ETV Bharat / entertainment

ಸಂದೀಪ್ ಉನ್ನಿಕೃಷ್ಣನ್ ಪಾತ್ರ ಮಾಡೋದು ಚಾಲೆಂಜಿಂಗ್​ ಆಗಿತ್ತು: ನಾಯಕ ಅಡಿವಿ ಶೇಷ್​ - ನಾಯಕ ಅಡಿವಿ ಶೇಷ್​ ಮಾತುಕತೆ

ಸಂದೀಪ್ ಉನ್ನಿಕೃಷ್ಣನ್ ಜೀವನಾಧರಿತ ಸಿನಿಮಾ ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಜೂನ್​ 3ರಂದು ತೆರೆಗೆ ಬರುತ್ತಿದೆ.

Adivi Sesh
ನಾಯಕ ಅಡಿವಿ ಶೇಷ್​
author img

By

Published : May 31, 2022, 8:56 PM IST

ಹುತಾತ್ಮ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾಗಿ ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ‌ ಬರ್ತಾ ಇದೆ. ತೆಲುಗು ನಟ ಅಡಿವಿ ಶೇಷ್ ಸಂದೀಪ್ ಉನ್ನಿಕೃಷ್ಣನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿರುವ‌ ತೆಲುಗು ನಟ ಅಡಿವಿ ಶೇಷ್​ ಈ ಚಿತ್ರದ ಹಲವಾರು ಇಂಟ್ರಸ್ಟ್ರಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾ ಮಾಡುವುದಕ್ಕೆ ಕಾರಣ ಏನು ಎಂದು ಕೇಳಿದರೆ, ಸಂದೀಪ್ ಉನ್ನಿಕೃಷ್ಣನ್ ಅವರೇ ಸಿನಿಮಾಕ್ಕೆ ಪ್ರೇರಣೆ ಎನ್ನುತ್ತಾರೆ. ಪುನೀತ್​ ಅವರಿಗೆ ಫ್ಯಾನ್ಸ್​ ಹೇಗಿದ್ದಾರೋ ಹಾಗೆ ನಾನು ಸಂದೀಪ್​ ಅವರ ಫ್ಯಾನ್. 31ನೇ ವರ್ಷಕ್ಕೆ ಉನ್ನಿಕೃಷ್ಣನ್ ಜೀವನದಲ್ಲಿ ಮಾಡಿರೋ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಅಡಿವಿ ಶೇಷ್​ ಹೇಳುತ್ತಾರೆ.

ನಾನು ಮಹೇಶ್ ಬಾಬು ಅವರ ಬಳಿ ಸಿನಿಮಾದ ಬಗ್ಗೆ ಹೇಳಿಕೊಂಡಾಗ ಅವರು ಮೊದಲಿಗೆ ಥ್ರಿಲ್ ಆದರು. ನಂತರ ಇದರ ನಿರ್ಮಾಣದ ಜವಾಬ್ದಾರಿಯನ್ನು ಒಪ್ಪಿಕೊಂಡರು. ಅವರು ನನ್ನ ಸಿನಿಮಾಗಳ ಪ್ರಾಮಾಣಿಕವಾಗಿ ವಿಮರ್ಶಕರು ಹಾಗಾಗಿ ಅವರ ಅಭಿಪ್ರಾಯ ನನಗೆ ತುಂಬಾ ಸಹಾಯ ಮಾಡುತ್ತದೆ.

ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರ ನಿರ್ವಹಣೆ ಮಾಡುದು ಸಾಹಸದ ಕಾರ್ಯವಾಗಿತ್ತು

ತಂದೆ ಒಪ್ಪಿಸುವುದು ಕಷ್ಟವಾಯಿತು: ಈ ಸಿನಿಮಾ ಮಾಡಬೇಕು ಅಂದಾಗ ನಾನು ಸಂದೀಪ್ ಉನ್ನಿಕೃಷ್ಣನ್ ತಂದೆ ಮತ್ತು ತಾಯಿ ಅವರ ಒಪ್ಪಿಗೆ ಪಡೆಯೋದಕ್ಕೆ ತುಂಬಾ ಕಷ್ಟ ಆಯ್ತು. ಮೊದಲಿಗೆ ನಾನು ಫೋನ್ ಮಾಡಿದಾಗ ಸಂದೀಪ್ ತಂದೆ ಫೋನ್ ಕಟ್ ಮಾಡಿ ಇಟ್ಟರು. ನಂತರ ನಾನು ಒಂದು ವಾರ ಬೆಂಗಳೂರಿಗೆ ಬಂದು ಸಂದೀಪ್ ತಂದೆಯನ್ನು ಭೇಟಿಯಾಗಿ ಸಿನಿಮಾ ಬಗ್ಗೆ ಹೇಳಿದ ನಂತರ ಅವರೂ ಒಪ್ಪಿಕೊಂಡರು.

