ETV Bharat / entertainment

ಕನ್ನಡದ KD ಶೂಟಿಂಗ್​ ಸೆಟ್​ನಲ್ಲಿ ಗಾಯಗೊಂಡ ಬಾಲಿವುಡ್​ ನಟ ಸಂಜಯ್​ ದತ್ - Sanjay Dutt in KD shooting

KD ಶೂಟಿಂಗ್​ ಸೆಟ್​ನಲ್ಲಿ ಬಾಲಿವುಡ್​ ನಟ ಸಂಜಯ್​ ದತ್ ಗಾಯಗೊಂಡಿದ್ದಾರೆ.

Sanjay Dutt injured in KD shooting set
ಗಾಯಗೊಂಡ ಬಾಲಿವುಡ್​ ನಟ ಸಂಜಯ್​ ದತ್
author img

By

Published : Apr 12, 2023, 8:01 PM IST

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿವೆ. ಅದ್ಧೂರಿ ಮೇಕಿಂಗ್​​, ಕಥೆಯ ವಿಷಯದಲ್ಲಿ ಚಿತ್ರಗಳು ಫಸ್ಟ್ ಕ್ಲಾಸ್. ಯಾವ ಭಾಷೆಗೂ ಕಮ್ಮಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಸ್ಯಾಂಡಲ್​ವುಡ್​​ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಧ್ರುವ ಸರ್ಜಾ ಮತ್ತು ಪ್ರೇಮ್​​ ಕಾಂಬಿನೇಶನ್​ನಲ್ಲಿ ಮೂಡಿ ಬರಲಿರುವ 'ಕೆಡಿ' (KD) ಸಿನಿಮಾ ಮೇಕಿಂಗ್​ ಮತ್ತು ಟೈಟಲ್​ನಿಂದಲೇ ಗಮನ ಸೆಳೆದಿದೆ. ಅಲ್ಲದೇ ಬಾಲಿವುಡ್​ ಖಳ ನಾಯಕ ಸಂಜಯ್​ ದತ್​ ಮತ್ತು ದಂತದ ಗೊಂಬೆ ಶಿಲ್ಪಾ ಶೆಟ್ಟಿ 'ಕೆಡಿ' ಅಡ್ಡಾಕ್ಕೆ ಕಾಲಿಟ್ಟಿದ್ದಾರೆ.

KD shooting
ಪ್ರೇಮ್​​ - ಧ್ರವ ಸರ್ಜಾ ಕಾಂಬೋದಲ್ಲಿ KD

ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಯಾಂಡಲ್​ವುಡ್​ನ ಈ ಪ್ಯಾನ್ ಇಂಡಿಯಾ ಚಲನಚಿತ್ರದ ಶೂಟಿಂಗ್​ ನಡೆಯುತ್ತಿತ್ತು. ಕೆಡಿ ಚಿತ್ರೀಕರಣದಲ್ಲಿ ತೊಡಗಿದ್ದ ಬಾಲಿವುಡ್ ಸೂಪರ್‌ ಸ್ಟಾರ್ ಸಂಜಯ್ ದತ್ ಅವರು ಬಾಂಬ್ ಸ್ಫೋಟ ಸರಣಿಯ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಂಬ್ ಸ್ಫೋಟದ ದೃಶ್ಯವನ್ನು ಚಿತ್ರೀಕರಿಸುವಾಗ, ಸಂಜಯ್ ದತ್ ಅವರ ಮೊಣ ಕೈ, ಕೈ ಮತ್ತು ಮುಖದ ಮೇಲೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಫೈಟ್ ಮಾಸ್ಟರ್ ಡಾ. ರವಿವರ್ಮ ಚಿತ್ರಕ್ಕೆ ಆ್ಯಕ್ಷನ್ ಸೀಕ್ವೆನ್ಸ್ ಕಂಪೋಸ್ ಮಾಡುತ್ತಿದ್ದಾಗ ಈ ಅಹಿತಕರ ಘಟನೆ ನಡೆದಿದೆ.

