ETV Bharat / entertainment

ಸಾರಾ ಅಲಿ ಖಾನ್ ಹೊಸ ಸಿನಿಮಾ ಯಾವುದು? ಖುಷಿ ಸುದ್ದಿ ಹಂಚಿದ ಬಾಲಿವುಡ್‌ ಬೆಡಗಿ - ಆದಿತ್ಯ ರಾಯ್ ಕಪೂರ್ ಹೊಸ ಸಿನಿಮಾ

ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯಲ್ಲಿ ಈ ಸಿನಿಮಾ ಸೆಟ್ಟೇರುತ್ತಿದೆ.

Metro In Dino movie
ಮೆಟ್ರೋ ಇನ್ ದಿನೋ ಸಿನಿಮಾ
author img

By

Published : Dec 7, 2022, 2:55 PM IST

ಬಾಲಿವುಡ್​​ ನಟಿ ಸಾರಾ ಅಲಿ ಖಾನ್ ಅವರು ಕೊನೆಯ ಬಾರಿ ಬಾಲಿವುಡ್‌ನ ಬಹುಬೇಡಿಕೆಯ ನಟ ಅಕ್ಷಯ್ ಕುಮಾರ್ ಮತ್ತು ದಕ್ಷಿಣದ​ ಸೂಪರ್​ ಸ್ಟಾರ್​​ ಧನುಷ್ ಅವರೊಂದಿಗೆ 'ಅತ್ರಂಗಿ ರೆ' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಇದಾದ ಬಳಿಕ ಸಾರಾ ಯಾವುದೇ ಸಿನಿಮಾದಲ್ಲಿಯೂ ನಟಿಸಿಲ್ಲ. ತಮ್ಮ ಮುಂದಿನ ಸಿನಿಮಾ ಯಾವುದು ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದೀಗ ಸ್ವತಃ ನಟಿಯೇ ಶುಭ ಸುದ್ದಿ ಕೊಟ್ಟಿದ್ದಾರೆ.

ತಮ್ಮ ಹೊಸ ಚಿತ್ರ 'ಮೆಟ್ರೋ ಇನ್ ದಿನೋ' ಎಂದು ಘೋಷಿಸಿದ್ದಾರೆ. ಚಿತ್ರತಂಡದೊಂದಿಗೆ ಕೆಲಸ ಮಾಡಲು ಬಹಳ ಖುಷಿ ಇದೆ. ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಮೆಟ್ರೋ ಇನ್ ದಿನೋ' ತಂಡದ ಭಾಗವಾಗಲು ಉತ್ಸುಕಳಾಗಿದ್ದೇನೆ ಮತ್ತು ಕೃತಜ್ಞಳು ಎಂದು ಬರೆದಿದ್ದಾರೆ.

ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯಲ್ಲಿದ್ದರೆ, ಅನುಪಮ್ ಖೇರ್, ನೀನಾ ಗುಪ್ತಾ, ಪಂಕಜ್ ತ್ರಿಪಾಠಿ, ಕೊಂಕಣಾ ಸೇನ್, ಅಲಿ ಫಜಲ್ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭೂಷಣ್ ಕುಮಾರ್, ಅನುರಾಗ್ ಬಸು, ಕೃಷ್ಣ ಕುಮಾರ್ ನಿರ್ಮಾಣದ ಚಿತ್ರವನ್ನು ಅನುರಾಗ್ ಬಸು ನಿರ್ದೇಶಿಸಲಿದ್ದಾರೆ. ಖ್ಯಾತ ಸಂಗೀತಗಾರ ಪ್ರೀತಮ್ ಅವರ ಸಂಗೀತವಿದೆ. ಟಿ-ಸೀರೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿದೆ. ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬುದು ಸೇರಿ ಉಳಿದ ಮಾಹಿತಿ ಶೀಘ್ರದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆ.

ಇದನ್ನೂ ಓದಿ: 'ನೈಸರ್ಗಿಕ ಸೌಂದರ್ಯ ಮುಖ್ಯ'ವೆಂದ ಜಾಕ್ವೆಲಿನ್ ಫರ್ನಾಂಡಿಸ್ ಟ್ರೋಲ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.