ETV Bharat / entertainment

57ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್​ ಬ್ಯಾಚುಲರ್​ ಸಲ್ಮಾನ್​ ಖಾನ್​ - ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್

57ರ ವಸಂತಕ್ಕೆ ಕಾಲಿರಿಸಿದ ಬಜರಂಗಿ ಭಾಯಿಜಾನ್ ಸ್ಟಾರ್​ ಸಲ್ಮಾನ್​ - ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಜನ್ಮದಿನ ಆಚರಿಸಿಕೊಂಡ ಸಲ್ಲು - ಶಾರುಖ್​ ಖಾನ್​ ಸೇರಿದಂತೆ ಚಿತ್ರರಂಗದ ಗಣ್ಯರು ಪಾರ್ಟಿಯಲ್ಲಿ ಭಾಗಿ.

Salman Khan Celebrated his 57th Birthday
ಸಲ್ಮಾನ್​ ಖಾನ್​
author img

By

Published : Dec 27, 2022, 11:29 AM IST

ಬಾಲಿವುಡ್​ನ ಖಾನ್​ಗಳಲ್ಲಿ ಖ್ಯಾತರಾಗಿರುವ ಸಲ್ಮಾನ್​ ಖಾನ್​ಗೆ ಇಂದು 57ರ ವಸಂತ. ಹಿಂದಿ ಚಿತ್ರರಂಗದಲ್ಲಿ ನಟರಾಗಿ, ಚಿತ್ರ ನಿರ್ಮಾಪಕ ಹಾಗೂ ಪ್ರಚಾರಕರಾಗಿ ಗುರುತಿಸಿಕೊಂಡಿರುವ ಇವರಿಗೆ ಭರ್ಜರಿ ಫ್ಯಾನ್​ಗಳಿದ್ದಾರೆ. ಹಿಂದಿ ಬಿಗ್​ ಬಾಸ್​ ನಿರೂಪಕರಾಗಿಯೂ ಮೆಚ್ಚುಗೆ ಪಡೆದಿದ್ದಾರೆ.

57 ನೇ ಹುಟ್ಟುಹಬ್ಬವನ್ನು ಸಹೋದರಿ ಅರ್ಪಿತಾ ಖಾನ್ ವಿಜೃಭಣೆಯಿಂದ ಸೆಲಬ್ರೇಟ್​ ಮಾಡಿದ್ದಾರೆ. ಅರ್ಪಿತಾ ಖಾನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಶಾರುಖ್​ ಖಾನ್​ ಬಂದು ಶುಭಹಾರೈಸಿದ್ದಾರೆ. ಅಲ್ಲದೇ ಭಾರತೀಯ ಸಿನಿಮಾ ರಂಗದ ವಿವಿಧ ಕಲಾವಿದರು ಮತ್ತು ತಂತ್ರಜ್ಞರು ಶುಭ ಹಾರೈಸಿದ್ದಾರೆ.

ಕಾರ್ಯಕ್ರಮದಲ್ಲಿ ಶಾರುಖ್​ ಅಲ್ಲದೇ ಜಾಹ್ನವಿ ಕಪೂರ್, ಕಾರ್ತಿಕ್ ಆರ್ಯನ್, ಸೋನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ, ಟಬು, ಪೂಜಾ ಹೆಗ್ಡೆ, ರಿತೇಶ್ ಮತ್ತು ಜೆನಿಲಿಯಾ ದೇಶಮುಖ್, ಯುಲಿಯಾ ವಂತೂರ್ ಮತ್ತು ಅನೇಕರು ಭಾಗವಹಿಸಿದ್ದರು.

Salman Khan Celebrated his 57th Birthday
ಸಲ್ಮಾನ್​ ಖಾನ್​ ಬರ್ತ್​ಡೇ ಪಾರ್ಟಿಗೆ ಬಂದ ಯುಲಿಯಾ ವಂತೂರ್ ಮತ್ತು ಪೂಜಾ ಹೆಗ್ಡೆ

ಸಲ್ಲು ಪ್ರಮುಖ ಸಿನಿಮಾಗಳು: 1989ರಲ್ಲಿ ಬಂದ ಮೈನೆ ಪ್ಯಾರ್ ಕಿಯಾ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಹಮ್ ಆಪ್ಕೆ ಹೈ ಕೌನ್ (1994), ಕರಣ್ ಅರ್ಜುನ್ (1995), ಬಿವಿ ನಂ 1 (1999), ಮತ್ತು ಹಮ್ ಸಾಥ್-ಸಾಥ್ ಹೈ (1999) ನಂತಹ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ನಟ ದಬಾಂಗ್ (2010), ರೆಡಿ (2011), ಬಾಡಿಗಾರ್ಡ್ (2011), ಏಕ್ ಥಾ ಟೈಗರ್ (2012), ದಬಾಂಗ್ 2 (2012), ಕಿಕ್ (2014), ಟೈಗರ್ ಜಿಂದಾ ಹೈ (2017), ಬಜರಂಗಿ ಭಾಯಿಜಾನ್ (2015), ಸುಲ್ತಾನ್ (2016), ಭಾರತ್ ಮತ್ತು ದಬಾಂಗ್ 3 (2019) ಮತ್ತು ಆಂಟಿಮ್: ದಿ ಫೈನಲ್ ಟ್ರುತ್ (2021).

