ETV Bharat / entertainment

ಸಲ್ಲು ಫ್ಯಾನ್ಸ್​ಗೆ ಗುಡ್​ ನ್ಯೂಸ್​: ನಿರ್ಮಾಣಗೊಳ್ಳಲಿದೆ ಕಿಕ್​ 2 - ಸಕ್ಸಸ್​ ನಿರೀಕ್ಷೆಯಲ್ಲಿ ಸೂಪರ್​​ಸ್ಟಾರ್​ - Kick

ಕಿಕ್​ ಪಾರ್ಟ್ 1 ಬಿಡುಗಡೆ ಆಗಿ 9 ವರ್ಷಗಳಾದ ಬಳಿಕ ಕಿಕ್​ 2 ಸಿನಿಮಾಗೆ ಸಿದ್ಧತೆ ನಡೆದಿದೆ.

salman khan Kick 2
ಸಲ್ಮಾನ್​ ಖಾನ್​ ಕಿಕ್​ 2
author img

By

Published : Jul 14, 2023, 4:03 PM IST

ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಟೈಗರ್​ 3. ಅವರು ಕೊನೆಯದಾಗಿ ಕಾಣಿಸಿಕೊಂಡ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ದೊಡ್ಡ ಮಟ್ಟಿನ ಯಶಸ್ಸು ಕಾಣಲಿಲ್ಲ. ಹಾಗಾಗಿ ತಮ್ಮ ಮುಂದಿನ ಸ್ಪೈ ಯೂನಿವರ್ಸ್ ಸಿನಿಮಾ 'ಟೈಗರ್ 3' ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕಿಕ್​ 2: ಇದೇ ಸಾಲಿನ ದೀಪಾವಳಿ ಸಂದರ್ಭದಲ್ಲಿ ಟೈಗರ್ 3 ಸಿನಿಮಾ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಿದ್ಧತೆ ನಡೆಸುತ್ತಿದೆ. ಟೈಗರ್ 3 ಚಿತ್ರದ ಮೇಲೆ ಸಲ್ಮಾನ್ ಖಾನ್ ಮಾತ್ರವಲ್ಲದೇ ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಭಾಯಿಜಾನ್ ಅಭಿಮಾನಿಗಳಿಗೊಂದು ಶುಭ ಸುದ್ದಿ ಸಿಕ್ಕಿದೆ. ಹೌದು, 2014 ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅವರ ಆ್ಯಕ್ಷನ್ ಸಿನಿಮಾ 'ಕಿಕ್‌'ನ ಎರಡನೇ ಭಾಗ ಮೂಡಿ ಬರಲಿದ್ದು, ಕೆಲಸ ಪ್ರಾರಂಭವಾಗಿದೆ. ಕಿಕ್ ನಿರ್ದೇಶಕ ಸಾಜಿದ್ ನಾಡಿಯಾಡ್ವಾಲಾ ಕಿಕ್​ 2 ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ: ಕಿಕ್​ ಪಾರ್ಟ್ 1 ತೆರೆಕಂಡು ಒಂಬತ್ತು ವರ್ಷಗಳ ನಂತರ ಕಿಕ್ 2ನ ಕೆಲಸಗಳು ಪ್ರಾರಂಭವಾಗಿದೆ. ವರದಿಗಳ ಪ್ರಕಾರ ಸಂದರ್ಶನವೊಂದರಲ್ಲಿ ನಿರ್ಮಾಪಕ, ನಿರ್ದೇಶಕ ಸಾಜಿದ್ ನಾಡಿಯಾಡ್ವಾಲಾ ಅವರು ಕಿಕ್ 2 ಸಿನಿಮಾ ಅಪ್​ಡೇಟ್ಸ್ ಅನ್ನು ಹಂಚಿಕೊಂಡಿದ್ದಾರೆ. 'ಕಿಕ್ 2ರ ಕೆಲಸ ನಡೆಯುತ್ತಿದೆ, ಚಿತ್ರದ ಸ್ಕ್ರಿಪ್ಟ್ ಕೆಲಸ ಬಹುತೇಕ ಪೂರ್ಣಗೊಂಡಿದೆ. ಆದರೆ, ಫೈನಲ್​​ ಕಾಪಿಗೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಕಿಕ್ 2 ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಉದ್ದೇಶದೊಂದಿಗೆ ಕೆಲಸ ನಡೆಯುತ್ತಿದ್ದು, ಬಿಡುಗಡೆಗೆ ಸೂಕ್ತ ಸಮಯ ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ಕಾಂತಾರ ನಟಿ.. ಅಭಿಮಾನಿಗಳ ಮನಸೂರೆಗೊಂಡ ಶಿವನ ಜೋಡಿ ಲೀಲಾ ಲುಕ್​​

ಸೂಕ್ತ ಸಮಯ ಒದಗಿ ಬಂದ ನಂತರ 'ಕಿಕ್' ನಿರ್ಮಾಣ ಮಾಡುತ್ತೇವೆ. ಶೂಟಿಂಗ್​ಗೂ ತಯಾರಿ ನಡೆಯುತ್ತಿದೆ. ಜೊತೆಗೆ ಸಲ್ಮಾನ್ ಅವರಿಗೂ ವಿಷಯ ತಲುಪಿದೆ. ಪ್ರೇಕ್ಷಕರ ಉತ್ಸಾಹ ನಮಗೆ ಅಗತ್ಯ, ನಂತರ ನಾವು ಕಿಕ್ 2ನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಮೊಮ್ಮಗಳಿಗೆ ಸ್ಪೆಷಲ್​ ರೂಂ... ಫಾರೆಸ್ಟ್ ಥೀಮ್​ನೊಂದಿಗೆ ರೆಡಿಯಾಯ್ತು ರಾಮ್ ಚರಣ್ ಪುತ್ರಿಯ ಕೊಠಡಿ!

ಸದ್ಯ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಅವರು ಮನೀಶ್ ಶರ್ಮಾ ನಿರ್ದೇಶನದ 'ಟೈಗರ್ 3' ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನವೆಂಬರ್​ 10 ರಂದು ಸಿನಿಮಾ ತೆರೆ ಕಾಣಲಿದೆ. ಜವಾನ್​ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿರುವ ಶಾರುಖ್ ಖಾನ್ ಕೂಡ ಈ ಟೈಗರ್​ 3 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮತ್ತೊಮ್ಮೆ ಕತ್ರಿನಾ ಕೈಫ್ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್​ ಪಾರ್ಟ್ 1 ಮತ್ತು 2ರಲ್ಲಿ ಕೂಡ ಸಲ್ಮಾನ್​ ಖಾನ್ - ಕತ್ರಿನಾ ಕೈಫ್ ಸ್ಕ್ರೀನ್​ ಶೇರ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.