂಚಿಕೊಂಡಿರುವ ಶಾರುಖ್ ಖಾನ್, ನನ್ನ ಪ್ರೀತಿಯ ದೀಪಿಕಾ ಪಡುಕೋಣೆ, ಸಾಧ್ಯವಿರುವ ಪ್ರತೀ ಅವತಾರದಲ್ಲೂ ನೀವು ಪರದೆಗೆ ಹೊಂದಿಕೊಳ್ಳುವಷ್ಟು ವಿಕಸನಗೊಂಡಿದ್ದೀರಿ!, ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ ಮತ್ತು ಜನ್ಮದಿನದ ಶುಭಾಶಯಗಳು ಎಂದು ಬರೆದಿದ್ದಾರೆ.
ಶಾರುಖ್ - ದೀಪಿಕಾ ನಟನೆ: ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಈ ಹಿಂದೆ ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡಿದ್ದಾರೆ. 'ಪಠಾಣ್' ಇವರಿಬ್ಬರ ನಾಲ್ಕನೇ ಸಿನಿಮಾವಾಗಿದ್ದು, ಸ್ಟಾರ್ ನಟರ ಅಭಿಮಾನಿಗಳಲ್ಲಿ ನಿರೀಕ್ಷೆ ಬೆಟ್ಟದಷ್ಟಿದೆ. 'ಪಠಾಣ್' ಭಾರತೀಯ ಗೂಢಚಾರನೊಬ್ಬನ ಕಥೆಯನ್ನು ಪ್ರಸ್ತುತ ಪಡಿಸಲಿದೆ.
ಚಿತ್ರ ಇದೇ ಜನವರಿ 25 ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಜನವರಿ 10 ರಂದು ಪಠಾಣ್ ಟ್ರೈಲರ್ ರಿಲೀಸ್ ಆಗಿವೆ. ಈಗಾಗಲೇ ಚಿತ್ರದ ಎರಡು ಹಾಡುಗಳಾದ ಬೇಶರಂ ರಂಗ್ ಮತ್ತು ಜೂಮೇ ಜೋ ಪಠಾಣ್ ಹಾಡು ಬಿಡುಗಡೆ ಆಗಿದ್ದು, ಬೇಶರಂ ರಂಗ್ ಸಾಂಗ್ಗೆ ಬಹುತೇಕರಿಂದ ವಿರೋಧ ವ್ಯಕ್ತವಾಗಿದೆ.
ಪಠಾಣ್: ಪಠಾಣ್ ಚಿತ್ರವು ಶಾರುಖ್ ಖಾನ್ ಅವರಿಗೆ ನಾಲ್ಕು ವರ್ಷಗಳ ವಿರಾಮದ ನಂತರದ ಮೂರು ಚಲನ ಚಿತ್ರಗಳಲ್ಲಿ ಮೊದಲನೆಯದು. ಈ ಹಿಂದೆ, ಅವರು 2018ರಲ್ಲಿ 'ಝೀರೋ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದು ಬಾಕ್ಸ್ ಆಫೀಸ್‌ನಲ್ಲಿ ಕುಸಿದಿತ್ತು. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ 'ಪಠಾಣ್' ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಎಸ್ಆರ್ಕೆಗೆ ಗೆಲುವು ತಂದುಕೊಡಲಿದೆಯೇ ಅನ್ನೋದನ್ನು ಕಾದು ನೋಡಬೇಕಿದೆ.
ದೀಪಿಕಾ ಸಿನಿ ಜರ್ನಿ: ಕರ್ನಾಟಕ ಮೂಲದವರಾದ ದೀಪಿಕಾ ಪಡುಕೋಣೆ ಕಾಲೇಜಿನ ಅವಧಿಯಲ್ಲಿಯೇ ಮಾಡೆಲಿಂಗ್ ವೃತ್ತಿ ಆಯ್ದುಕೊಂಡಿದ್ದರು. ಹಲವಾರು ಬ್ರಾಂಡ್ಗಳಿಗೆ ಮಾಡೆಲ್ ಆಗಿದ್ದರು. ಮಾಡೆಲಿಂಗ್ ಕ್ಷೇತ್ರದ ಯಶಸ್ಸಿನ ನಂತರ ಅಭಿನಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಈಗ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. 2006 ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ 'ಐಶ್ವರ್ಯಾ' ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು.