ಸಲ್ಮಾನ್ ಫರ್ಹಾದ್ ಸಾಮ್ಜಿ ನಿರ್ದೇಶನದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೂಟಿಂಗ್ ಇತ್ತೀಚೆಗಷ್ಟೇ ಮುಗಿಸಿದ್ದಾರೆ. ಪೂಜಾ ಹೆಗ್ಡೆ ಮತ್ತು ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶೆಹನಾಜ್ ಗಿಲ್, ಪಾಲಕ್ ತಿವಾರಿ ಮತ್ತು ವಿಜೇಂದರ್ ಸಿಂಗ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ 2023ರ ಈದ್​ಗೆ ಬಿಡುಗಡೆಯಾಗಲಿದೆ.

ಸೋನಾಕ್ಷಿ ಸಿನ್ಹಾ, ಸುನೀಲ್ ಶೆಟ್ಟಿ

ಸಲ್ಮಾನ್ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ ಟೈಗರ್ 3 ಈ ಹಿಂದೆ ಏಪ್ರಿಲ್ 23, 2023 ರಂದು ಚಿತ್ರಮಂದಿರಗಳಲ್ಲಿ ಬರಲು ಯೋಜಿಸಲಾಗಿತ್ತು, ಈಗ ಮುಂದಿನ ವರ್ಷ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಕತ್ರಿನಾ ಕೈಫ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಯಾರೊಂದಿಗೆ ಡೇಟಿಂಗ್​ನಲ್ಲಿದ್ದಾರೆ ಸಲ್ಲು:​ ಸಲ್ಮಾನ್ ಹಲವು ವರ್ಷಗಳಿಂದ ಹಲವಾರು ನಟಿಯರೊಂದಿಗೆ ಡೇಟಿಂಗ್​ ಮಾಡಿದ್ದಾರೆ. ಅವರು 1991 ರಿಂದ 1999 ರವರೆಗೆ ಮಾಜಿ ನಟ ಸೋಮಿ ಅಲಿ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಸಲ್ಮಾನ್ ಮಾಡೆಲ್ ಸಂಗೀತಾ ಬಿಜ್ಲಾನಿ, ನಟರಾದ ಐಶ್ವರ್ಯಾ ರೈ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಡೇಟಿಂಗ್​ ಮಾಡಿದ್ದು, ಮದುವೆ ಆಗಲಿದ್ದಾರೆ ಎಂಬುವ ವರೆಗೂ ಸುದ್ದಿಯಾಗಿತ್ತು.

ಅವರು ಪ್ರಸ್ತುತ ಮಾಡೆಲ್ ಯುಲಿಯಾ ವಂತೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಅಲ್ಲದೇ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಶೋಟಿಂಗ್​ ಸಮಯದಲ್ಲಿ ಪೂಜಾ ಹೆಗ್ಡೆ ಜೊತೆಯೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಜನ್ಮದಿನದ ಕಾರ್ಯಕ್ರಮದಲ್ಲಿ ಯುಲಿಯಾ ವಂತೂರ್ ಮತ್ತು ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.

ತಾಯಿ ಬೇಡ ಮಕ್ಕಳು ಸಾಕು: 2019 ರ ಒಂದು ಸಂದರ್ಶನದಲ್ಲಿ ವಿವಾಹದ ಬಗ್ಗೆ ಕೇಳಿದಾಗ ಮಾತನಾಡಿದ ಸಲ್ಮಾನ್, ನಾನು ಮಕ್ಕಳನ್ನು ಪ್ರೀತಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ನನಗೆ ಮಕ್ಕಳು ಬೇಕು, ಆದರೆ ಮಕ್ಕಳೊಂದಿಗೆ ತಾಯಿ ಬರುತ್ತಾರೆ. ನನಗೆ ತಾಯಿ ಬೇಡ ಎಂದಿದ್ದರು.

ಇದನ್ನೂ ಓದಿ: Look Back 2022.. ಈ ವರ್ಷ ಕಂಕಣಭಾಗ್ಯ ಕೂಡಿ ಬಂದ ಕನ್ನಡದ ಸೆಲೆಬ್ರಿಟಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.