ಅಪಾರ ಸಂಖ್ಯೆಯ ಅಭಿಮಾನಿಗಳಿಂದು 'ಸಲಾರ್' ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅನೇಕ ಚಿತ್ರಮಂದಿರಗಳ ಬಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. 2023ರ ಸೂಪರ್ ಹಿಟ್ ಸಿನಿಮಾಗಳ ದಾಖಲೆ ಪುಡಿಗಟ್ಟುವ ತವಕದಲ್ಲಿ 'ಸಲಾರ್' ಇದೆ.
-
Highest Opening Day Advance Booking Gross For 2023 in India💥💥
— Sacnilk Entertainment (@SacnilkEntmt) December 22, 2023 " class="align-text-top noRightClick twitterSection" data="
1. #Salaar: 48.94 Cr
2. #LEO: 46.36 Cr
3. #Jawan: 40.75 Cr
4. #Animal: 33.97 Cr
5. #Pathaan: 32.01 Cr
">Highest Opening Day Advance Booking Gross For 2023 in India💥💥
— Sacnilk Entertainment (@SacnilkEntmt) December 22, 2023
1. #Salaar: 48.94 Cr
2. #LEO: 46.36 Cr
3. #Jawan: 40.75 Cr
4. #Animal: 33.97 Cr
5. #Pathaan: 32.01 CrHighest Opening Day Advance Booking Gross For 2023 in India💥💥
— Sacnilk Entertainment (@SacnilkEntmt) December 22, 2023
1. #Salaar: 48.94 Cr
2. #LEO: 46.36 Cr
3. #Jawan: 40.75 Cr
4. #Animal: 33.97 Cr
5. #Pathaan: 32.01 Cr
ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಾದ ಜವಾನ್, ಪಠಾಣ್, ಅನಿಮಲ್ ಮತ್ತು ಲಿಯೋ ಸೇರಿದಂತೆ ಹಲವು ಸಿನಿಮಾಗಳಿಗಿಂತ ಮುಂದಿದೆ. ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಶಾರುಖ್ ಖಾನ್ ಅವರ ಡಂಕಿಯೊಂದಿಗೆ ರೇಸ್‌ನಲ್ಲಿದ್ದು, ಸರಿಯಾದ ಪ್ರಮಾಣದಲ್ಲಿ ಸ್ಕ್ರೀನ್ಗಳು ಲಭ್ಯವಾಗಿಲ್ಲ ಎಂಬ ವದಂತಿಗಳ ಹೊರತಾಗಿಯೂ, 'ಸಲಾರ್' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ. ಮೊದಲ ದಿನದ ಮುಂಗಡ ಟಿಕೆಟ್ ಬುಕಿಂಗ್ ವಿಚಾರದಲ್ಲಿ 'ಸಲಾರ್' ಬರೋಬ್ಬರಿ 48.94 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಈ ಅಡ್ವಾನ್ಸ್ ಟಿಕೆಟ್ ಅಂಕಿ-ಅಂಶ 2023ರ ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಕ್ಕುವ ಸೂಚನೆ ಕೊಟ್ಟಿದೆ. 48.94 ಕೋಟಿ ರೂಪಾಯಿ ಆನ್ಲೈನ್ ವ್ಯವಹಾರದ ಮಾಹಿತಿ. ಈ ಅಂಕಿ ಅಂಶ ಏರಿ, ಫೈನಲ್ ಕಲೆಕ್ಷನ್ ನಾಳೆ ಮುಂಜಾನೆ ಗೊತ್ತಾಗಲಿದೆ.
