ETV Bharat / entertainment

ಡಾ.ರಾಜ್​ಕುಮಾರ್ ಅಭಿನಯದ 'ಸಾಕ್ಷಾತ್ಕಾರ' ಚಿತ್ರದ ನಟಿ ಜಮುನಾ​ ಇನ್ನಿಲ್ಲ - ಬಾಲ್ಯದಲ್ಲೇ ನಟಿ ಪಾತ್ರ ಗಿಟ್ಟಿಸಿಕೊಂಡ ಜಮುನಾ

ಹಿರಿಯ ನಟಿ ಜಮುನಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.

Senior Actress JAMUNA Passes Away  Senior Actress JAMUNA Passes Away this morning  sakshatkara movie heroin Jamuna no more  Senior Actress JAMUNA movies  ಸಾಕ್ಷಾತ್ಕಾರ ಚಿತ್ರದ ನಟಿ​ ಇನ್ನಿಲ್ಲ  ರಾಜ್​ಕುಮಾರ್​ ಅಭಿನಯದ ಸಾಕ್ಷಾತ್ಕಾರ ಚಿತ್ರ  ಹಿರಿಯ ನಟಿ ಜಮುನಾ ಇಂದು ಬೆಳಗ್ಗೆ ನಿಧನ  ಟಾಲಿವುಡ್​ನಲ್ಲಿ ದೊಡ್ಡ ಆಘಾತ  ಜಮುನಾ ಅವರ ಪಾರ್ಥಿವ ಶರೀರ  ಬಾಲ್ಯದಲ್ಲೇ ನಟಿ ಪಾತ್ರ ಗಿಟ್ಟಿಸಿಕೊಂಡ ಜಮುನಾ  ಕನ್ನಡತಿ ಜಮುನಾ ಅನೇಕ ಬ್ಲಾಕ್ ಬಸ್ಟರ್ ಸಿನಿಮಾ
ರಾಜ್​ಕುಮಾರ್​ ಅಭಿನಯದ ಸಾಕ್ಷಾತ್ಕಾರ ಚಿತ್ರದ ನಟಿ​ ಇನ್ನಿಲ್ಲ
author img

By

Published : Jan 27, 2023, 10:14 AM IST

ಹೈದರಾಬಾದ್ (ತೆಲಂಗಾಣ): ತೆಲುಗಿನ ಖ್ಯಾತ ನಟಿ ಜಮುನಾ (86) ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರವನ್ನು ಬೆಳಗ್ಗೆ 11 ಗಂಟೆಗೆ ಫಿಲಂ ಚೇಂಬರ್‌ಗೆ ಕೊಂಡೊಯ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಇವರು 1936ರ ಆಗಸ್ಟ್ 30 ರಂದು ಜನಿಸಿದ್ದಾರೆ. ಕರ್ನಾಟಕದ ಹಂಪಿಯ ನಿಪ್ಪಾಣಿ ಶ್ರೀನಿವಾಸ ರಾವ್ ಮತ್ತು ಕೌಸಲ್ಯ ದೇವಿ ದಂಪತಿಯ ಪುತ್ರಿ. ಜಮುನಾ ಅವರನ್ನು ಜನಾ ಬಾಯಿ ಎಂದೂ ಕರೆಯುತ್ತಾರೆ. ತಂದೆ ಮಾಧ್ವ ಬ್ರಾಹ್ಮಣ, ತಾಯಿ ವೈಶ್ಯರಾಗಿದ್ದು ಪ್ರೇಮವಿವಾಹವಾಗಿದ್ದರು.

ಶ್ರೀನಿವಾಸ ರಾವ್‌ ಅವರು ಅರಿಶಿನ ಮತ್ತು ತಂಬಾಕು ವ್ಯಾಪಾರಸ್ಥರು. ಜಮುನಾ ಏಳು ವರ್ಷದರಿದ್ದಾಗ ಕುಟುಂಬ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ದುಗ್ಗಿರಾಲಕ್ಕೆ ಸ್ಥಳಾಂತರಗೊಂಡಿತ್ತು. ಜಮುನಾ ಮೂಲತಃ ಕರ್ನಾಟಕದವರಾದರೂ ಬೆಳೆದಿದ್ದು, ವ್ಯಾಸಂಗ ಎಲ್ಲ ದುಗ್ಗಿರಾಳದಲ್ಲಿ ನಡೆದಿತ್ತು.

