ETV Bharat / entertainment

ಮೊದಲ ದಿನವೇ 175 ಕೋಟಿ ಗಳಿಸಿದ 'ಸಲಾರ್​'; ಬಾಕ್ಸ್ ಆಫೀಸ್ ದಾಖಲೆ ಉಡೀಸ್​! - prabhas

Salaar Collection: ಬಹುನಿರೀಕ್ಷಿತ ಸಲಾರ್​ ಸಿನಿಮಾ ತನ್ನ ಮೊದಲ ದಿನ ಬರೋಬ್ಬರಿ 175 ಕೊಟಿ ರೂ. ಕಲೆಕ್ಷನ್​ ಮಾಡಿದೆ.

Salaar Collection
ಸಲಾರ್​ ಕಲೆಕ್ಷನ್​
author img

By ETV Bharat Karnataka Team

Published : Dec 23, 2023, 9:39 AM IST

Updated : Dec 23, 2023, 11:53 AM IST

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸ್ಟಾರ್ ಡೈರೆಕ್ಟರ್​ ಪ್ರಶಾಂತ್​ ನೀಲ್​​​ ಆ್ಯಕ್ಷನ್​ ಕಟ್​ ಹೇಳಿರುವ 'ಸಲಾರ್​' ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ.

ತೆರೆಕಂಡ ಮೊದಲ ದಿನವೇ ಬರೋಬ್ಬರಿ 175 ಕೊಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್​ ದಾಖಲೆಗಳನ್ನು ಪುಡಿಗಟ್ಟಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರ 2023ರಲ್ಲಿ ಭರ್ಜರಿ ಓಪನಿಂಗ್​ ಪಡೆದ ಸಿನಿಮಾ ಆಗಿ ಹೊರಹೊಮ್ಮಿದೆ. ಈ ಮೂಲಕ ಪ್ರಶಾಂತ್​ ನೀಲ್, ಪ್ರಭಾಸ್​​, ಹೊಂಬಾಳೆ ಫಿಲ್ಮ್ಸ್​​ನ ಜನಪ್ರಿಯತೆ ದ್ವಿಗುಣಗೊಂಡಿದೆ.

ಬಹುನಿರೀಕ್ಷಿತ ಸಿನಿಮಾದ ಕಲೆಕ್ಷನ್ ಬೇಟೆ ಜೋರಾಗೇ ನಡೆಯುತ್ತಿದೆ. ಕೆಜಿಎಫ್​​ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಜೊತೆ ಪ್ಯಾನ್​ ಇಂಡಿಯಾ ಸ್ಟಾರ್ ಕೈಜೋಡಿಸಿದ ಹಿನ್ನೆಲೆ 'ಸಲಾರ್​' ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಕೆಜಿಎಫ್ ನಂತರ ಭಾರಿ ನಿರೀಕ್ಷೆಗಳೊಂದಿಗೆ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆಕಂಡ ಈ ಸಿನಿಮಾ ಭಾರತದಲ್ಲೇ ಸರಿಸುಮಾರು 100 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ಹಲವು ದಿನಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ ಸಲಾರ್​​​ ಶುಕ್ರವಾರ ಜಗತ್ತಿನ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದರು. ಗುರುವಾರ ಮಧ್ಯರಾತ್ರಿ 1 ಗಂಟೆಯಿಂದಲೇ ಥಿಯೇಟರ್​ಗಳತ್ತ ಸೆಲೆಬ್ರೇಶನ್​ ಶುರುವಾಗಿದ್ದವು. ನಿನ್ನೆಯಿಡೀ ಸೋಷಿಯಲ್​ ಮೀಡಿಯಾಗಳಲ್ಲಿ ಸಲಾರ್​​ ಸೆಲೆಬ್ರೇಶನ್​ನದ್ದೇ ಹವಾ. ಇದೀಗ ಸಿನಿಮಾದ ಗಳಿಕೆ ಬಹಿರಂಗಗೊಂಡು ಸಿನಿಪ್ರಿಯರು ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ. ಸಲಾರ್​' ಶುಕ್ರವಾರ ವಿಶ್ವಾದ್ಯಂತ 175 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಈ ವರ್ಷ ಸಿನಿಮಾನೇ ಮಾಡದ ಕನ್ನಡದ ಸ್ಟಾರ್​ ನಟರು ಇವರೇ ನೋಡಿ..

ವಾರಾಂತ್ಯದಲ್ಲಿ ಸಲಾರ್​ ಸಿನಿಮಾದ ಕಲೆಕ್ಷನ್​​​​​ನಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ. ಅಲ್ಲದೇ, ಪ್ರಭಾಸ್​​ ವೃತ್ತಿಜೀವನದಲ್ಲೇ ಅತಿ ಹೆಚ್ಚು ಸಂಗ್ರಹ ಮಾಡಿದ ಸಿನಿಮಾವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.

ಇದನ್ನೂ ಓದಿ: ಪಠಾಣ್​, ಜವಾನ್​​, ಲಿಯೋ.. 2023ರ ಹಿಟ್​ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್​'!

ಹೊಂಬಾಳೆ ಫಿಲ್ಮ್ಸ್​​ ಬಿಗ್​ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಸಲಾರ್​​ಗೂ ಒಂದು ದಿನ ಮುನ್ನ ಅಂದರೆ ಡಿ. 21 ರಂದು ಬಾಲಿವುಡ್ ಬಾದ್‌ಶಾ ಶಾರುಖ್​ ಖಾನ್​​ ಅಭಿನಯದ ಡಂಕಿ ಬಿಡುಗಡೆಯಾಗಿದೆ. ಈ ಎರಡು ಚಿತ್ರಗಳು ಉತ್ತಮ ಕಲೆಕ್ಷನ್​ ಮಾಡುತ್ತಿದ್ದು, ಸಲಾರ್​​ ದಾಖಲೆಗಳನ್ನೆಲ್ಲಾ ಪುಡಿಗಟ್ಟುವ ನಿರೀಕ್ಷೆ ಇದೆ.

Last Updated : Dec 23, 2023, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.