2007 ರಲ್ಲಿ ಶಾರುಖ್ ಖಾನ್ ಅವರ ಓಂ ಶಾಂತಿ ಓಂ ಚಿತ್ರಕ್ಕೆ ನಾಯಕಿ ಆದರು. ಈ ಸಿನಿಮಾ ಸೂಪರ್ ಸೂಪರ್ ಹಿಟ್ ಆಯಿತು. ಇದೇ ಚಿತ್ರಕ್ಕೆ ದೀಪಿಕಾ 4ಕ್ಕಿಂತಲೂ ಹೆಚ್ಚು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಬಳಿಕ ಹಿಂದಿ ಚಿತ್ರರಂಗದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ಮಾಡಿದ್ದು, ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ದೀಪಿಕಾ ಸಾಧನೆ: 15 ವರ್ಷಗಳ ಸುದೀರ್ಘ ವೃತ್ತಿಪರ ಜೀವನದಲ್ಲಿ ನಟಿಯ ಸ್ಥಾನಮಾನದ ಬಗ್ಗೆ ಮಾತನಾಡಲು ಹೆಚ್ಚು ಸಮಯ ಬೇಕು. ಜಾಗತಿಕ ಮಟ್ಟದಲ್ಲಿ ಪ್ರಿಯಾಂಕಾ ಚೋಪ್ರಾ ನಂತರ ಭಾರತದ ಕೀರ್ತಿ ಹೆಚ್ಚಿಸಿದವರಲ್ಲಿ ನಟಿ ದೀಪಿಕಾ ಪಡುಕೋಣೆ ಅಗ್ರಸ್ಥಾನದಲ್ಲಿದ್ದಾರೆ.
2017ರಲ್ಲಿ ದೀಪಿಕಾ ಪಡುಕೋಣೆ 'XXX: ರಿಟರ್ನ್ ಆಫ್ ಕ್ಸಾಂಡರ್ ಕೇಜ್'ನಲ್ಲಿ ನಟಿಸಿದ್ದರು. ವಿನ್ ಡಿಸೆಲ್ ಜೊತೆ ಸೆರೆನಾ ಉಂಗರ್ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು. 2017ರಲ್ಲಿ ಹಾಲಿವುಡ್‌ನಲ್ಲಿ ನಟಿಯಾಗಿ ಪ್ರವೇಶ ಮಾಡುವುದರ ಜೊತೆಗೆ, ದೀಪಿಕಾ ಅದೇ ವರ್ಷದಲ್ಲಿ ಮೆಟ್ ಗಾಲಾದಲ್ಲಿ ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: 37ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ
2022ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ದೀಪಿಕಾ ತೀರ್ಪುಗಾರರ ಸದಸ್ಯರಲ್ಲಿ ಒಬ್ಬರಾಗಿ ದೇಶವನ್ನು ಪ್ರತಿನಿಧಿಸಿದ್ದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಅಂತಾರಾಷ್ಟ್ರೀಯ ಸ್ಪರ್ಧೆಯ ಎಂಟು ಸದಸ್ಯರ ತೀರ್ಪುಗಾರರ ಪೈಕಿ ಅವರು ಏಕೈಕ ಭಾರತೀಯರಾಗಿದ್ದರು. ಇನ್ನೂ ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿದ ಭಾರತದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಹುಟ್ಟುಹಬ್ಬ: ಕನ್ನಡದ ಸೌಂದರ್ಯ ಚಿತ್ರದಿಂದ ಹಾರಿಹೋದ ಪಠಾಣ್ ಪೋರಿಯ ಚಿತ್ರಾವಳಿ