ನಿನ್ನೆ ನಡೆದ ಘಟನೆ ಇಂದು ಬೆಳಕಿಗೆ ಬಂದಿದ್ದು, ದುರಂತದ ನಿಖರ ಮಾಹಿತಿ ತಿಳಿದುಬಂದಿಲ್ಲ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗಳಿಗೆ ನಟ ಚಿಕಿತ್ಸೆ ಪಡೆದಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರರಂಗದ ಮೂಲಗಳು ವಿವರಿಸಿವೆ. ಕೆಜಿಎಫ್ ಚಾಪ್ಟರ್ 1 ಮತ್ತು 2ರ ನಂತರ, ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ವಿರುದ್ಧ ನಟ ಸಂಜಯ್ ದತ್ ವಿಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಕೆ ಡಿ ಚಿತ್ರವನ್ನು ಪ್ರೇಮ್ ನಿರ್ದೇಶಿಸುತ್ತಿದ್ದಾರೆ ಮತ್ತು ಕೆವಿಎನ್ ಬ್ಯಾನರ್ ಅಡಿ ನಿರ್ಮಿಸಲಾಗುತ್ತಿದೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

1970ರ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಸಂಜು ಬಾಬಾ ಪ್ರಮುಖ ವಿಲನ್​. 40 ದಿನಗಳ ಶೂಟಿಂಗ್​ ನಿಗದಿ ಆಗಿತ್ತು. ಫೆಬ್ರವರಿಯಿಂದಲೇ ಕೆ.ಡಿ ಶೂಟಿಂಗ್ ಆರಂಭಿಸಿರುವ ಸಂಜಯ್ ದತ್ ಮೊದಲ ಶೆಡ್ಯೂಲ್​ ಮುಗಿಸಿದ್ದರು. ಎರಡನೇ ಹಂತದ ಶೂಟಿಂಗ್​ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ನಟಿ ವಿರುದ್ಧ ಅಶ್ಲೀಲ ಟ್ವೀಟ್: ಸಿನಿಮಾ ವಿಮರ್ಶಕ ಉಮೈರ್​ ಸಂಧುಗೆ ಸೆಲೀನಾ ಜೇಟ್ಲಿ ಕ್ಲಾಸ್‌

ಮಾಗಡಿ ರೋಡ್​ನಲ್ಲಿ ಕೆ.ಡಿ ಚಿತ್ರಕ್ಕಾಗಿ ಭಾರಿ ಸೆಟ್​ ಹಾಕಲಾಗಿತ್ತು. ಸಾಹಸ ನಿರ್ದೇಶಕ ರವಿವರ್ಮ ಫೈಟ್ ಕಂಪೋಸ್ ಮಾಡುತ್ತಿದ್ದರು. ನಟ ಧ್ರುವ ಸರ್ಜಾ ಹೊರತುಪಡಿಸಿ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಸೇರಿದಂತೆ ಇನ್ನೂ ಅನೇಕ ಕಲಾವಿದರು ಈ ಸನ್ನಿವೇಶದಲ್ಲಿ ಭಾಗಿಯಾಗಿದ್ದರು. ಗಾಯಗೊಂಡಿರುವ ಸಂಜಯ್ ದತ್ ನಿನ್ನೆಯೇ
ಮುಂಬೈಗೆ ತೆರಳಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೆ ಮೇ ತಿಂಗಳಿಂದ ಕೆ.ಡಿ ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್​ನ್ಯೂಸ್: ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ

ಇನ್ನೂ 63ರ ಸಂಜಯ್​ ದತ್​ ಮುಂದೆ ಹಾರರ್ ಕಾಮಿಡಿ ಚಿತ್ರ Virgin Treeನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಸಿಂಗ್, ಮೌನಿ ರಾಯ್ ಮತ್ತು ಪಲಕ್ ತಿವಾರಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಚಿತ್ರವನ್ನು ಸ್ವತಃ ಸಂಜಯ್​ ಅವರೇ ನಿರ್ಮಿಸಿದ್ದಾರೆ. ನಟ ಅರ್ಷದ್ ವಾರ್ಸಿ ಮತ್ತು ರವೀನಾ ಟಂಡನ್ ನಟನೆಯ, ಹೆಸರಿಡದ ಕಾಮಿಡಿ ಸಿನಿಮಾದಲ್ಲೂ ದತ್ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ ದಳಪತಿ ವಿಜಯ್​ ಅವರ 67ನೇ ಸಿನಿಮಾದಲ್ಲಿಯೂ ಸಂಜಯ್​ ದತ್ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.