ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮೊದಲ ಬಾರಿಗೆ ಜೊತೆಯಾಗಿರುವ 'ಸಲಾರ್' ಸಿನಿಮಾ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಇದೀಗ ಚಿತ್ರದ ಟ್ರೇಲರ್ ರಿಲೀಸ್ಗಾಗಿ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
-
PRABHAS: ‘SALAAR’ NO POSTPONEMENT… TRAILER ON 1 DEC… #Salaar arrives in *cinemas* on 22 Dec 2023 #Christmas2023… Get ready for #SalaarTrailer.#Prabhas #PrithvirajSukumaran #PrashanthNeel #VijayKiragandur pic.twitter.com/L6KhQw8Tzk
— taran adarsh (@taran_adarsh) November 9, 2023 " class="align-text-top noRightClick twitterSection" data="
">PRABHAS: ‘SALAAR’ NO POSTPONEMENT… TRAILER ON 1 DEC… #Salaar arrives in *cinemas* on 22 Dec 2023 #Christmas2023… Get ready for #SalaarTrailer.#Prabhas #PrithvirajSukumaran #PrashanthNeel #VijayKiragandur pic.twitter.com/L6KhQw8Tzk
— taran adarsh (@taran_adarsh) November 9, 2023PRABHAS: ‘SALAAR’ NO POSTPONEMENT… TRAILER ON 1 DEC… #Salaar arrives in *cinemas* on 22 Dec 2023 #Christmas2023… Get ready for #SalaarTrailer.#Prabhas #PrithvirajSukumaran #PrashanthNeel #VijayKiragandur pic.twitter.com/L6KhQw8Tzk
— taran adarsh (@taran_adarsh) November 9, 2023
'ಸಲಾರ್' ತೆಲುಗು ಹಾಗೂ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆದರೆ, ಈಗಾಗಲೇ ರಿಲೀಸ್ ಹಾಗೂ ಟ್ರೇಲರ್ ಡೇಟ್ ಮುಂದೂಡಿಕೆ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇದೀಗ ಚಿತ್ರದ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಫ್ಯಾನ್ಸ್ಗೆ ಸಂತಸ ನೀಡಿದೆ.
ಇತ್ತೀಚೆಗೆ ಸಿನಿಮಾದ ಟ್ರೇಲರ್ ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ಇಂಡಸ್ಟ್ರಿ ಬಾಕ್ಸ್ ಆಫೀಸ್ ವಿಶ್ಲೇಷಕ ರಮೇಶ್ ಬಾಲಾ ಎಕ್ಸ್ನಲ್ಲಿ ತಿಳಿಸಿದ್ದರು. ಇದೀಗ ಬಾಲಿವುಡ್ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಡಿಸೆಂಬರ್ 1ರಂದು ಟ್ರೇಲರ್ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎಕ್ಸ್ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ, ಟ್ರೇಲರ್ ರಿಲೀಸ್ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಇದನ್ನೂ ಓದಿ: ಮೊಣಕಾಲು ಶಸ್ತ್ರಚಿಕಿತ್ಸೆ: ಇಟಲಿಯಿಂದ ಹೈದರಾಬಾದ್ಗೆ ಮರಳಿದ ಸಲಾರ್ ನಟ ಪ್ರಭಾಸ್
ಟ್ರೇಲರ್ ಬಗ್ಗೆ ಸಿನಿ ವಿಮರ್ಶಕರು ನೀಡಿರುವ ಅಪ್ಡೇಟ್ಗಳಿಗೆ ಚಿತ್ರದ ಆಪ್ತ ವಲಯಗಳು ಸಹ ಒಪ್ಪಿಗೆ ಸೂಚಿಸಿದೆ. ಇಲ್ಲಿಯವರೆಗೆ, ಚಿತ್ರದ ಪೋಸ್ಟರ್ ಮತ್ತು ಸಣ್ಣ ಗ್ಲಿಂಪ್ಸ್ (ಟೀಸರ್) ಮಾತ್ರ ಬಿಡುಗಡೆಯಾಗಿದೆ. ಇನ್ನೂ ಮೂರು ವಾರದಲ್ಲಿ 'ಸಲಾರ್' ಟ್ರೇಲರ್ ಬಿಡುಗಡೆಯಾಗಲಿದ್ದು, ಡಾರ್ಲಿಂಗ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಪ್ರಭಾಸ್ ಪವರ್ಫುಲ್ ಆ್ಯಕ್ಷನ್ ಹೇಗಿರಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರಶಾಂತ್ ನೀಲ್ ಆ್ಯಕ್ಷನ್ ಹೇಳುತ್ತಿರುವ ಈ ಸಿನಿಮಾದಲ್ಲಿ ನಟ ಪ್ರಭಾಸ್ಗೆ ಜೋಡಿಯಾಗಿ, ಶೃತಿ ಹಾಸನ್ ಅಭಿನಯಿಸುತ್ತಿದ್ದು, ಉಳಿದಂತೆ ಜಗಪತಿ ಬಾಬು, ಈಶ್ವರಿ ರಾವ್, ಶ್ರಿಯಾ ರೆಡ್ಡಿ ಹಾಗೂ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೊಂಬಾಳೆ ನಿರ್ಮಾಣ ಸಂಸ್ಥೆಯ ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಜಿಎಫ್ ಚಿತ್ರದ ತಾಂತ್ರಿಕ ವರ್ಗವೇ ಈ ಸಿನಿಮಾಗೂ ಕೆಲಸ ಮಾಡಿದೆ. ಎರಡು ಭಾಗಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಭಾರತದ ಭಾಷೆಗಳು ಮಾತ್ರವಲ್ಲದೇ ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2, ಸಲಾರ್ ಶೂಟಿಂಗ್: ರಶ್ಮಿಕಾ ಸಿನಿಮಾ ಸಾಂಗ್ನಲ್ಲಿ ಸಾವಿರ ಡ್ಯಾನ್ಸರ್ಸ್!!