- " class="align-text-top noRightClick twitterSection" data="">
2023ರ ಹಿಟ್ ಸಿನಿಮಾಗಳ ದಾಖಲೆ: ಸಿದ್ಧಾರ್ಥ್ ಆನಂದ್ ನಿರ್ದೇಶನದ, ಎಸ್ಆರ್ಕೆ ಅಭಿನಯದ ಪಠಾಣ್ ಸಿನಿಮಾ ತನ್ನ ಮೊದಲ ದಿನದ ಆನ್ಲೈನ್ ವ್ಯವಹಾರದಲ್ಲಿ 32.01 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಸೃಷ್ಟಿಸಿತ್ತು. ಶಾರುಖ್ ಖಾನ್ ಅವರ ಮತ್ತೊಂದು ಸಿನಿಮಾ 'ಜವಾನ್' ಈ ಅಂಕಿ ಅಂಶವನ್ನು ಮೀರಿಸಿತ್ತು. ಅಡ್ವಾನ್ಸ್ ಟಿಕೆಟ್ ವ್ಯವಹಾರದಲ್ಲಿ 40.75 ಕೋಟಿ ರೂ.ಗಳನ್ನು ಗಳಿಸಿತ್ತು. ಇನ್ನೂ ರಣ್ಬೀರ್ ಕಪೂರ್ ಅವರ ಇತ್ತೀಚಿನ ಬ್ಲಾಕ್ಬಸ್ಟರ್ ಸಿನಿಮಾ ಅನಿಮಲ್ ಮುಂಗಡ ಟಿಕೆಟ್ ಬುಕಿಂಗ್ ವ್ಯವಹಾರದಲ್ಲಿ 33.97 ಕೋಟಿ ರೂ.ನ ವ್ಯವಹಾರ ನಡೆಸಿ ಅದ್ಭುತ ಆರಂಭ ಪಡೆದಿತ್ತು. ಇನ್ನೂ ಸೌತ್ ಸೂಪರ್ ಸ್ಟಾರ್ ವಿಜಯ್ ಅವರ ಇತ್ತೀಚಿನ ಲಿಯೋ ಕೂಡ ಅದ್ಭುತ ಯಶಸ್ಸನ್ನು ಕಂಡಿತ್ತು. ಮುಂಗಡ ಟಿಕೆಟ್ ಬುಕಿಂಗ್‌ನಲ್ಲಿ ಮೊದಲ ದಿನಕ್ಕೆ 46.36 ಕೋಟಿ ರೂ. ಗಳಿಸಿತ್ತು. ಇಂದು ಬಿಡುಗಡೆ ಆಗಿರುವ 'ಸಲಾರ್' ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಕಲೆಕ್ಷನ್ - ಬರೋಬ್ಬರಿ 48.94 ಕೋಟಿ ರೂಪಾಯಿ.
ಇದನ್ನೂ ಓದಿ: ಚಿತ್ರಮಂದಿರಗಳಲ್ಲಿ 'ಸಲಾರ್' ಅಬ್ಬರ: ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ
ಸಲಾರ್ ಉತ್ತರ ಅಮೆರಿಕದಲ್ಲಿ ಈಗಾಗಲೇ ಉತ್ತಮ ಆರಂಭ ಪಡೆದ 2023ರ ಟಾಪ್ 10 ಭಾರತೀಯ ಸಿನಿಮಾಗಳಲ್ಲಿ ಒಂದಾಗಿದೆ. ಯುಎಸ್ಎ ಮತ್ತು ಕೆನಡಾದಲ್ಲಿ ಸುಮಾರು $1.51 ಮಿಲಿಯನ್ ಕಲೆಕ್ಷನ್ನೊಂದಿಗೆ ಶಾರುಖ್ ಖಾನ್ ಅವರ ಪಠಾಣ್ ಅನ್ನು ಮೀರಿಸಿದೆ. ಸ್ಯಾಕ್ನಿಲ್ಕ್ ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರಭಾಸ್ ಅಭಿನಯದ ಸಲಾರ್ ಮೊದಲ ದಿನ 100 ಕೋಟಿ ರೂ. ಸಂಪಾದಿಸುವ ಮೂಲಕ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಿದೆ.
-
#Salaar Hyderabad City Advance: 💥💥
— Sacnilk Entertainment (@SacnilkEntmt) December 22, 2023 " class="align-text-top noRightClick twitterSection" data="
12.11 Cr [1120 shows]☑️
All time highest in our record but At the time of #RRR, tracking was less.
">#Salaar Hyderabad City Advance: 💥💥
— Sacnilk Entertainment (@SacnilkEntmt) December 22, 2023
12.11 Cr [1120 shows]☑️
All time highest in our record but At the time of #RRR, tracking was less.#Salaar Hyderabad City Advance: 💥💥
— Sacnilk Entertainment (@SacnilkEntmt) December 22, 2023
12.11 Cr [1120 shows]☑️
All time highest in our record but At the time of #RRR, tracking was less.
ಇದನ್ನೂ ಓದಿ: 'ಸಲಾರ್' ಸದ್ದು: ಪ್ರೇಕ್ಷಕರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಲಾಠಿ ಚಾರ್ಜ್ ವಿಡಿಯೋ
ತೆಲಂಗಾಣದಲ್ಲಿ ಬಂದ ಬಹುಬೇಡಿಕೆಯನ್ನು ಪೂರೈಸುವ ಸಲುವಾಗಿ ಮಧ್ಯರಾತ್ರಿ 1 ಗಂಟೆ ಮತ್ತು ಮುಂಜಾನೆ 6 ಗಂಟೆಯ ಶೋಗಳಿಗೂ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದ ನೆಟ್ಟಿಗರು ಸದ್ಯ ಕಲೆಕ್ಷನ್ ಮೇಲೆ ತಮ್ಮ ಗಮನ ಹರಿಸಿದ್ದಾರೆ. ಪ್ರಭಾಸ್ ಜೊತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ.