ETV Bharat / entertainment

'ಜಿರಳೆ ಕೊಂದರೆ ಹೀರೋ, ಚಿಟ್ಟೆ ಕೊಂದರೆ ವಿಲನ್​': ನಟಿ ಸಮಂತಾ ಹೀಗಂದಿದ್ದೇಕೆ? - Samantha upcoming movies

Samantha Ruth Prabhu: ನಟಿ ಸಮಂತಾ ರುತ್​ ಪ್ರಭು ಅವರ ಇನ್​ಸ್ಟಾಗ್ರಾಮ್​ ಸ್ಟೋರಿ ನೆಟಗ್ಟಿಗರ ಗಮನ ಸೆಳೆದಿದೆ.

Samantha Ruth Prabhu
ಸಮಂತಾ ರುತ್​ ಪ್ರಭು
author img

By

Published : Aug 12, 2023, 4:30 PM IST

ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್​ ನಟಿ ಸಮಂತಾ ರುತ್​ ಪ್ರಭು ಸದ್ಯ ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿರುವುದು ನಿಮಗೆ ತಿಳಿದಿರುವ ವಿಚಾರ. ಮಯೋಸಿಟಿಸ್​ ವಿರುದ್ಧ ಹೋರಾಡುತ್ತಿರುವ ನಟಿ ಪ್ರಸ್ತುತ ಆರೋಗ್ಯ ಚೇತರಿಕೆಗೆ ಗಮನ ಕೊಟ್ಟಿದ್ದಾರೆ. ಇತ್ತೀಚೆಗೆ ನಟಿ ಯಾವ ಹೊಸ ಸಿನಿಮಾಗಳನ್ನೂ ಘೋಷಿಸಿಲ್ಲ. ಶೂಟಿಂಗ್​ಗಳಲ್ಲಿ ಭಾಗಿಯಾಗುತ್ತಿಲ್ಲ. ತಾವು ಒಪ್ಪಿಕೊಂಡಿದ್ದ ಎರಡು ಸಿನಿಮಾ ಕೆಲಸಗಳನ್ನು ಕೂಡ ಪೂರ್ಣಗೊಳಿಸಿದ್ದಾರೆ.

ಖಾಸಗಿ ಸಮಯ ಆನಂದಿಸುತ್ತಿರುವ ಸ್ಯಾಮ್: ಟಾಲಿವುಡ್​ ನಟ ವಿಜಯ್​ ದೇವರಕೊಂಡ ಜೊತೆಗಿನ ಕುಶಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಬಾಲಿವುಡ್​ ನಟ ವರುಣ್​ ಧವನ್​ ಜೊತೆಗಿನ ಸಿಟಾಡೆಲ್​ ಸರಣಿಯ ತಮ್ಮ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದು ರಿಲ್ಯಾಕ್ಸ್​ ಮೂಡ್​ನಲ್ಲಿರುವ ಸ್ಯಾಮ್​ ಸದ್ಯ ಖಾಸಗಿ ಸಮಯವನ್ನು ಆನಂದಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿದೇಶ ಪ್ರವಾಸ, ಮೂವಿ ಟೈಮ್​​, ಸ್ನೇಹಿತರೊಡನೆ ಮೋಜು ಮಸ್ತಿ ಎಂದು ಸಮಯ ಕಳೆಯುತ್ತಿದ್ದಾರೆ. ದಿನನಿತ್ಯ ಫೋಟೋ, ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹಾಗಾಗಿ ತಮ್ಮ ಮೆಚ್ಚಿನ ನಟಿಗೆ ಏನಾಯ್ತೋ, ಏನೋ? ಅವರ ಆರೋಗ್ಯ ಹೇಗಿದೆಯೋ? ಎಂಬ ಚಿಂತೆಯಲ್ಲಿ ಅಭಿಮಾನಿಗಳಿಲ್ಲ.

Samantha Ruth Prabhu
ಸಮಂತಾ ಇನ್​ಸ್ಟಾಗ್ರಾಮ್​ ಸ್ಟೋರಿ

ಸಮಂತಾ ಇನ್​ಸ್ಟಾಗ್ರಾಮ್​ ಸ್ಟೋರಿ: ನಟಿ ಸಮಂತಾ ರುತ್​ ಪ್ರಭು ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಎಂಬುದು ನಿಮಗೆ ತಿಳಿದೇ ಇದೆ. ಸಾಂಧರ್ಭಿಕವಾಗಿ ಫಿಲಾಸಫಿ ಕೋಟ್ಸ್ ಇಮೇಜ್​ಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ''ಒಂದು ವೇಳೆ ಜಿರಳೆ ಕೊಂದರೆ ನೀನು ಹೀರೋ, ಅದೇ ಚಿಟ್ಟೆ ಕೊಂದರೆ ನೀನು ಕೆಟ್ಟ ವ್ಯಕ್ತಿ, ನೈತಿಕತೆ ಸುಂದರ ಮಾನದಂಡಗಳನ್ನು ಹೊಂದಿದೆ'' ಎಂದು ಬರೆದಿರುವ ಪೋಸ್ಟ್ ಇದು. ನಟಿ ಏಕೆ ಈ ರೀತಿಯ ಪೋಸ್ಟ್ ಶೇರ್ ಮಾಡಿದ್ದಾರೆ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಏನಾಯ್ತು, ಎಲ್ಲವೂ ಸರಿಯಾಗಿದೆಯೇ? ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ನಟಿಯ ಪೋಸ್ಟ್​ಗೆ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: Virushka: ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಸುಂದರ ಜೋಡಿ ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ

ನಟಿ ಸಮಂತಾ ರುತ್ ಮತ್ತು ಸೌತ್​ ಸ್ಟಾರ್ ನಟ ವಿಜಯ್​ ದೇವರಕೊಂಡ ಮುಖ್ಯಭೂಮಿಕೆಯ ಕುಶಿ ಬಿಡುಗಡೆ ಹೊಸ್ತಿಲಲ್ಲಿದೆ. ಶಿವನಿರ್ವಾಣ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾ ಕಂಪ್ಲೀಟ್​ ಲವ್​ಸ್ಟೋರಿ ಕಥೆಯಾಗಿದ್ದು, ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರವಾಗಿದೆ. ಚಿತ್ರದ ಟ್ರೇಲರ್​, ಹಾಡುಗಳು ಪ್ರೇಕ್ಷಕರ ಮನ ಸೆಳೆದಿವೆ. ಸೋಷಿಯಲ್​ ಮೀಡಿಯಾದಲ್ಲಿ ಕುಶಿ ಟ್ರೆಂಡಿಂಗ್​ನಲ್ಲಿದ್ದು, ಸಿನಿಮಾ ವೀಕ್ಷಣೆಗೆ ಸಿನಿಪ್ರಿಯರು ಕಾತರರಾಗಿದ್ದಾರೆ. ಸೆಪ್ಟೆಂಬರ್​ 1 ರಂದು ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸುತ್ತಿವೆ ಬ್ಲಾಕ್​ಬಸ್ಟರ್​ ಸೀಕ್ವೆಲ್​ಗಳು: OMG 2 vs Gadar 2 ಕಲೆಕ್ಷನ್ ಹೀಗಿದೆ​ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.