ETV Bharat / entertainment

ಕಾಳಿದಾಸನ 'ಶಾಕುಂತಲೆ'ಗೆ ಜೀವ ತಂಬಿದ ಸಮಂತಾ; ಸ್ಟಾರ್ ನಿರ್ದೇಶಕರಿಂದ ಫುಲ್ ಮಾರ್ಕ್ಸ್! - ರಾಜ್

'ಶಾಕುಂತಲಂ' ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ.

Shaakuntalam  movie review
ಶಾಕುಂತಲಂ ಸಿನಿಮಾ ವಿಮರ್ಷೆ
author img

By

Published : Apr 14, 2023, 3:57 PM IST

ಭಾರತದ ಬಹುನಿರೀಕ್ಷಿತ, ಪೌರಾಣಿಕ ಕಥೆ ಆಧರಿಸಿದ 'ಶಾಕುಂತಲಂ' ಇಂದು ಅದ್ಧೂರಿಯಾಗಿ ತೆರೆಕಂಡಿದೆ. ಕವಿ ಕಾಳಿದಾಸರ 'ಶಾಕುಂತಲಂ'ನ ಪಾತ್ರಗಳಿಗೆ ದಕ್ಷಿಣದ ಸಮಂತಾ ರುತ್​ ಪ್ರಭು, ದೇವ್​ ಮೋಹನ್​​ ಜೀವ ತುಂಬಿದ್ದು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ತೆರೆಕಂಡಿದೆ. ಸಿನಿಮಾಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್​ ಡೈರೆಕ್ಟರ್​ಗಳು ಸಹ ಚಿತ್ರದ ಬಗ್ಗೆ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

Shaakuntalam movie review
ಚಿತ್ರಕ್ಕೆ ರಾಜ್ ಮತ್ತು ಡಿಕೆ ಮೆಚ್ಚುಗೆ

ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ತೆರೆ ಕಂಚಿಕೊಳ್ಳುತ್ತಿರುವ ಸ್ಪೈ ಥ್ರಿಲ್ಲರ್ ಸಿಟಾಡೆಲ್ (ಹಾಲಿವುಡ್​ ಚಿತ್ರದ ಹಿಂದಿ ಆವೃತ್ತಿ) ಸೀರಿಸ್​​ ಅನ್ನು ರಾಜ್ ಮತ್ತು ಡಿಕೆ (Raj Nidimoru and Krishna D.K.) ಅವರು ನಿರ್ದೇಶಿಸುತ್ತಿದ್ದಾರೆ. ಸದ್ಯ ಅವರು 'ಶಾಕುಂತಲಂ'ನ ಸಮಂತಾ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.

  • Magical visuals, authentic storytelling… this beautiful film is a Samantha show all the way! There could be no better ode to Kalidasa’s masterpiece. @Samanthaprabhu2 only you could have carried this huge epic on those slender shoulders! Kudos to the entire team! Must watch 👍🏽

    — Raj & DK (@rajndk) April 13, 2023 " class="align-text-top noRightClick twitterSection" data=" ">

ನಿರ್ದೇಶಕರಾದ ರಾಜ್ ಮತ್ತು ಡಿಕೆ ಶಾಕುಂತಲಂ ವೀಕ್ಷಿಸಿ, ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರನ್ನು ಹಾಡಿ ಹೊಗಳಿದರು. ''ಮ್ಯಾಜಿಕಲ್​ ಸೀನ್​ಗಳು, ಉತ್ತಮ ಕಥೆ ಹೇಳುವಿಕೆ, ಈ ಸುಂದರ ಚಿತ್ರವು ಸಮಂತಾರ ಪ್ರದರ್ಶನವಾಗಿದೆ, ಕಾಳಿದಾಸರ ಮೇರುಕೃತಿಗೆ ಇದಕ್ಕಿಂತ (ಸಿನಿಮಾ, ಸಮಂತಾ ನಟನೆ) ಉತ್ತಮವಾದದ್ದು ಇರಲಾರದು. ಸಮಂತಾ ನೀವು ಮಾತ್ರ ಈ ಬೃಹತ್ ಮಹಾಕಾವ್ಯವನ್ನು ಇಷ್ಟು ಉತ್ತಮವಾಗಿ ಸಾಗಿಸಲು ಸಾಧ್ಯ. ಇಡೀ ತಂಡಕ್ಕೆ ಅಭಿನಂದನೆಗಳು, ನೋಡಲೇಬೇಕಾದ ಚಿತ್ರ'' ಎಂದು ಟ್ವೀಟ್ ಮಾಡಿದ್ದಾರೆ.