ಪಾತ್ರ ನಿರ್ವಹಣೆ ತುಂಬಾ ಚಾಲೆಂಜಿಂಗ್ ಆಗಿತ್ತು: ಈ ಚಿತ್ರದ ಕಥೆ ಮಾಡಿದಾಗ ಸಂದೀಪ್ ಉನ್ನಿಕೃಷ್ಣನ್ ಪಾತ್ರ ಮಾಡೋದಿಕ್ಕೆ ನನಗೆ ಸಾಕಷ್ಟು ಚಾಲೆಂಜಿಂಗ್ ಆಗಿತ್ತು. ನಾನು ಲೆಫ್ಟ್ ಹ್ಯಾಂಡ್, ಸಂದೀಪ್ ಸಾರ್ ರೈಟ್ ಹ್ಯಾಂಡ್. ಸಂದೀಪ್ ಸಾರ್ ಬಾಲ್ಯ, ಕಾಲೇಜ್ ಮತ್ತು ಸೇನೆಗೆ ಸೇರುವ ವಯಸ್ಸು ಮಾಡೋದು ಕಷ್ಟ ಆಯಿತು. ತೂಕ ಕಡಿಮೆ ಮಾಡಿಕೊಂಡು ನಂತರ ಮತ್ತೆ ತೂಕ ಜಾಸ್ತಿ ಮಾಡಿಕೊಳ್ಳಬೇಕಿತ್ತು. ಅದು ನನಗೆ ಸವಾಲಿನ ಕೆಲಸವಾಗಿತ್ತು. ಮೇಜರ್ ಸಿನಿಮಾ ನನ್ನ ಕನಸಿನ ಯೋಜನೆಯಲ್ಲಿ ಒಂದು ಎಂದು ಹೇಳಿದರು.

ಈ ಸಿನಿಮಾವನ್ನು ಸಂದೀಪ್ ಉನ್ನಿಕೃಷ್ಣನ್ ತಂದೆ ಮತ್ತು ತಾಯಿಗೆ ತೋರಿಸುವ ವ್ಯವಸ್ಥೆ ಮಾಡುತ್ತೇವೆ. ಅವರ ಪ್ರತಿಕ್ರಿಯೆಗೆ ನಾನು ತುಂಬಾ ಕಾತರದಿಂದ ಕಾಯುತ್ತಿದ್ದೇನೆ. ಈಗಾಗಲೇ ಪ್ರಿನ್ಸ್ ಮಹೇಶ್ ಬಾಬು ಈ ಸಿನಿಮಾ ನೋಡಿ ಒಳ್ಳೆಯ ಅಭಿಪ್ರಾಯ ತಿಳಿಸಿದ್ದಾರೆ ಎಂದರು.

ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ: ಕನ್ನಡದ ಒಳ್ಳೆ ಕಥೆ ಬಂದರೆ ನಿಜವಾಗಿಯೂ ನಾನು ಕನ್ನಡದಲ್ಲಿ ಅಭಿನಯ ಮಾಡುತ್ತೇನೆ ಎಂದು ಹೇಳುವ ಮೂಲಕ ಅಡಿವಿ ಶೇಷ್​ ಕನ್ನಡದಲ್ಲಿ ಸಿನಿಮಾ ಮಾಡುವ ಬಗ್ಗೆ ಒಲವಿರುವುದನ್ನು 'ಈಟಿವಿ ಭಾರತ' ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಬ್ರಹ್ಮಾಸ್ತ್ರ ಭಾಗ 1: ಶಿವ' ಸಿನಿಮಾದ ಟ್ರೈಲರ್ ಜೂನ್ 15 ರಂದು ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.