ಒಂದು ದಿನ ಹಿರಿಯ ನಟಿ ಸಾವಿತ್ರಿ ಅವರ ನಾಟಕ ಪ್ರದರ್ಶನ ದುಗ್ಗಿರಾಳದಲ್ಲಿ ಆಯೋಜಿಸಲಾಗಿತ್ತು. ಆಗ ಸಾವಿತ್ರಿ ಮತ್ತು ನಾಟಕ ಕಲಾವಿದರು ಜಮುನಾ ಅವರ ಮನೆಯಲ್ಲಿ ತಂಗಿದ್ದರು. ನಂತರ ಸಾವಿತ್ರಿ ಜಮುನಾ ಅವರನ್ನು ಚಿತ್ರಗಳಲ್ಲಿ ನಟಿಸಲು ಆಹ್ವಾನಿಸಿದ್ದರು. ಈ ಕಾರಣದಿಂದ ತಮ್ಮ 15ನೇ ವಯಸ್ಸಿನಲ್ಲಿಯೇ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಇವರ ಮಾತೃಭಾಷೆ ಕನ್ನಡ ಎಂಬುದು ಗಮನಾರ್ಹ.

ಬಾಲ್ಯದಲ್ಲೇ ನಟಿ ಪಾತ್ರ ಗಿಟ್ಟಿಸಿಕೊಂಡ ಜಮುನಾ ಪುಟ್ಟಿಲು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಅನೇಕ ಚಿತ್ರಗಳಲ್ಲಿ ನಟಿಸಿ ಮಿಂಚಿದ್ದಾರೆ. ಕನ್ನಡದ ಉದಯ್​ಕುಮಾರ್​ ಮತ್ತು ವರನಟ ಡಾ.ರಾಜ್ ​ಕುಮಾರ್ ಅವರಂತಹ ಹಿರಿಯ ನಟರೊಂದಿಗೆ ಅಭಿನಯಿಸಿದ್ದಾರೆ. ಜಮುನಾ ನಟಿಸಿದ್ದ ಸಾಕ್ಷಾತ್ಕಾರ ಮತ್ತು ರತ್ನಗಿರಿ ರಹಸ್ಯ ಚಿತ್ರ ಸ್ಯಾಂಡಲ್​ವುಡ್​ನ ಬ್ಲಾಕ್​ಬ್ಲಸ್ಟರ್​ ಚಿತ್ರಗಳಾಗಿದ್ದವು. ಜಮುನಾರಿಗೆ ತೆಲುಗಿನ ಸತ್ಯಭಾಮಾ ಚಿತ್ರದ ಪಾತ್ರ ಅಪಾರ ಮನ್ನಣೆ ಗಳಿಸಿಕೊಟ್ಟಿತ್ತು. ಮಿಸ್ಸಮ್ಮ ಚಿತ್ರ ಇವರು ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು. ತೆಲುಗು ಅಲ್ಲದೇ, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿಯೂ ನಟಿಸಿ ಯಶಸ್ವಿ ನಾಯಕಿ ಎಂದೆನಿಸಿಕೊಂಡಿದ್ದರು.

ಕನ್ನಡತಿ ಜಮುನಾ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಲ್ಲದೇ ಅವರ ಪಾತ್ರಕ್ಕೆ ಅನೇಕ ಪ್ರಶಸ್ತಿಗಳೂ ಲಭಿಸಿವೆ. 1964 ಮತ್ತು 1968 ರಲ್ಲಿ ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು. 2008ರಲ್ಲಿ NTR ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. 1980ರಲ್ಲಿ ರಾಜಮಂಡ್ರಿಯಿಂದ ಕಾಂಗ್ರೆಸ್ ಸಂಸದರಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ವೈವಿಧ್ಯಮಯ ಪಾತ್ರಗಳ ಮೂಲಕ ಮನರಂಜಿಸಿದ ಜಮುನಾ ಸಾವು ಟಾಲಿವುಡ್‌ನಲ್ಲಿ ದುಃಖ ಉಂಟುಮಾಡಿದೆ.

ಹಿರಿಯ ನಟ ಕೃಷ್ಣ ಸಾವು ಸಂಭವಿಸಿ ಸುಮಾರು ಎರಡು ತಿಂಗಳ ಬಳಿಕ ಟಾಲಿವುಡ್​ನಲ್ಲಿ ಇದೀಗ ಮತ್ತೊಂದು ಆಘಾತದ ಸುದ್ದಿ ಕೇಳಿ ಬಂದಿದೆ. ಜನಪ್ರಿಯ ತೆಲುಗು ನಟ ಹಾಗೂ ಸೂಪರ್ ಸ್ಟಾರ್ ಕೃಷ್ಣ ಅವರು ನವೆಂಬರ್​ 15 ರಂದು ನಿಧನರಾಗಿದ್ದರು. ನವಂಬರ್​ 13ರ ರಾತ್ರಿ ಅವರಿಗೆ ಹೃದಯಾಘಾತವಾಗಿತ್ತು.

ಇದನ್ನೂ ಓದಿ: 2022ನೇ ವರ್ಷದಲ್ಲಿ ಬದುಕಿನ ಪಯಣ ಮುಗಿಸಿದ ಕನ್ನಡ ತಾರೆಯರನ್ನು ಸ್ಮರಿಸೋಣ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.