  • Sam, the world knows that the last few months haven't been easy for you, yet you powered through with willpower, determination & grit. You're a total trooper... time and again you've overcome seemingly insurmountable obstacles. God bless, stay strong & keep the fight on.🤜

''ಸ್ಯಾಮ್ ಕಳೆದ ಕೆಲ ತಿಂಗಳುಗಳು ನಿಮಗೆ ಸುಲಭವಾಗಿರಲಿಲ್ಲ ಎಂಬುದು ಜಗತ್ತಿಗೆ ತಿಳಿದಿದೆ. ಆದರೂ ಇವೆಲ್ಲವನ್ನೂ ಸಾಧಿಸಲು ನೀವು ಇಚ್ಛಾಶಕ್ತಿ, ದೃಢತೆ ಮತ್ತು ಧೈರ್ಯದಿಂದಿದ್ರಿ. ನೀವು 'ಸಂಪೂರ್ಣ ಸೈನಿಕ' (total trooper). ಅಡೆತಡೆಗಳನ್ನು ಮೆಟ್ಟಿ ಜಯಿಸಿದ್ದೀರಿ. ದೇವರು ಆಶೀರ್ವದಿಸಲಿ, ದೃಢವಾಗಿರಿ ಮತ್ತು ಹೋರಾಟವನ್ನು ಮುಂದುವರಿಸಿ" ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಮಂತಾ ತಮ್ಮ ಇನ್​ಸ್ಟಾ ಸ್ಟೋರಿಯಲ್ಲಿ"ಇದು ತುಂಬಾ ಸಿಹಿಯಾಗಿದೆ. ಧನ್ಯವಾದಗಳು ರಾಜ್​ ಮತ್ತು ಡಿಕೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ: "ಅರ್ಹಾಳ ನಟನೆ ನಿಮಗೆ ಇಷ್ಟವಾಗುತ್ತದೆ": 'ಶಾಕುಂತಲಂ' ಚಿತ್ರತಂಡಕ್ಕೆ ಅಲ್ಲು ಅರ್ಜುನ್​ ಶುಭಹಾರೈಕೆ

ಕಳೆದೊಂದು ತಿಂಗಳಲ್ಲಿ ಸಮಂತಾ ರುತ್​ ಪ್ರಭು ಚಿತ್ರದ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಬ್ಯುಸಿ ಶೆಡ್ಯೂಲ್​ ನಡುವೆ ಅವರ ಆರೋಗ್ಯ ಕೂಡ ಹದಗೆಟ್ಟಿದೆ. ಟ್ವೀಟ್ ಮೂಲಕ ಅಭಿಮಾನಿಗಳಿಗೆ ಈ ವಿಷಯ ತಿಳಿಸಿದ್ದರು. ಅವರ ಬೆಂಬಲಕ್ಕೆ ಬಂದ ಅಭಿಮಾನಿಗಳು ನಿಮ್ಮ ಆರೋಗ್ಯ ಬಹಳ ಮುಖ್ಯ. ನಿಮಗಾಗಿ ಸ್ವಲ್ಪ ಸಮಯ ಕೊಡಿ ಎಂದು ತಿಳಿಸಿದ್ದರು.

ಇದನ್ನೂ ಓದಿ: ಒಂದು ವರ್ಷದ ಸಂಭ್ರಮದಲ್ಲಿ ಇತಿಹಾಸ ಸೃಷ್ಟಿಸಿದ 'KGF 2': ರಾಕಿಭಾಯ್​ ಮುಂದಿನ ಚಿತ್ರಕ್ಕೆ ಹೆಚ್ಚಿದ ಕುತೂಹಲ

ಚಿತ್ರದಲ್ಲಿ ಸೌತ್​ ಸೂಪರ್​ ಸ್ಟಾರ್​ ಅಲ್ಲು ಅರ್ಜುನ್ ಪುತ್ರಿ​ ಅಲ್ಲು ಅರ್ಹಾ (6) ಸಹ ಕಾಣಿಸಿಕೊಂಡಿದ್ದಾರೆ. ಶಾಕುಂತಲಂ ಮೂಲಕ ತೆಲುಗು ಸ್ಟಾರ್ ಕಿಡ್​​ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟಿದೆ. ಅಲ್ಲು ಅರ್ಜುನ್ ಟ್ವೀಟ್​ ಮಾಡುವ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಇಡೀ ಶಾಕುಂತಲಂ ಚಿತ್ರತಂಡಕ್ಕೆ ಧನ್ಯವಾದ ಮತ್ತು ಅಲ್ಲು ಅರ್ಹಾರ ಚೊಚ್ಚಲ ನಟನೆಯನ್ನು ಎಲ್ಲರೂ ಆನಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಮಗಳನ್ನು ಸಿನಿಮಾಗೆ ಪರಿಚಯಿಸಿದಕ್ಕಾಗಿ ನಿರ್ದೇಶಕ ಗುಣ ಶೇಖರ್​ ಅವರಿಗೆ ಧನ್ಯವಾದ​. ಈ ಕ್ಷಣ ಎಂದಿಗೂ ಖುಷಿ ನೀಡುತ್ತದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.