ETV Bharat / entertainment

ಮತ್ತೆ ಒಂದಾಗುತ್ತಾ ಸ್ಟಾರ್​ ಜೋಡಿ ನಾಗಚೈತನ್ಯ-ಸಮಂತಾ!? - ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ ನಾಗಚೈತನ್ಯ-ಸಮಂತಾ?

ವಿಚ್ಛೇದನ ನಂತರ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಭೇಟಿಯಾಗಿದ್ದಾರೆ ಎಂಬ ಮಾತುಗಳ ನಡುವೆಯೇ, ಇಬ್ಬರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಲು ನಂದಿನಿರೆಡ್ಡಿ ಬ್ರಹ್ಮಾಂಡ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ, ಸ್ಟಾರ್​ ಜೋಡಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ..

samantha ruth prabhu and naga chaitanya
ಮತ್ತೆ ಒಂದಾಗುತ್ತಾ ಸ್ಟಾರ್​ ಜೋಡಿ ನಾಗಚೈತನ್ಯ-ಸಮಂತಾ
author img

By

Published : Apr 4, 2022, 6:27 PM IST

ಹೈದ್ರಾಬಾದ್​(ತೆಲಂಗಾಣ) : ಟಾಲಿವುಡ್​ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ವಿಚ್ಛೇದನವನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈ ನಡುವೆ ಈ ಸ್ಟಾರ್​ ಜೋಡಿ ಮತ್ತೆ ಒಂದಾಗುತ್ತಾರಾ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ ತೆರೆ ಮೇಲೆ ಒಟ್ಟಿಗೆ ನೋಡುವ ಅವಕಾಶವಂತೂ ಅಭಿಮಾನಿಗಳಿಗೆ ಸಿಗಲಿದೆ.

ನಿರ್ದೇಶಕಿ ನಂದಿನಿರೆಡ್ಡಿ ಅವರು ಸಮಂತಾ ಮತ್ತು ನಾಗಚೈತನ್ಯ ಇಬ್ಬರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರಂತೆ. ನಂದಿನಿ ರೆಡ್ಡಿ ಸಿದ್ಧಪಡಿಸಿದ ಕಥೆಯನ್ನು ನಾಗಚೈತನ್ಯ ಇಷ್ಟಪಟ್ಟಿದ್ದಾರಂತೆ. ಜತೆಗೆ ಸಿನಿಮಾದ ನಾಯಕಿಯಾಗಿ ಸಮಂತಾ ಅವರನ್ನು ಆಯ್ಕೆ ಮಾಡಲು ನಿರ್ದೇಶಕಿ ಇಚ್ಛಿಸಿದ್ದಾರೆ.

ವಿಚ್ಛೇದನ ನಂತರ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಭೇಟಿಯಾಗಿದ್ದಾರೆ ಎಂಬ ಮಾತುಗಳ ನಡುವೆಯೇ, ಇಬ್ಬರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡಲು ನಂದಿನಿರೆಡ್ಡಿ ಬ್ರಹ್ಮಾಂಡ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಹೀಗಾಗಿ, ಸ್ಟಾರ್​ ಜೋಡಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

'ಏ ಮಾಯ ಚೇಸಾವೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಗಚೈತನ್ಯ ಹಾಗೂ ಸಮಂತಾ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಆಟೋ ನಗರ’, ‘ಮನಂ’, ‘ಮಜಿಲಿ’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ವಿಚ್ಛೇದನಕ್ಕೂ ಮುನ್ನ ಸಮಂತಾ ನಾಯಕಿಯಾಗಿ ನಟಿಸಿದ್ದ ‘ಓ ಬೇಬಿ’ ಚಿತ್ರದಲ್ಲಿ ನಾಗಚೈತನ್ಯ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ: ಪಬ್​​ ದಾಳಿ ವೇಳೆ ಸಿಕ್ಕಿಬಿದ್ದ ಟಾಲಿವುಡ್ ಮೆಗಾ ಕುಟುಂಬದ ಕುಡಿ; ಪುತ್ರಿಯ ಪಾತ್ರದ ಬಗ್ಗೆ ನಾಗಬಾಬು ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.